Cyber Crime ಕೇಂದ್ರ ಸರ್ಕಾರಿ ಯೋಜನೆ ಹೆಸರಲ್ಲಿ ಹಾಕಿದ್ರು ನಾಮ.. ಹುಬ್ಬಳ್ಳಿ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ದೋಖಾ

| Updated By: ಆಯೇಷಾ ಬಾನು

Updated on: Jul 07, 2021 | 8:33 AM

ಆನ್ಲೈನ್ ಮಾರ್ಕೆಟಿಂಗ್, ಬ್ಯಾಂಕ್ಗಳ ಹೆಸರಲ್ಲಿ ವಂಚನೆ ಮಾಡ್ತಿದ್ದ ಸೈಬರ್ ವಂಚಕರು ಈಗ ಮತ್ತೊಂದು ದಾರಿ ಹಿಡಿದಿದ್ದಾರೆ. ಸ್ವಲ್ಪ ಯಾಮಾರಿದ್ರೂ ನಿಮ್ಮ ಅಕೌಂಟ್ಗೆ ಕನ್ನ ಹಾಕಿ. ನಿಮ್ಮಿಂದ ದುಡ್ಡು ಹಾಕಿಸಿಕೊಂಡು ವಂಚನೆ ಮಾಡ್ತಿದ್ದಾರೆ. ಅದು ಹೇಗೆ ಅನ್ನೋದನ್ನ ಇಲ್ಲಿ ಓದಿ.

Cyber Crime ಕೇಂದ್ರ ಸರ್ಕಾರಿ ಯೋಜನೆ ಹೆಸರಲ್ಲಿ ಹಾಕಿದ್ರು ನಾಮ.. ಹುಬ್ಬಳ್ಳಿ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ದೋಖಾ
ಸೈಬರ್ ಕ್ರೈಂ ಠಾಣೆ
Follow us on

ನಾವು ಬ್ಯಾಂಕ್​ನಿಂದ ಕರೆ ಮಾಡ್ತಿದ್ದೇವೆ.. ನಿಮಗೆ ಓಟಿಪಿ ಬಂದಿದ್ಯಾ.. ಓಟಿಪಿ ಬಂದಿದ್ರೆ ಹೇಳಿ.. ನಿಮಗೆ ಸ್ಪೆಷಲ್ ಆಫರ್ ಇದೆ.. ಬೇಕಾದ್ರೆ ತಗೊಳ್ಳಿ.. ಹಾಗೆ ಹೀಗೆ ಅಂತಾ ಪೂಸಿ ಹೊಡೆದು ನಿಮ್ಮ ಅಕೌಂಟ್ಗೆ ಕನ್ನ ಹಾಕ್ತಿದ್ದ ಸೈಬರ್ ಖದೀಮರು ಈಗ ಹೊಸ ಹಾದಿ ಹಿಡಿದಿದ್ದಾರೆ.

ಹುಬ್ಬಳ್ಳಿಯಲ್ಲಿ ಸೈಬರ್ ವಂಚಕರು ಫುಲ್ ಆ್ಯಕ್ಟಿವ್ ಆಗಿದ್ದು ಕೇಂದ್ರ ಸರ್ಕಾರ ಪುನರ್ಬಳಕೆ ಇಂಧನ ಸಚಿವಾಲಯದ ಹೆಸರಲ್ಲಿ ಧೋಖಾ ಎಸಗಿದ್ದಾರೆ. ಸೋಲಾರ್ ಪ್ಯಾನಲ್ ಚೈನ್ ಲಿಂಕ್ ಅನ್ನೋ ನಕಲಿ ಯೋಜನೆ ಸೃಷ್ಟಿಸಿ ವ್ಯಕ್ತಿಯೊಬ್ಬರಿಂದ ಸುಮಾರು 3 ಲಕ್ಷ 38 ಸಾವಿರ ರೂಪಾಯಿ ಹೂಡಿಕೆ ಮಾಡಿಸಿ, ವಂಚಿಸಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಮೂಲಕ ಪರಿಚಯವಾಗಿದ್ದ. ಪ್ರಧಾನಿ ಮೋದಿ ಫೋಟೋ ಇರೋ ವೆಬ್ಸೈಟ್ ಸೃಷ್ಟಿಸಿ, ಅದರಲ್ಲಿ ವಿವಿಧ ಹೂಡಿಕೆ ಸ್ಕೀಂಗಳ ಬಗ್ಗೆ ಉಲ್ಲೇಖ ಮಾಡಿದ್ದ. ಇದನ್ನ ನಂಬಿ ಮೊದಲಿಗೆ 1,516 ರೂಪಾಯಿ ಹೂಡಿದ್ದಾರೆ. ಆರಂಭದಲ್ಲಿ ರಿಟರ್ನ್ಸ್ ನೀಡಿ ವಿಶ್ವಾಸ ಮೂಡಿಸಿದ್ದಾರೆ. ಇದರಿಂದ ಪ್ರೇರಿತನಾದ ದೂರುದಾರ ಪರಿಚಯಸ್ಥರಿಂದಲೂ ಹೂಡಿಕೆ ಮಾಡಿಸಿ ಮೋಸ ಹೋಗಿದ್ದಾನೆ.

ದಿನ ಕಳೆದಂತೆ ಸ್ಕೀಂಗಳ ಪ್ರಯೋಜನ ಲಭಿಸದೇ ಇದ್ದಾಗ ಹೂಡಿಕೆದಾರರು ಸಂಪರ್ಕಕ್ಕೆ ಯತ್ನಿಸಿದ್ದಾರೆ. ವಂಚಕರು ಸಂಪರ್ಕಕ್ಕೆ ಸಿಗದೇ ಇದ್ದಾಗ, ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾರ್ವಜನಿಕರು ಈ ರೀತಿ ಮೋಸ ಹೋಗಬಾರದು. ಒಂದು ವೇಳೆ ಮೋಸದ ಜಾಲಕ್ಕೆ ಬಲಿಯಾಗಿದ್ರೆ, ಸೂಕ್ತ ದಾಖಲೆಗಳೊಂದಿಗೆ ದೂರು ನೀಡುವಂತೆ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ.

ಸೈಬರ್ ವಂಚಕರ ಜಾಲಕ್ಕೆ ವಿದ್ಯಾವಂತರೇ ಬಲಿಯಾಗ್ತಿದ್ದಾರೆ. ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಂಚನೆ ಮಾಡೋರು ಇರ್ತಾರೆ ಅಂತಾ ಗೊತ್ತಿದ್ರೂ, ವಂಚಕರ ವಂಚನೆಯ ಜಾಲದಲ್ಲಿ ಸಿಲುಕಿ ಮೋಸ ಹೋಗ್ತಿರೋದು ಮಾತ್ರ ವಿಪರ್ಯಾಸವೇ ಸರಿ.

ಇದನ್ನೂ ಓದಿ: ಸಿಸಿಬಿ ನಡೆಸಿದ ಕಾರ್ಯಚರಣೆಯಲ್ಲಿ ಇಬ್ಬರು ಸೈಬರ್ ಕ್ರಿಮಿಗಳು ಸೆರೆ