Karnataka Dams Water Level: ಮುಂಗಾರು ಒಂಚೂರು ಕ್ಷೀಣ, ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ
Karnataka Reservoirs water level: ರಾಜ್ಯದಲ್ಲಿ ಕೊಂಚ ಕ್ಷೀಣಿಸಿದ್ದ ಮುಂಗಾರು ಮಳೆ ಮತ್ತೆ ಜೋರಾಗುತ್ತಿದೆ. ಬಹುತೇಕ ಕಡೆ ಒಳ್ಳೆಯ ಮಳೆಯಾಗಿದೆ. ಆದರೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಲು ಇನ್ನೂ ಸಾಕಷ್ಟು ಮಳೆಯಾಗಬೇಕಿದೆ. ಈ ಮೊದಲು ಜುಲೈ ಮಧ್ಯ ಭಾಗದಲ್ಲಿ ರಾಜ್ಯದ ಜಲಾಶಯಗಳು ತುಂಬುತ್ತಿದ್ದವು.
ಬೆಂಗಳೂರು: ರಾಜ್ಯದಲ್ಲಿ ಕೊಂಚ ಕ್ಷೀಣಿಸಿದ್ದ ಮುಂಗಾರು ಮಳೆ ಮತ್ತೆ ಜೋರಾಗುತ್ತಿದೆ. ಬಹುತೇಕ ಕಡೆ ಒಳ್ಳೆಯ ಮಳೆಯಾಗಿದೆ. ಆದರೆ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಏರಲು ಇನ್ನೂ ಸಾಕಷ್ಟು ಮಳೆಯಾಗಬೇಕಿದೆ. ಈ ಮೊದಲು ಜುಲೈ ಮಧ್ಯ ಭಾಗದಲ್ಲಿ ರಾಜ್ಯದ ಜಲಾಶಯಗಳು ತುಂಬುತ್ತಿದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಮುಂಗಾರು ಹೆಚ್ಚಾಗುತ್ತಿದೆ. ಹಾಗಾಗಿ ಈ ಬಾರಿಯೂ ಮಳೆ ಚೆನ್ನಾಗಿ ಆದರೆ, ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಜಲಾಶಯಗಳು ತುಂಬಿತುಳುಕಲಿವೆ. ಆದರೆ ಸದ್ಯಕ್ಕೆ ಕೃಷಿ ನೀರಾವರಿ ಮತ್ತು ಕುಡಿಯುವ ನೀರಿಗೆ ಯಾವುದೇ ಬಾಧಕವಿಲ್ಲ.
ರಾಜ್ಯದ ಅತಿ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಸೇರಿದಂತೆ ಇತರೆ ಪ್ರಮುಖ ಜಲಾಶಯಗಳಾದ ಕೆಆರ್ಎಸ್, ಕಬಿನಿ, ಹೇಮಾವತಿ, ಹಾರಂಗಿ, ಸೂಪಾ, ತುಂಗಭದ್ರಾ, ಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.
ಕಾವೇರಿ ಕಣಿವೆ ಭಾಗದ ಜಲಾಶಯಗಳು:
1) ಕೆಆರ್ಎಸ್ ಜಲಾಶಯ | KRS Dam ಇಂದಿನ ನೀರಿನ ಮಟ್ಟ: 91 ಅಡಿ ಗರಿಷ್ಠ ಸಾಮರ್ಥ್ಯ: 124.80 ಅಡಿ
2) ಹಾರಂಗಿ ಜಲಾಶಯ | Harangi Dam ಇಂದಿನ ನೀರಿನ ಮಟ್ಟ: 2842 ಅಡಿ ಗರಿಷ್ಠ ಸಾಮರ್ಥ್ಯ: 2859 ಅಡಿ
3) ಹೇಮಾವತಿ ಜಲಾಶಯ | Hemavathi Dam ಇಂದಿನ ನೀರಿನ ಮಟ್ಟ: 2896 ಅಡಿ ಗರಿಷ್ಠ ಸಾಮರ್ಥ್ಯ: 2922 ಅಡಿ
4) ಕಬಿನಿ ಜಲಾಶಯ | Kabini Dam ಇಂದಿನ ನೀರಿನ ಮಟ್ಟ: 2276 ಅಡಿ ಗರಿಷ್ಠ ಸಾಮರ್ಥ್ಯ: 2284 ಅಡಿ
ಜಲ ವಿದ್ಯುತ್ ಅಣೆಕಟ್ಟೆಗಳು:
5) ಲಿಂಗನಮಕ್ಕಿ ಜಲಾಶಯ | Linganamakki Dam ಇಂದಿನ ನೀರಿನ ಮಟ್ಟ: 1785 ಅಡಿ ಗರಿಷ್ಠ ಸಾಮರ್ಥ್ಯ: 1819 ಅಡಿ
6) ಸೂಪಾ ಜಲಾಶಯ | Supa Dam ಇಂದಿನ ನೀರಿನ ಮಟ್ಟ: 538 ಮೀಟರ್ ಗರಿಷ್ಠ ಸಾಮರ್ಥ್ಯ: 564 ಮೀಟರ್
ಕೃಷ್ಣಾ ನದಿ ಭಾಗದ ಜಲಾಶಯಗಳು:
7) ತುಂಗಾಭದ್ರಾ ಜಲಾಶಯ | Tungabhadra Dam ಇಂದಿನ ನೀರಿನ ಮಟ್ಟ: 1633 ಅಡಿ ಗರಿಷ್ಠ ಸಾಮರ್ಥ್ಯ: 1610 ಅಡಿ
8) ಭದ್ರಾ ಜಲಾಶಯ | Bhadra Dam ಇಂದಿನ ನೀರಿನ ಮಟ್ಟ: 156 ಅಡಿ ಗರಿಷ್ಠ ಸಾಮರ್ಥ್ಯ: 186 ಅಡಿ
9) ಮಲಪ್ರಭಾ ಜಲಾಶಯ | Malaprabha Dam ಇಂದಿನ ನೀರಿನ ಮಟ್ಟ: 2063 ಅಡಿ ಗರಿಷ್ಠ ಸಾಮರ್ಥ್ಯ: 2063 ಅಡಿ
10) ಘಟಪ್ರಭಾ ಜಲಾಶಯ | Ghataprabha Dam ಇಂದಿನ ನೀರಿನ ಮಟ್ಟ: 2136 ಅಡಿ ಗರಿಷ್ಠ ಸಾಮರ್ಥ್ಯ: 2175 ಅಡಿ
11) ನಾರಾಯಣಪುರ ಜಲಾಶಯ |Narayanpur Dam ಇಂದಿನ ನೀರಿನ ಮಟ್ಟ: 491.03 ಮೀಟರ್ ಗರಿಷ್ಠ ಸಾಮರ್ಥ್ಯ: 491 ಮೀಟರ್
12) ಆಲಮಟ್ಟಿ ಜಲಾಶಯ | Almatti Dam ಇಂದಿನ ನೀರಿನ ಮಟ್ಟ: 518 ಮೀಟರ್ ಗರಿಷ್ಠ ಸಾಮರ್ಥ್ಯ: 519.69 ಮೀಟರ್
Major Reservoir – Level, Storage, Flows as on 06-07-2021. pic.twitter.com/XuxMIYrbiX
— KSNDMC (@KarnatakaSNDMC) July 6, 2021
(Deficit Monsoon 2021 Karnataka 12 reservoirs and dams water level as on 7th july 2021)