ಸಿಎಂ ವಿರುದ್ಧದ ಎಫ್​ಐಆರ್​ನಲ್ಲಿ ಯಾವೆಲ್ಲಾ ಸೆಕ್ಷನ್​ ದಾಖಲು? ಯಾವ ಸೆಕ್ಷನ್​ಗೆ ಏನು ಶಿಕ್ಷೆ?

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದ ಭೂಮಿ ಹಂಚಿಕೆ ಹಗರಣದಲ್ಲಿ ನ್ಯಾಯಾಲಯ ಸೂಚಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪತ್ನಿ ವಿರುದ್ಧ ಮೈಸೂರು ಲೋಕಾಯುಕ್ತ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಸಿದ್ದರಾಮಯ್ಯ ಎ1 ಆರೋಪಿ ಆಗಿದ್ದಾರೆ. ಪತ್ನಿ ಪಾರ್ವತಿ ಸಿದ್ದರಾಮಯ್ಯ ಎ2, ಸಿದ್ದರಾಮಯ್ಯ ಅವರ ಭಾಮೈದ ಎ3 ಹಾಗೂ ಭೂಮಿ ಮಾರಾಟ ಮಾಡಿದ ದೇವರಾಜು ಎ4 ಮಾಡಿ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಇನ್ನು ಎಫ್​ಐಆರ್​ನಲ್ಲಿ ಯಾವೆಲ್ಲಾ ಸೆಕ್ಷನ್​ ದಾಖಲಿಸಲಾಗಿದೆ. ಯಾವ ಸೆಕ್ಷನ್ ಏನು ಹೇಳುತ್ತೆ? ಯಾವ್ಯಾವ ಸೆಕ್ಷನ್​​ಗೆ ಶಿಕ್ಷೆ ಏನು? ಸಂಪೂರ್ಣ ವಿವರ ಇಲ್ಲಿದೆ.

ಸಿಎಂ ವಿರುದ್ಧದ ಎಫ್​ಐಆರ್​ನಲ್ಲಿ ಯಾವೆಲ್ಲಾ ಸೆಕ್ಷನ್​ ದಾಖಲು? ಯಾವ ಸೆಕ್ಷನ್​ಗೆ ಏನು ಶಿಕ್ಷೆ?
ಲೋಕಾಯುಕ್ತ, ಸಿದ್ದರಾಮಯ್ಯ
Follow us
ರಾಮ್​, ಮೈಸೂರು
| Updated By: ರಮೇಶ್ ಬಿ. ಜವಳಗೇರಾ

Updated on: Sep 27, 2024 | 5:01 PM

ಮೈಸೂರು, (ಸೆಪ್ಟೆಂಬರ್ 27): ಅಕ್ರಮವಾಗಿ ಮುಡಾ ಸೈಟು ಪಡೆದ ಕೇಸ್‌ನಲ್ಲಿ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಮೈಸೂರು ಲೋಕಾಯುಕ್ತ ಎಸ್​ಪಿ ಕಚೇರಿಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಸಿದ್ದರಾಮಯ್ಯ A1 ಆರೋಪಿಯಾಗಿದ್ದಾರೆ. ಇನ್ನು ಸಿಎಂ ಪತ್ನಿ ಪಾರ್ವತಿ A2, ಬಾಮೈದ ಮಲ್ಲಿಕಾರ್ಜುನ್ ಸ್ವಾಮಿ A3 ಹಾಗೂ ಭೂಮಿ ಮಾರಾಟ ಮಾಡಿದ ಮಾಲೀಕ ದೇವರಾಜು A4 ಆರೋಪಿಯಾಗಿದ್ದಾರೆ. ಇನ್ನು ಆರೋಪಿಗಳ ಮೇಲೆ ಯಾವೆಲ್ಲಾ ಸೆಕ್ಷನ್​ಗಳನ್ನು ಹಾಕಲಾಗಿದೆ? ಸೆಕ್ಷನ್​ಗಳು ಏನು ಹೇಳುತ್ತವೆ ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಯಾವ-ಯಾವ ಸೆಕ್ಷನ್​ ದಾಖಲು?

ನ್ಯಾಯಾಲಯ ಸೂಚಿಸಿದ ಸೆಕ್ಷನ್​ಗಳಡಿ ಎಫ್ಐಆರ್ ದಾಖಲಾಗಿದೆ. ಸಿಆರ್​ಪಿಸಿ ಸೆಕ್ಷನ್ 156(3)ರ ಅಡಿ ಎಫ್ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 120B, 166, 403, 406, 420, 426, 465, 468, 340, 351ರ ಅಡಿ ಕೇಸ್ ದಾಖಲಾಗಿದೆ. ಅಷ್ಟೇ ಅಲ್ಲದೇ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 9, 13ರ ಅಡಿ ಎಫ್​ಐಆರ್ ಆಗಿದೆ. ಇನ್ನು ಬೇನಾಮಿ ಆಸ್ತಿ ನಿಷೇಧ ಕಾಯ್ಡೆ ಸೆಕ್ಷನ್ 53 ಮತ್ತು 54, ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಸೆಕ್ಷನ್ 3, 4ರ ಅಡಿ ಎಫ್​ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಮುಡಾ ಕೇಸ್: ಕೊನೆಗೂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲು, ಮುಂದೇನು?

ಯಾವ ಸೆಕ್ಷನ್ ಏನು ಹೇಳುತ್ತೆ? ಏನು ಶಿಕ್ಷೆ?

  • ಐಪಿಸಿ 120B – ಕ್ರಿಮಿನಲ್ ಪಿತೂರಿ, ಒಳ ಸಂಚು (ಜೀವಾವಧಿ ಶಿಕ್ಷೆ)
  • ಐಪಿಸಿ 166 – ಸರ್ಕಾರಿ ಸೇವಕನಿಂದ ಕಾನೂನು ಉಲ್ಲಂಘನೆ
  • ಐಪಿಸಿ 403 – ಅಪ್ರಾಮಾಣಿಕವಾಗಿ ಆಸ್ತಿಯ ದುರ್ಬಳಕೆ
  • ಐಪಿಸಿ 406 – ಅಪರಾಧಿಕ ನಂಬಿಕೆ ದ್ರೋಹಕ್ಕೆ ಶಿಕ್ಷೆ (3 ವರ್ಷ ಜೈಲು ಅಥವಾ ದಂಡ)
  • ಐಪಿಸಿ 420 – ವಂಚನೆ (ಮೋಸದಿಂದ ಲಾಭ ಪಡೆಯುವುದು)
  • ಐಪಿಸಿ 426 – ಕಿಡಿಗೇಡಿತನಕ್ಕೆ ಶಿಕ್ಷೆ (3 ತಿಂಗಳ ಶಿಕ್ಷೆ ಅಥವಾ ದಂಡ)
  • ಐಪಿಸಿ 465 – ಫೋರ್ಜರಿ
  • ಐಪಿಸಿ 468 – ಫೋರ್ಜರಿ ಮಾಡಿದ್ದಕ್ಕೆ ಶಿಕ್ಷೆ (5 ವರ್ಷ ಜೈಲು ಮತ್ತು ದಂಡ)
  • ಐಪಿಸಿ – 340 – ವ್ಯಕ್ತಿಯೊಬ್ಬನನ್ನು ನಿರ್ಬಂಧಿಸುವುದು
  • ಐಪಿಸಿ – 351 – ಮುಂದುವರಿದ್ರೆ ದಾಳಿ ಮಾಡುವ ಭಯ ಹುಟ್ಟಿಸುವುದು
  • ಐಪಿಸಿ – 9 – ಲಂಚ ಸ್ವೀಕಾರ, ಅಥವಾ ಲಂಚ ನೀಡಲು ಶಿಕ್ಷೆ, ವೈಯಕ್ತಿಕ ಪ್ರಭಾವ
  • ಐಪಿಸಿ 13 – ಸರ್ಕಾರಿ ನೌಕರನಿಂದ ಅಪರಾಧಿಕ ದುರ್ನಡತೆ.

ಹಲವರ ಜತೆ ಚರ್ಚಿಸಿ ಎಫ್​ಐಆರ್​ ದಾಖಲಿಸಿದ ಎಸ್ಪಿ

CRPC 156(3) ಅಡಿ ಕೇಸ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶಿಸಿತ್ತು. ಆದ್ರೆ, ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಅವರಿಗೆ ಕೆಲವು ಗೊಂದಲಗಳಿದ್ದವು. ಯಾವ ಕಾಯ್ದೆ ಅಡಿ ಎಫ್​ಐಆರ್​ ದಾಖಲಿಸಬೇಕು? CRPC 156(3) ಬಿಎನ್ಎಸ್‌ಎಸ್‌ಯಡಿಯಲ್ಲಿ ಅಥಾವ ಐಪಿಸಿಯಲ್ಲಿ ಎಫ್​ಐಆರ್ ದಾಖಲಿಸಬೇಕೆಂಬ ಗೊಂದಲ ಇತ್ತು. ಈ ಹಿನ್ನೆಲೆಯಲ್ಲಿ ಉದೇಶ್ ಅವರು ಹಿರಿಯ ಕಾನೂನು ಪರಿಣಿತರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಅಲ್ಲದೇ ಕಾನೂನು ತಜ್ಞರ ಜೊತೆ ಚರ್ಚೆ ಬಳಿಕ ಖುದ್ದು ನ್ಯಾಯಾಧೀಶರನ್ನು ಭೇಟಿ ಮಾಡಿ ಸಲಹೆ ಪಡೆದುಕೊಂಡಿದ್ದರು. ಅದರಂತೆ ಇದೀಗ ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ನಾಲ್ವರ ವಿರುದ್ಧ CRPC 156(3)ಯಡಿಯಲ್ಲಿಯೇ ಪ್ರಕರಣ ದಾಖಲಿಸಲಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ