ಸಿಸಿಬಿ ನಡೆಸಿದ ಕಾರ್ಯಚರಣೆಯಲ್ಲಿ ಇಬ್ಬರು ಸೈಬರ್ ಕ್ರಿಮಿಗಳು ಸೆರೆ

ಬಂಧಿತ ಆರೋಪಿಗಳಿಗೆ ಉಗ್ರ ಸಂಘಟನೆಯ ಜೊತೆ ನಂಟಿದೆ ಎಂಬ ಮಾಹಿತಿ ತಿಳಿದುಬಂದಿದ್ದು, 10 ರುಪಾಯಿ ಕಾಲ್ 10 ಪೈಸೆಗೆ ಕನ್ವರ್ಟ್ ಮಾಡುತ್ತಿದ್ದರು. ಆರೋಪಿಗಳು ದೇಶದ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ಟೆಕ್ನಾಲಜಿ ದುರುಪಯೋಗ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಸಿಸಿಬಿ ನಡೆಸಿದ ಕಾರ್ಯಚರಣೆಯಲ್ಲಿ ಇಬ್ಬರು ಸೈಬರ್ ಕ್ರಿಮಿಗಳು ಸೆರೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: sandhya thejappa

Updated on: Jun 09, 2021 | 5:15 PM

ಬೆಂಗಳೂರು: ಸಿಮ್ ಕಿಟ್ ಕೇಸ್​ನಲ್ಲಿ ಸಿಸಿಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಐಎಸ್​ಡಿ ಕಾಲ್ ಕನೆಕ್ಟ್ ಮಾಡುತ್ತಿದ್ದ ಶಂಕಿತ ಆರೋಪಿಗಳು ಬಂಧನಕ್ಕೊಳಗಾಗಿದ್ದಾರೆ. ಸೇನೆ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಸೈಬರ್ ಕ್ರಿಮಿಗಳನ್ನ ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳಿಗೆ ಉಗ್ರ ಸಂಘಟನೆಯ ಜೊತೆ ನಂಟಿದೆ ಎಂಬ ಮಾಹಿತಿ ತಿಳಿದುಬಂದಿದ್ದು, 10 ರುಪಾಯಿ ಕಾಲ್ 10 ಪೈಸೆಗೆ ಕನ್ವರ್ಟ್ ಮಾಡುತ್ತಿದ್ದರು. ಆರೋಪಿಗಳು ದೇಶದ ಭದ್ರತೆಗೆ ಧಕ್ಕೆ ತರುವ ರೀತಿಯಲ್ಲಿ ಟೆಕ್ನಾಲಜಿ ದುರುಪಯೋಗ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಗಾಂಜಾ ಸಾಗಿಸುತ್ತಿದ್ದ ಕಂಟೇನರ್ ವಶಕ್ಕೆ ಹೈದರಾಬಾದ್: ವಿಶಾಖಪಟ್ಟಣಂನಿಂದ ಉತ್ತರಪ್ರದೇಶಕ್ಕೆ ಗಾಂಜಾ ಸಾಗಿಸುತ್ತಿದ್ದ ಕಂಟೇನರ್​ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಂಟೈನರ್​ನಲ್ಲಿ ಡ್ರೈವರ್ ಹಿಂಭಾಗದಲ್ಲಿ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ಸೆಲ್ಫ್ ಮೂಲಕ ಗಾಂಜಾ ಸಾಗಿಸುತ್ತಿದ್ದರು. ಈ ವೇಳೆ ವಿಶಾಖಪಟ್ಟಣಂ ಪೊಲೀಸರು ಚಾಲಕ, ಕ್ಲೀನರ್​ನನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಕಂಟೇನರ್ ಮಾಲೀಕ ಹಾಗೂ ಗಾಂಜಾ ಸ್ಮಗ್ಲರ್​ಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ವಿಶಾಖಪಟ್ಟಣಂ ಸೌತ್ ಎಸಿಪಿ ವೆಂಕಟರಾವ್ ಮಾಹಿತಿ ನೀಡಿದ್ದಾರೆ.

ಟಿಪ್ಪರ್ ಪಲ್ಟಿ, ಚಾಲಕನಿಗೆ ಗಾಯ ತುಮಕೂರು: ನಿಯಂತ್ರಣ ತಪ್ಪಿ ಟಿಪ್ಪರ್ ಪಲ್ಟಿಯಾದ ಪರಿಣಾಮ ಚಾಲಕನಿಗೆ ಗಾಯವಾಗಿದೆ. ಈ ಘಟನೆ ಜಿಲ್ಲೆಯ ಗುಬ್ಬಿ ತಾಲೂಕು ವ್ಯಾಪ್ತಿ ಸಂಭವಿಸಿದೆ. ಅಪಘಾತದಿಂದ 1 ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ ಆಗಿತ್ತು. ಟ್ರಾಫಿಕ್ ನಿಯಂತ್ರಿಸಲು ಗುಬ್ಬಿ ಪೊಲೀಸರು ಹರಸಾಹಸಪಟ್ಟರು.

ಇದನ್ನೂ ಓದಿ

ವಿಮಾನ ಅಪಹರಿಸಿ, ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗ್ತೇನೆ ಎಂದು ಬೆದರಿಕೆ ಹಾಕಿದ್ದವ ಅರೆಸ್ಟ್​

ಕಾಂಗ್ರೆಸ್‌ ಲಸಿಕೆ ಪ್ರಸ್ತಾವನೆ ತಿರಸ್ಕರಿಸಿದ ರಾಜ್ಯ ಸರ್ಕಾರ; ಸಿದ್ದರಾಮಯ್ಯಗೆ ಪತ್ರ ಬರೆದು ಸೂಚನೆ

(CCB police have arrested two men who were abusing the technology)