ಹಾಸನ: ತಣ್ಣಗಾಗಿದ್ದ ಕೊರೊನಾ ವೈರಸ್ ಈಗ ಮತ್ತೊಂದು ರೂಪದಲ್ಲಿ ಜನರನ್ನು ಕಾಡುತ್ತಿದೆ. ಬ್ರೇಕ್ ಕೊಟ್ಟು ಮತ್ತೆ ಅಬ್ಬರಿಸುತ್ತಿರುವ ಕೊರೊನಾ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ಪತ್ತೆಯಾಗುತ್ತಿದೆ. ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ವಸತಿ ಶಾಲೆಯ 13 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ಬಂದಿದೆ.
1 ತಿಂಗಳ ಹಿಂದೆ ವಸತಿ ಶಾಲೆಯ ಇಬ್ಬರು ಮಕ್ಕಳಿಗೆ ಕೊರೊನಾ ಸೋಂಕು ತಗುಲಿತ್ತು. ಆಗ ಎಲ್ಲ ವಿದ್ಯಾರ್ಥಿಗಳಿಗೆ ಕೊವಿಡ್ ಟೆಸ್ಟ್ ಮಾಡಲಾಗಿತ್ತು. ಆದರೆ ಹೆಚ್ಚುವರಿಯಾಗಿ ಯಾರಿಗೂ ಸೋಂಕು ತಗುಲಿರಲಿಲ್ಲ. ಕೆಲ ಮಕ್ಕಳಲ್ಲಿ ರೋಗ ಲಕ್ಷಣ ಹಿನ್ನೆಲೆಯಲ್ಲಿ ಈಗ ಮತ್ತೆ ಆರೋಗ್ಯ ಇಲಾಖೆ ಎಲ್ಲ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಿಸಿದೆ. ಈ ವೇಳೆ 200 ಮಕ್ಕಳ ಪೈಕಿ 13 ವಿದ್ಯಾರ್ಥಿಗಳಲ್ಲಿ ಕೊರೊನಾ ದೃಢಪಟ್ಟಿದೆ.
ಆನೇಕಲ್ ಸುತ್ತಮುತ್ತ ಹೆಚ್ಚಾದ ಕೊರೊನಾ ಪ್ರಕರಣಗಳು
ಇನ್ನು ಮತ್ತೊಂದೆಡೆ ಆನೇಕಲ್ ಸುತ್ತಮುತ್ತ ಸೋಂಕು ಉಲ್ಬಣಗೊಂಡಿದೆ. ಒಟ್ಟು 130 ಸಕ್ರಿಯ ಕೊರೊನಾ ಕೇಸ್ಗಳಿದ್ದು 58 ಸೋಂಕಿತರಿಗೆ ಕೊವಿಡ್ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 72 ಸೋಂಕಿತರಿಗೆ ಹೋಂ ಐಸೋಲೇಷನ್ ಮಾಡಿ ನಿಗಾ ಇಡಲಾಗಿದೆ. ಇನ್ನು ಕೊರೊನಾ ಸೋಂಕಿತರಲ್ಲಿ ಬಹುತೇಕರು ವಿದ್ಯಾರ್ಥಿಗಳಾಗಿದ್ದಾರೆ. ಹಾಸ್ಟೆಲ್ಗಳಲ್ಲಿರುವ ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: Coronavirus: ಕೇರಳ, ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದ ಮೂವರಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊರೊನಾ
ಡಿಸೆಂಬರ್ಗೆ ಕೊರೊನಾ 3ನೆಯ ಅಲೆ; ಜನ ಇನ್ನೂ ‘ನಮಗೆ ಬ್ಯಾಡಾ ಕೊರೊನಾ ಲಸಿಕೆ’ ಅಂತಿದ್ದಾರೆ- ಎಚ್ಚರಿಕೆ ಇರಲಿ