ಬೆಟ್ಟಿಂಗ್ ಭೂತಕ್ಕೆ ಓರ್ವ ವ್ಯಕ್ತಿ ಬಲಿ: ಡಿಕೆ ಸುರೇಶ್ ಪರ ಬೆಟ್ಟಿಂಗ್ ಆಡಿದ್ದ ವ್ಯಕ್ತಿ ನೇಣಿಗೆ ಶರಣು
ಬೆಂಗಳೂರು ಗ್ರಾಮಾಂತರ ಲೋಕಸಭೆ ಫಲಿತಾಂಶ ಬೆಟ್ಟಿಂಗ್ ಕಟ್ಟಿ 50 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಹಿನ್ನಲೆ ಓರ್ವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಾಮನಗರ ತಾಲೂಕಿನ ಬಿಡದಿ ಬಳಿ ಕೆಂಚನಗುಪ್ಪೆಯಲ್ಲಿ ಘಟನೆ ನಡೆದಿದೆ. ಡಿ.ಕೆ.ಸುರೇಶ್ ಪರವಾಗಿ 50 ಲಕ್ಷಕ್ಕೂ ಹೆಚ್ಚು ರೂ. ಬೆಟ್ಟಿಂಗ್ ಕಟ್ಟಿ ಶಿವರಾಜ್ ಸೋತಿದ್ದ.
ರಾಮನಗರ, ಜೂನ್ 10: ಬೆಂಗಳೂರು ಗ್ರಾಮಾಂತರ ಲೋಕಸಭೆ ಫಲಿತಾಂಶ ಬೆಟ್ಟಿಂಗ್ (betting) ಕಟ್ಟಿ 50 ಲಕ್ಷಕ್ಕೂ ಹೆಚ್ಚು ಹಣ ಕಳೆದುಕೊಂಡ ಹಿನ್ನಲೆ ಓರ್ವ ವ್ಯಕ್ತಿ ಆತ್ಮಹತ್ಯೆ (suicide) ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಾಮನಗರ ತಾಲೂಕಿನ ಬಿಡದಿ ಬಳಿ ಕೆಂಚನಗುಪ್ಪೆಯಲ್ಲಿ ಘಟನೆ ನಡೆದಿದೆ. ಕೆಂಚನಗುಪ್ಪೆ ಶಿವರಾಜ್(40) ಮೃತ ವ್ಯಕ್ತಿ. ಡಿ.ಕೆ.ಸುರೇಶ್ ಪರವಾಗಿ 50 ಲಕ್ಷಕ್ಕೂ ಹೆಚ್ಚು ರೂ. ಬೆಟ್ಟಿಂಗ್ ಕಟ್ಟಿ ಶಿವರಾಜ್ ಸೋತಿದ್ದ. ಆದರೆ ಲಕ್ಷಾಂತರ ಹಣ ಕೊಡಲಾಗದೇ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಕಳೆದ ಬಾರಿ ಕರ್ನಾಟಕದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಭಾರೀ ಸದ್ದು ಮಾಡಿತ್ತು. ಮಂಡ್ಯ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೆ ಮಂಡ್ಯ ಎನ್ನುವ ಲೆವಲ್ಗೆ ಸದ್ದು ಮಾಡಿತ್ತು. ಈ ಭಾರೀ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸದ್ದು ಮಾಡಿದೆ. ಏಕೆಂದ್ರೆ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಅವರ ಸಹೋದರ ಡಿಕೆ ಸುರೇಶ್ ಎದುರು ಓರ್ವ ಖ್ಯಾತ ಹೃದ್ರೋಗ ವೈದ್ಯ ಸ್ಪರ್ಧೆ ಮಾಡಿದ್ದರು. ಹೀಗಾಗಿ ಭಾರೀ ಜಿದ್ದಾಜಿದ್ದಿಯಿಂದ ಕೂಡಿತ್ತು.
ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿ ಮನನೊಂದು ಮಗಳ ಜೊತೆ ಆತ್ಮಹತ್ಯೆಗೆ ಶರಣು
ಹೀಗಾಗಿ ಡಾ ಮಂಜುನಾಥ್ ಗೆಲ್ಲುತ್ತಾರಾ ಅಥವಾ ಡಿಕೆ ಸುರೇಶ್ ಗೆಲ್ಲತ್ತಾರೆ ಎಂದು ಇಡೀ ರಾಜ್ಯವೇ ಬೆಂಗಳುರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಫಲಿತಾಂಶದ ಬಗ್ಗೆ ಚರ್ಚೆ ನಡೆದಿತ್ತು. ಅಲ್ಲದೇ ಬೆಟ್ಟಿಂಗ್ ಸಹ ನಡೆದಿದ್ದವು. ಅಂತಿಮವಾಗಿ ಜೂನ್ 4ರಂದು ಪ್ರಕಟವಾದ ಫಲಿತಾಂಶದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಡಾ ಮಂಜುನಾಥ್ ಗೆಲುವಿನ ನಗೆ ಬೀರಿದ್ದರು. ಈ ಮೂಲಕ ಡಿಕೆ ಬ್ರದರ್ಸ್ಗೆ ಬಿಗ್ ಶಾಕ್ ಕೊಟ್ಟಿದ್ದರು.
ಇದನ್ನೂ ಓದಿ: ಮೈಸೂರು; ಮಾರಕಾಸ್ತ್ರಗಳಿಂದ ಕೊಚ್ಚಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿ ಕೊಲೆ, ಆಪ್ತ ಸಹಾಯಕ ಅರೆಸ್ಟ್
ಅದರಲ್ಲೂ ಲಕ್ಷಾಂತರ ಮತಗಳಿಂದ ಡಿಕೆ ಸುರೇಶ್ ಅವರನ್ನು ಸೋಲಿಸಿದ್ದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ಏನೋ ಯಾರು ಗೆದ್ದರೂ ಸಾವಿರಾರು ಮತಗಳ ಅಂತರದಲ್ಲಿ ಗೆಲ್ಲಬಹುದು ಎನ್ನಲಾಗಿತ್ತು. ಆದ್ರೆ, ಮಂಜುನಾಥ್ 1 ಲಕ್ಷದ 80 ಸಾವಿರಕ್ಕೂ ಹೆಚ್ಚು ಮತಗಳಿಂದ ಸುರೇಶ್ ಅವರನ್ನು ಮಣಿಸಿದ್ದು ಎಲ್ಲರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತೆ ಆಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.