ಮಂಡ್ಯ: ಬೇಬಿಬೆಟ್ಟ ಗಣಿಗಾರಿಕೆ ಪ್ರದೇಶದಲ್ಲಿ ಸಂಸದೆ ಸುಮಲತಾ ಪರಿಶೀಲನೆ ನಡೆಸಿದ್ದಾರೆ. ಸುಮಲತಾ ಭೇಟಿ ವೇಳೆ ಗಣಿಗಾರಿಕೆ ಪರ, ವಿರೋಧ ಕೂಗು ಕೇಳಿಬಂದಿದೆ. ಗಣಿಗಾರಿಕೆಯಿಂದ ಸಮಸ್ಯೆ ಆಗ್ತಿದೆ ದಯವಿಟ್ಟು ನಿಲ್ಲಿಸಿ ಎಂದು ಗಣಿಗಾರಿಕೆ ನಿಲ್ಲಿಸಲು ಬೇಬಿ ಗ್ರಾಮಸ್ಥರ ಮನವಿ ಒಂದೆಡೆಯಾದರೆ, ಅದೇ ಸ್ಥಳದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವಂತೆ ಒತ್ತಾಯವೂ ಕೇಳಿಬಂದಿದೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಗ್ರಾಮದಲ್ಲಿ ಬೇಬಿ ಸರ್ಕಲ್ ಗಣಿಗಾರಿಕೆ ಬಗ್ಗೆ ಪರ, ವಿರೋಧ ಘೋಷಣೆ ಕೇಳಿದೆ.
ಬೇಕೇ ಬೇಕು ನ್ಯಾಯ ಬೇಕು ಎನ್ನುತ್ತಾ ಸಂಸದೆ ಸುಮಲತಾ ಭೇಟಿ ವೇಳೆ ಗಣಿಕಾರ್ಮಿಕರು ಆಗ್ರಹ ವ್ಯಕ್ತಪಡಿಸಿದ್ದಾರೆ. ಸಂಸದೆ ಸುಮಲತಾ ಕಾರಿನ ಮೇಲೆ ಜನರು ಮುಗಿಬಿದ್ದಿದ್ದಾರೆ.
ಲಂಚ ಪಡೆದು ಅಧಿಕಾರಿಗಳಿಂದ ನಿಮಗೆ ಸುಳ್ಳು ಮಾಹಿತಿ ನೀಡುತ್ತಾರೆ. ನೀವು ಬರುವ ದಿನ ಮಾತ್ರ ಎಲ್ಲಾ ಮುಚ್ಚಿಸಿ ಸುಳ್ಳು ಹೇಳ್ತಾರೆ ಎಂದು ರೈತ ಸಂಘದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಸಂಸದೆ ಸುಮಲತಾ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರೈತ ಸಂಘದ ಕಾರ್ಯಕರ್ತರ ಈ ಮಾತಿಗೆ ಸ್ಥಳೀಯ ಗಣಿಕಾರ್ಮಿಕರ ವಿರೋಧ ವ್ಯಕ್ತವಾಗಿದೆ.
ಗಣಿಕಾರ್ಮಿಕರು ಸಣ್ಣ ಪ್ರಮಾಣದ ಗಣಿಗಾರಿಕೆಗೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಸಣ್ಣ ಪ್ರಮಾಣದ ಗಣಿಗಾರಿಕೆಗೆ ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಸ್ಥಳದಲ್ಲಿ ಗಣಿಗಾರಿಕೆ ವಿರುದ್ಧ ಪರ-ವಿರೋಧ ಕೂಗು ಜೋರಾಗಿ ಕೇಳಿಬಂದಿದೆ.
ಬೇಬಿಬೆಟ್ಟಕ್ಕೆ ಸಂಸದೆ ಸುಮಲತಾ ಭೇಟಿ ನೀಡುವ ಹಿನ್ನೆಲೆಯಲ್ಲಿ ಬೇಬಿ ಗ್ರಾಮ ಬಳಿ ರೈತಸಂಘ ಕಾರ್ಯಕರ್ತರ ಜಮಾವಣೆ ಆಗಿತ್ತು. ಅಕ್ರಮ ಗಣಿಪ್ರದೇಶಗಳಿಗೆ ತೆರಳಿ ಪರಿಶೀಲಿಸಲಿರುವ ಸಂಸದೆ ಸುಮಲತಾಗೆ ಬೆಂಬಲ ನೀಡಲು ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರ ಜಮಾವಣೆ ಆಗಿತ್ತು. ಗಣಿಗಾರಿಕೆಗೆ ಅನುಮತಿ ನೀಡಿ ಎಂದು ಇನ್ನು ಕೆಲವರು ಬಂದಿದ್ದರು.
ಬೇಕೆ ಬೇಕು ಗಣಿಗಾರಿಕೆ ಬೇಕು ಎಂದು ಘೋಷಣೆ ಕೂಗಿ, ನಾವು ಕಲ್ಲು ಗಣಿಗಾರಿಕೆ ಮಾಡಿ ಕೆಆರ್ಎಸ್ ಕಟ್ಟಿದ್ದೀವಿ. ನಮಗೆ ಗಣಿಗಾರಿಕೆ ಮಾಡಲು ಅವಕಾಶ ನೀಡಿ ಎಂದು ಕಾವೇರಿಪುರ ಗ್ರಾಮದಲ್ಲಿ ಸುಮಲತಾಗೆ ಮನವಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಸಕ್ರಮ ಗಣಿಗಾರಿಕೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. ಸಾವಿರಾರು ಜನ ಗಣಿಗಾರಿಕೆಯನ್ನು ನಂಬಿಕೊಂಡು ಇದ್ದೇವೆ. ಪೂರ್ವಜರ ಕಾಲದಿಂದಲೂ ಇದೇ ಕಸುಬು ಮಾಡುತ್ತಿದ್ದೇವೆ. ಕೈಕುಳಿ ಗಣಿಗಾರಿಕೆಗೆ ಅವಕಾಶ ನೀಡಲು ಗ್ರಾಮಸ್ಥರು ಮನವಿ ಮಾಡಿದ್ದರು.
ಸರ್ಕಾರಕ್ಕೆ ಎಲ್ಲಾ ರೀತಿಯ ರಾಜಧನ ಪಾವತಿ ಮಾಡಿದ್ದೀವಿ. ಟ್ರಯಲ್ ಬ್ಲಾಸ್ಟ್ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಿ. ಟ್ರಯಲ್ ಬ್ಲಾಸ್ಟ್‌ನಲ್ಲಿ ಡ್ಯಾಂಗೆ ತೊಂದರೆಯಿದೆ ಅನ್ನೋದಾದ್ರೆ, ನಾವು ಯಾವುದೇ ಷರತ್ತಿಲ್ಲದೆ ಗಣಿಗಾರಿಕೆಯನ್ನು ನಿಲ್ಲಿಸ್ತೇವೆ ಎಂದು ಸುಮಲತಾಗೆ ಗಣಿ ಮಾಲೀಕ ರವಿಭೋಜೇಗೌಡ ಮನವರಿಕೆ ಮಾಡಿದ್ದಾರೆ. ಸುಮಲತಾ ಬಳಿ ಗಣಿ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
Sumalatha Ambareesh: ನಾಳೆ ಕೆಆರ್ಎಸ್ ಡ್ಯಾಂನಲ್ಲಿಯೇ ಅಧಿಕಾರಿಗಳ ಜತೆ ಸಭೆ ನಡೆಸುವೆ: ಸಂಸದೆ ಸುಮಲತಾ ಅಂಬರೀಶ್