ಗ್ರಾಮ ಪಂಚಾಯಿತಿ ಚುನಾವಣೆ ವೈಷಮ್ಯ; ರೈತನ ಜೋಳದ ತೆನೆ ಕಳವು ಮಾಡಿದ ಕಿಡಿಗೇಡಿಗಳು
ಗ್ರಾಮದ ಮಂಜುನಾಥ್ ಎಂಬುವರು, ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಸಂಬಂಧಿಯ ಪರ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಕೆಲವರು, ಮಂಜುನಾಥ್ ಹೊಲಕ್ಕೆ ನುಗ್ಗಿ ಜೋಳದ ತೆನೆಗಳನ್ನು ಕಳವು ಮಾಡಿದ್ದಾರೆ.
ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸಂಬಂಧಿಯೋರ್ವರ ಪರ ಪ್ರಚಾರ ಮಾಡಿದ್ದ ವ್ಯಕ್ತಿಯ ಜಮೀನಿನಲ್ಲಿದ್ದ ಜೋಳವನ್ನು ಕಳವು ಮಾಡಿದ ಘಟನೆ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಂಜುನಾಥ್ ಎಂಬುವರು, ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ತಮ್ಮ ಸಂಬಂಧಿಯ ಪರ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ಕೆಲವರು, ಮಂಜುನಾಥ್ ಹೊಲಕ್ಕೆ ನುಗ್ಗಿ ಜೋಳದ ತೆನೆಗಳನ್ನು ಕಳವು ಮಾಡಿದ್ದಾರೆ. ಹಾಗೇ ಉಳಿದ ಜೋಳದ ಗಿಡಗಳನ್ನೂ ನಾಶ ಮಾಡಿದ್ದಾರೆ. ಕಳೆದ ಭಾನುವಾರ ಘಟನೆ ನಡೆದಿದೆ ಎಂದು ಹೇಳಿರುವ ಮಂಜುನಾಥ್, ಚಿಗಟೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ಆದಷ್ಟು ಬೇಗ ಹುಡುಕಿ, ನ್ಯಾಯ ಒದಗಿಸಿಕೊಡಿ ಎಂದು ಆಗ್ರಹಿಸಿದ್ದಾರೆ.
ರಾಜಕೀಯಕ್ಕೆ ಗುಡ್ಬೈ ಹೇಳಿದ ರಜನಿಕಾಂತ್! ‘ರಾಜಕೀಯಕ್ಕೆ ಇಳಿಯದೆಯೂ ನಾನು ಜನರ ಸೇವೆ ಮಾಡಬಲ್ಲೆ..’