AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ಯಾಂ ಬಿರುಕು ವಿವಾದ; ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾರ್ಗೆಟ್ ಆದ್ರಾ?

ಕಳೆದ ಮೇ ತಿಂಗಳ 7 ರಂದು ಮಂಡ್ಯದ ಜಿ.ಪಂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಸುಮಲತಾ ನಾವು ಎಷ್ಟೆ ಹುಡುಕಾಡಿದ್ರು ಆಕ್ಸಿಜನ್ ಸಿಲಿಂಡರ್ ಸಿಗಲ್ಲ ನಿಮಗೆ ಎಲ್ಲಿಂದ ಸಿಕ್ತಿದೆ ಎಂದು ಬಹಿರಂಗವಾಗಿಯೇ ಮಾತನಾಡಿದ್ರು.

ಡ್ಯಾಂ ಬಿರುಕು ವಿವಾದ; ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾರ್ಗೆಟ್ ಆದ್ರಾ?
ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ
TV9 Web
| Edited By: ಆಯೇಷಾ ಬಾನು|

Updated on: Jul 07, 2021 | 7:34 AM

Share

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನಲ್ಲಿನ ಟಿಎಂ ಹೊಸೂರು ಅರಣ್ಯ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದ ಗಣಿಗಾರಿಗೆ ನಡೀತಿದ್ರು ಸಂಸದೆ ಸುಮಲತಾ ಅಂಬರೀಶ್ ಚೆನ್ನನ‌ಹಳ್ಳಿ, ಹಂಗರ ಹಳ್ಳಿಗೆ ಭೇಟಿ ನೀಡ್ತಿರೋದು ಯಾಕೆ? ಸಂಸದೆ ಸುಮಲತ ಅಂಬರೀಶ್ ನಡೆ ಏನು? ಎಂಬ ಪ್ರಶ್ನೆ ಈಗ ಚರ್ಚೆಗೆ ಗ್ರಾಸವಾಗಿದೆ. ಈ ಪ್ರಶ್ನೆಗೆ ಉತ್ತರ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಟಾರ್ಗೆಟ್ ಆದ್ರಾ? ಎಂಬುವುದು.

ಚೆನ್ನನ‌ಹಳ್ಳಿ, ಹಂಗರ ಹಳ್ಳಿಯ ಎರಡೂ ಕಡೆಗಳಲ್ಲಿ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗೇ ಹೆಚ್ಚಿನ ಸಂಖ್ಯೆಯಲ್ಲಿ ಗಣಿಗಾರಿಕೆ ಮಾಡ್ತಿದ್ದಾರೆ. ಸುಮಲತಾ ಅಂಬರೀಶ್ ಕೊವಿಡ್ ಟೈಂನಲ್ಲಿ ಜಿಲ್ಲೆಗೆ ಆಕ್ಸಿಜನ್ ಸಿಲಿಂಡರ್ ನೀಡೊ ವಿಚಾರದಲ್ಲಿ, ಡ್ಯಾಂ ಬಿರುಕು ಬಿಟ್ಟಿದೆ ಎಂದಾಗ ಮೊದಲು ಪ್ರಶ್ನಿಸಿದ್ದೇ ಶಾಸಕ ರವೀಂದ್ರ ಶ್ರೀಕಂಠಯ್ಯ. ಜಿಲ್ಲಾಡಳಿತಕ್ಕೆ ಸರ್ಕಾರದಿಂದ ನಿಗಧಿಯಾಗಿದ್ದ ಸಿಲಿಂಡರ್ ತಂದು ನಾನೇ ವೈಯಕ್ತಿಕವಾಗಿ ನೀಡ್ತಿದ್ದೀನಿ ಎಂದು ಸುಮಲತಾ ಹೇಳ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ರು.

ಕಳೆದ ಮೇ ತಿಂಗಳ 7 ರಂದು ಮಂಡ್ಯದ ಜಿ.ಪಂನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ್ದ ಸುಮಲತಾ ನಾವು ಎಷ್ಟೆ ಹುಡುಕಾಡಿದ್ರು ಆಕ್ಸಿಜನ್ ಸಿಲಿಂಡರ್ ಸಿಗಲ್ಲ ನಿಮಗೆ ಎಲ್ಲಿಂದ ಸಿಕ್ತಿದೆ ಎಂದು ಬಹಿರಂಗವಾಗಿಯೇ ಮಾತನಾಡಿದ್ರು. ಎಲ್ಲಾ ವಿಚಾರದಲ್ಲೂ ರಾಜಕೀಯ ಮಾಡಲಾಗ್ತಿದೆ ಎಂದು ಹೇಳಿ ಸಭೆಯಿಂದ ಅರ್ಧದಲ್ಲೇ ಸಂಸದೆ ಸುಮಲತಾ ಹೊರ ನಡೆದಿದ್ದರು. ಇದಾದ ನಂತರ ಡ್ಯಾಂ ಬಿರುಕು ಬಿಟ್ಟಿದೆ ಎಂದು ಸುಮಲತಾ ಹೇಳಿಕೆಗೆ ನೀಡಿದ್ದರು. ಈ ಹೇಳಿಕೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಮೇ 30 ರಂದು ಆಕ್ಷೇಪ ವ್ಯಕ್ತಪಡಿಸಿದ್ದ. ಸಂಸದರು ತಮ್ಮ ತಪ್ಪನ್ನ ಮುಚ್ಚಿಕೊಳ್ಳಲು ಪಾಲಿಶ್ ಹೇಳಿಕೆಗಳನ್ನ ನೀಡ್ತಿದ್ದಾರೆ ಎಂದು ಆಕ್ಷೇಪಿಸಿದ್ದರು. ಡ್ಯಾಂ ಬಿರುಕು ಬಿಟ್ಟಿದೆ ಎಂದಿದ್ದವರು ಡ್ಯಾಂ ನೋಡಲು ಹೋಗದೆ ಗಣಿಗಾರಿಕೆ ನಡೆಸ್ತಿರೊ ಸ್ಥಳಕ್ಕೆ ಯಾಕೆ ಭೇಟಿ ನೀಡ್ತಿದ್ದಾರೆ ಎಂದು ನಿನ್ನೆಯೂ ಸಂಸದೆ ಸುಮಲತಾರ ನಡೆಯನ್ನ ರವೀಂದ್ರ ಶ್ರೀಕಂಠಯ್ಯ ಪ್ರಶ್ನಿಸಿದ್ದ.

ಇದನ್ನೂ ಓದಿ: ಕೆ.ಆರ್.ಎಸ್. ಸುತ್ತಮುತ್ತ ಎಲ್ಲಾ ಮೈನಿಂಗ್ ಬಂದ್; ಡ್ಯಾಮ್​ನಲ್ಲಿ ಯಾವುದೇ ಲೀಕೇಜ್ ಇಲ್ಲ, ಆತಂಕ ಬೇಡ – ಗಣಿ ಸಚಿವ ಮುರುಗೇಶ್​ ನಿರಾಣಿ

Follow Us
TV9 Web
TV9 Web

TV9 Kannada

Read More
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
‘ಅಸಹ್ಯವಾಗಿ ಮಾತಾಡ್ತಾರೆ’: ಬಿಗ್ ಬಾಸ್ ಸ್ಪರ್ಧಿಗಳ ಮೇಲೆ ಅವಿನಾಶ್ ಗರಂ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಬಿ.ಸಿ. ರೋಡ್‌ನಲ್ಲಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಅಂಗನವಾಡಿಯಲ್ಲಿ‌ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ ಮಕ್ಕಳು: ಸಚಿವ ಆಶ್ಚರ್ಯ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ಎಇಇ 16 ದಿನದಿಂದ ನಾಪತ್ತೆ: ಮಗನನ್ನು ನೆನೆದು ಬಿಕ್ಕಿ ಬಿಕ್ಕಿ ಅತ್ತ ತಂದೆ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರಾಜ್ಯಕ್ಕೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್​​​ಗೆ​​ 14 ದಿನ ನ್ಯಾಯಾಂಗ ಬಂಧನ
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಸರ್ಕಾರಿ ಆಸ್ಪತ್ರೆಗಳಲ್ಲಿ ಹುಟ್ಟಿದ ಕಂದಮ್ಮಗಳಿಗೆ ಈ ವಿಶೇಷ ವಸ್ತು ಗಿಫ್ಟ್​
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆದ ವಿವಿಧ ತಳಿಯ ಜಾನುವಾರು!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಬೆಂಗಳೂರು ಪಿಂಕ್ ಲೈನ್ ಮೆಟ್ರೋ ಮಾರ್ಗಕ್ಕೆ ಸ್ಥಳೀಯರಿಂದಲೇ ಚಾಲನೆ!
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ
ಚುನಾವಣಾ ಆಯೋಗದ ವಿರುದ್ಧ 84 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಾದಯಾತ್ರೆ