Coal Crisis: ಕರ್ನಾಟಕದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ: ಸುನಿಲ್ ಕುಮಾರ್ ಹೇಳಿಕೆ

V Sunil Kumar: ಮುಂದಿನ ವಾರದಲ್ಲಿ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಾಗಲಿದೆ. ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. 

Coal Crisis: ಕರ್ನಾಟಕದಲ್ಲಿ ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ: ಸುನಿಲ್ ಕುಮಾರ್ ಹೇಳಿಕೆ
ಸುನಿಲ್ ಕುಮಾರ್


ದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರನ್ನು ಭೇಟಿಯಾಗಿದ್ದೇನೆ. ಕರ್ನಾಟಕ ರಾಜ್ಯದಲ್ಲಿ ಕಲ್ಲಿದ್ದಲಿನ ಕೊರತೆ ಉಂಟಾಗಿತ್ತು. 12 ರೇಕ್​ಗಳಲ್ಲಿ ಕೇಂದ್ರ ಸರಕಾರ ಕಲ್ಲಿದ್ದಲು ಸರಬರಾಜು ಮಾಡಬೇಕಿತ್ತು. ಗಣಿಗಳಲ್ಲಿ ಮಳೆ‌ ಹೆಚ್ಚಾದ ಕಾರಣ ಉತ್ಪಾದನೆ ಕೊರತೆ ಸೃಷ್ಟಿಯಾಗಿದೆ. 8 ರೇಕ್​ಗಳಲ್ಲಿ ಸದ್ಯ ಕೇಂದ್ರ ಸರಕಾರ ಕಲ್ಲಿದ್ದಲು ಸರಬರಾಜು ಮಾಡುತ್ತಿದೆ. ಮುಂದಿನ ವಾರದಲ್ಲಿ 2 ರೇಕ್ ಕಲ್ಲಿದ್ದಲು ಬರಲಿದೆ ಎಂದು ಕರ್ನಾಟಕ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ವಿಚಾರವಾಗಿ ನವದೆಹಲಿಯಲ್ಲಿ ಟಿವಿ9ಗೆ ಇಂಧನ ಸಚಿವ ವಿ. ಸುನೀಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಪವರ್ ಸರಬರಾಜು ಕೊರತೆಯಾಗಿಲ್ಲ. ಕಲ್ಲಿದ್ದಲು ಕೊರತೆಯಿಂದ ಸ್ಥಾವರಗಳು ಬಂದ್ ಆಗಿಲ್ಲ. ಎರಡು ಸ್ಥಾವರಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿದೆ ಅಷ್ಟೇ. ಮೂರು ನಾಲ್ಕು ದಿನಗಳಲ್ಲಿ ಸಮಸ್ಯೆ‌ ಬಗೆಹರಿಯಲಿದೆ ಎಂದು ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ. ಮುಂದಿನ ವಾರದಲ್ಲಿ ರಾಜ್ಯಕ್ಕೆ ಕಲ್ಲಿದ್ದಲು ಪೂರೈಕೆಯಾಗಲಿದೆ. ವಿದ್ಯುತ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಹೇಳಿದ್ದಾರೆ. (ಒಂದು ರೇಕ್ ಅಂದರೆ 60‌ ಸಾವಿರ ಟನ್ ಕಲ್ಲಿದ್ದಲು ಆಗಿದೆ)

ಕೇಂದ್ರ ಸರ್ಕಾರದಿಂದ ಮಹತ್ವದ ಆದೇಶ
ಜಾಗತಿಕ ಮಟ್ಟದಲ್ಲೇ ಕಲ್ಲಿದ್ದಲು ಕೊರತೆ ಉಂಟಾಗಿರುವುದರಿಂದ ಬೇಡಿಕೆ ವಿಪರೀತ ಹೆಚ್ಚಾಗಿದೆ. ಇದರಿಂದ ಭಾರತ ಕೂಡ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವವಾದ ಆದೇಶವೊಂದನ್ನು ನೀಡಲಾಗಿದೆ. ಇಲ್ಲಿಯ ತನಕ ಸ್ವಂತ ಬಳಕೆಗಾಗಿ (ಇವುಗಳನ್ನು Captive Mines ಎನ್ನಲಾಗುತ್ತದೆ) ಕಲ್ಲಿದ್ದಲು ಬಳಸುತ್ತಿದ್ದ ಅವುಗಳು ಇನ್ನು ಮುಂದೆ ವಾರ್ಷಿಕ ಉತ್ಪಾದನೆಯಲ್ಲಿ ಶೇಕಡಾ 50ರಷ್ಟನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಕಲ್ಲಿದ್ದಲು ಸಚಿವಾಲಯದಿಂದ ಅಕ್ಟೋಬರ್ 5ನೇ ತಾರೀಕಿನ ಮಂಗಳವಾರದಂದು ಘೋಷಣೆ ಮಾಡಲಾಗಿದೆ. ಅಂದ ಹಾಗೆ, ಭಾರತದಲ್ಲಿ ಈ ಹಿನ್ನೆಲೆಯಲ್ಲಿ ವಿವಿಧ ಸಿಮೆಂಟ್​ ಕಂಪೆನಿಗಳು ಬೆಲೆ ಹೆಚ್ಚಳ ಮಾಡಿದ್ದು, ಶೇ 20ಕ್ಕೂ ಹೆಚ್ಚು ದರ ಮೇಲೇರಿದೆ. ಇದೇ ವೇಳೆ ಕಟ್ಟಡ ನಿರ್ಮಾಣ ಸೇರಿದಂತೆ ಇತರ ಉದ್ದೇಶಗಳಿಗೆ ಬಳಸುವ ಉಕ್ಕಿನ ದರ ಕೂಡ ಹೆಚ್ಚಳವಾಗಿದೆ.

ಕಲ್ಲಿದ್ದಲು ಸಚಿವಾಲಯವು ಹೇಳಿಕೆಯನ್ನು ನೀಡಿ, ಕಲ್ಲಿದ್ದಲು ಅಥವಾ ಲಿಗ್ನೈಟ್ ಮಾರಾಟದ ದೃಷ್ಟಿಯಿಂದ ಖನಿಜ ವಿನಾಯಿತಿ ನಿಯಮಾವಳಿ, 1960 ಇದಕ್ಕೆ ತಿದ್ದುಪಡಿ ತರಲಾಗಿದೆ. ಭೋಗ್ಯಕ್ಕೆ ಪಡೆದವರು ಕ್ಯಾಪ್ಟಿವ್ ಗಣಿಗಳಿಗೆ ಹೆಚ್ಚುವರಿಯಾಗಿ ಮೊತ್ತವನ್ನು ಪಾವತಿ ಮಾಡಿ, ಒಂದು ಹಣಕಾಸು ವರ್ಷದಲ್ಲಿ ಉತ್ಪಾದನೆ ಮಾಡಿದ ಶೇ 50ರ ತನಕದ ಒಟ್ಟಾರೆ ಕಲ್ಲಿದ್ದಲು ಅಥವಾ ಲಿಗ್ನೈಟ್, ಅದು ಕೂಡ ಆ ಗಣಿಗೆ ಜೋಡಣೆಯಾದ ಘಟಕ ಸಂಪೂರ್ಣ ಬಳಕೆ ಅಗತ್ಯಗಳು ಪೂರೈಸಿದ ಮೇಲೆ ಮಾರಾಟ ಮಾಡಬಹುದು ಎಂದು ತಿಳಿಸಲಾಗಿದೆ.

ಇದನ್ನೂ ಓದಿ: ಕಲ್ಲಿದ್ದಲು ಕೊರತೆ: ಕರ್ನಾಟಕ ರಾಜ್ಯದ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ- ಸುನಿಲ್ ಕುಮಾರ್

ಇದನ್ನೂ ಓದಿ: Coal Crisis: ದೇಶದ ಕಲ್ಲಿದ್ದಲು ಸಂಗ್ರಹ 4 ದಿನಗಳಿಗೆ ಇಳಿಕೆ; ಭಾರತದಲ್ಲೂ ಎದುರಾಗುತ್ತಾ ವಿದ್ಯುತ್ ಬಿಕ್ಕಟ್ಟು?

Read Full Article

Click on your DTH Provider to Add TV9 Kannada