- Kannada News Karnataka Most sixes in ipl for each team chris gayle leads the chart for RCB ms dhoni david warner
IPL 2021: ಐಪಿಎಲ್‌ನಲ್ಲಿ ಒಂದು ತಂಡದ ಪರವಾಗಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಪಟ್ಟಿ ಹೀಗಿದೆ!
IPL 2021: ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ. ಅವರು ಇದುವರೆಗೆ 140 ಪಂದ್ಯಗಳಲ್ಲಿ 357 ಸಿಕ್ಸರ್ ಬಾರಿಸಿದ್ದಾರೆ.
Updated on: Sep 15, 2021 | 4:40 PM

ಟಿ 20 ಕ್ರಿಕೆಟ್ನಲ್ಲಿ ರನ್ಗಳ ಮಳೆ ಸುರಿಯುತ್ತದೆ. ಬ್ಯಾಟ್ಸ್‌ಮನ್‌ಗಳ ಬ್ಯಾಟ್ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುತ್ತದೆ. ಇಲ್ಲಿ ರನ್ಗಳಿಗಿಂತ ಹೆಚ್ಚಾಗಿ ಫೋರ್ ಮತ್ತು ಸಿಕ್ಸ್ ಸಿಡಿಸಲಾಗುತ್ತದೆ. ಸೆಪ್ಟೆಂಬರ್ 19 ರಿಂದ ಐಪಿಎಲ್ 2021 ರ ಎರಡನೇ ಹಂತವು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ. ಇಲ್ಲಿನ ಮೈದಾನಗಳು ಚಿಕ್ಕದಾಗಿರುವುದರಿಂದ ಮತ್ತೊಮ್ಮೆ ಪ್ರೇಕ್ಷಕರು ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಯನ್ನು ನೋಡಬಹುದು. ಇಲ್ಲಿಯವರೆಗೆ, ಐಪಿಎಲ್‌ನಲ್ಲಿ ಯಾವ ತಂಡಕ್ಕಾಗಿ, ಯಾವ ಆಟಗಾರನು ಹೆಚ್ಚು ಸಿಕ್ಸರ್‌ಗಳನ್ನು ಹೊಡೆದಿದ್ದಾನೆ, ಆ ಆಟಗಾರರ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.

ಕ್ರಿಸ್ ಗೇಲ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ. ಅವರು ಇದುವರೆಗೆ 140 ಪಂದ್ಯಗಳಲ್ಲಿ 357 ಸಿಕ್ಸರ್ ಬಾರಿಸಿದ್ದಾರೆ. ಅವರು ಪ್ರಸ್ತುತ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದಾರೆ, ಆದರೆ ಅದಕ್ಕೂ ಮೊದಲು ಅವರು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತಾ ನೈಟ್ ರೈಡರ್ಸ್ ಪರ ಆಡಿದ್ದರು. ಗೇಲ್ ಇದುವರೆಗೆ ಆರ್‌ಸಿಬಿಗೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ. ಆರ್ಸಿಬಿಗೆ ಒಟ್ಟು 239 ಸಿಕ್ಸರ್ ಬಾರಿಸಿದ್ದಾರೆ.

ಕೀರನ್ ಪೊಲಾರ್ಡ್ ಮೊದಲಿನಿಂದಲೂ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾರೆ. ಐದು ಬಾರಿ ವಿಜೇತ ಮುಂಬೈಗಾಗಿ ಪೊಲಾರ್ಡ್ ಅನೇಕ ಸ್ಮರಣೀಯ ಮತ್ತು ಪಂದ್ಯಶ್ರೇಷ್ಠ ಇನ್ನಿಂಗ್ಸ್ ಆಡಿದ್ದಾರೆ. ಐಪಿಎಲ್‌ನಲ್ಲಿ ಮುಂಬೈ ಪರ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಪೊಲಾರ್ಡ್. ಅವರು ಮುಂಬೈ ಪರ 211 ಸಿಕ್ಸರ್ ಬಾರಿಸಿದ್ದಾರೆ.

ಮೂರು ಬಾರಿ ವಿಜೇತ ಚೆನ್ನೈ ಸೂಪರ್ ಕಿಂಗ್ಸ್ ಬಗ್ಗೆ ಮಾತನಾಡುವುದಾದರೆ, ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಈ ಫ್ರಾಂಚೈಸಿಗಾಗಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ್ದಾರೆ. ಸಿಎಸ್‌ಕೆ ಪರವಾಗಿ ಧೋನಿ 187 ಸಿಕ್ಸರ್ ಬಾರಿಸಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ 2016 ರಲ್ಲಿ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಪ್ರಶಸ್ತಿ ಜಯಿಸಿತ್ತು. ತಂಡವು ಐಪಿಎಲ್ 2021 ರ ಮೊದಲ ಹಂತದಲ್ಲಿ ಅವರನ್ನು ನಾಯಕತ್ವದಿಂದ ತೆಗೆದುಹಾಕಿತು. ಆದರೆ ವಾರ್ನರ್ ಐಪಿಎಲ್ ನಲ್ಲಿ ಸನ್ ರೈಸರ್ಸ್ ಪರ ಅತಿ ಹೆಚ್ಚು ಸಿಕ್ಸರ್ ಗಳಿಸಿದ ಬ್ಯಾಟ್ಸ್ ಮನ್ ಆಗಿದ್ದಾರೆ. ಅವರು ಸನ್ ರೈಸರ್ಸ್ ಪರ 143 ಸಿಕ್ಸರ್ ಬಾರಿಸಿದ್ದಾರೆ.

ಕೋಲ್ಕತಾ ನೈಟ್ ರೈಡರ್ಸ್ ತನ್ನ ಬಿರುಗಾಳಿಯ ಶೈಲಿ ಮತ್ತು ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾದ ಬ್ಯಾಟ್ಸ್‌ಮನ್ ಅನ್ನು ಸಹ ಹೊಂದಿದೆ. ಆ ಬ್ಯಾಟ್ಸ್‌ಮನ್‌ನ ಹೆಸರು ಆಂಡ್ರೆ ರಸೆಲ್. ಕೆಕೆಆರ್‌ಗಾಗಿ ರಸೆಲ್ ಇದುವರೆಗೆ ಒಟ್ಟು 139 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

2008 ರಲ್ಲಿ ರಾಜಸ್ಥಾನ ರಾಯಲ್ಸ್ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿತು. ಶೇನ್ ವ್ಯಾಟ್ಸನ್ ಈ ತಂಡದ ಪ್ರಮುಖ ಭಾಗವಾಗಿದ್ದರು. ನಂತರ ಅವರು ಆರ್‌ಸಿಬಿ ಮತ್ತು ಸಿಎಸ್‌ಕೆ ಪರ ಆಡಿದರು. ಆದರೆ ಇದುವರೆಗೂ ರಾಜಸ್ಥಾನಕ್ಕೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಶೇನ್ ವ್ಯಾಟ್ಸನ್ ಹೆಸರಿನಲ್ಲಿದೆ. ರಾಜಸ್ಥಾನದ ಪರವಾಗಿ ವ್ಯಾಟ್ಸನ್ 109 ಸಿಕ್ಸರ್ ಬಾರಿಸಿದ್ದಾರೆ.

ರಿಷಭ್ ಪಂತ್ ಚಿಕ್ಕವರಾಗಿದ್ದು, ಐಪಿಎಲ್‌ನಲ್ಲಿ ಮೊದಲಿನಿಂದಲೂ ದೆಹಲಿ ಫ್ರಾಂಚೈಸಿಗಾಗಿ ಆಡುತ್ತಿದ್ದಾರೆ. ಈ ಯುವ ಬ್ಯಾಟ್ಸ್‌ಮನ್ ತನ್ನ ಬಿರುಗಾಳಿಯ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಪಂತ್ ದೆಹಲಿ ಪರ 107 ಸಿಕ್ಸರ್ ಬಾರಿಸಿದ್ದಾರೆ ಮತ್ತು ಐಪಿಎಲ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರಾಗಿದ್ದಾರೆ.

ಪಂಜಾಬ್ ಕಿಂಗ್ಸ್ ಪರವಾಗಿ ನಾಯಕ ಕೆಎಲ್ ರಾಹುಲ್ ಈ ಕೆಲಸವನ್ನು ಮಾಡಿದ್ದಾರೆ. ರಾಹುಲ್ ಪಂಜಾಬ್ ಪರ ಒಟ್ಟು 96 ಸಿಕ್ಸರ್ ಬಾರಿಸಿದ್ದಾರೆ.




