ಅಂಬಾನಿ ಪುತ್ರನ ಮದುವೆ ಆಮಂತ್ರಣ ಬಂದಿಲ್ಲ: ಸಿಎಂ ಸಿದ್ದರಾಮಯ್ಯ ಕಚೇರಿಯಿಂದ ಸ್ಪಷ್ಟನೆ
ಜುಲೈ 12 ರಂದು ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿಯ ಮದುವೆ ನಡೆಯಲಿದೆ. ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿಎಂ ಸಿದ್ದರಾಮಯ್ಯಗೂ ಮದುವೆ ಆಹ್ವಾನಿಸಲಾಗಿದೆ ಎಂದು ವಿಡಿಯೋ ವೈರಲ್ ಮಾಡಲಾಗಿದೆ. ಈ ಕುರಿತಾಗಿ ಸ್ಪಷ್ಟನೆ ನೀಡಿರುವ ಸಿಎಂ ಕಚೇರಿ ಅಧಿಕೃತವಾಗಿ ಯಾವುದೇ ಆಹ್ವಾನ ಬಂದಿಲ್ಲ ಎಂದಿದ್ದಾರೆ.
ಬೆಂಗಳೂರು, ಜೂನ್ 27: ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿಯ ಮದುವೆ ಈಗಾಗಲೇ ನಿಗದಿ ಆಗಿದೆ. ಜುಲೈ 12 ರಂದು ರಾಧಿಕಾ ಮರ್ಚೆಂಟ್ ಅವರನ್ನು ಮದುವೆಯಾಗಲಿದ್ದಾರೆ. ಸದ್ಯ ಗಣ್ಯಾತಿ ಗಣ್ಯರಿಗೆ ಖುದ್ದು ಮುಕೇಶ್ ಅಂಬಾನಿ ಕುಟುಂಬವೇ ಮದುವೆ ಆಮಂತ್ರಣವನ್ನು ನೀಡುತ್ತಿದ್ದಾರೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯಗೂ (Siddaramaiah) ಮದುವೆ ಆಹ್ವಾನಿಸಲಾಗಿದೆ ಎಂಬ ವಿಡಿಯೋ ಒಂದು ವೈರಲ್ ಆಗಿದೆ. ಆದರೆ ಅಧಿಕೃತವಾಗಿ ಯಾವುದೇ ಆಹ್ವಾನ ಪತ್ರ ತಲುಪಿಲ್ಲ ಎಂದು ಟಿವಿ9ಗೆ ಸಿಎಂ ಕಚೇರಿಯಿಂದ ಸ್ಪಷ್ಟನೆ ನೀಡಲಾಗಿದೆ.
ಆಮಂತ್ರಣ ಪತ್ರಿಕೆ ಮೇಲೆ ಸಿಎಂ ಸಿದ್ದರಾಮಯ್ಯ ಹಾಗೂ ಪತ್ನಿ ಪಾರ್ವತಿ ಹೆಸರು ಉಲ್ಲೇಖಿಸಿರುವ ಆಹ್ವಾನ ಪತ್ರಿಕೆ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆದರೆ ಈವರೆಗೆ ಯಾವುದೇ ರೀತಿಯ ಆಮಂತ್ರಣ ಸಿಎಂಗೆ ಬಂದಿಲ್ಲ. ಅಧಿಕೃತವಾಗಿ ಯಾವುದೇ ಆಹ್ವಾನ ಪತ್ರ ತಲುಪಿಲ್ಲ ಎಂದು ಸಿಎಂ ಕಚೇರಿಯಿಂದ ಸ್ಪಷ್ಟಪಡಿಸಲಾಗಿದೆ.
ಇದನ್ನೂ ಓದಿ: Viral: ವೈರಲ್ ಆಯ್ತು ಅನಂತ್ ಅಂಬಾನಿ-ರಾಧಿಕ ಮದುವೆ ಆಮಂತ್ರಣ ಪತ್ರಿಕೆ, ಮದುವೆ ಎಲ್ಲಿ, ಯಾವಾಗ ಗೊತ್ತಾ?
ಸೋಶಿಯಲ್ ಮೀಡಿಯಾದಲ್ಲಿ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಆಮಂತ್ರಣ ವೈರಲ್ ಆಗುತ್ತಿದೆ. ಚಿನ್ನದ ದೇವರ ವಿಗ್ರಹಗಳು, ಬೆಳ್ಳಿಯ ಪುಟ್ಟ ದೇವಾಲಯವಿರುವ ಬಾಕ್ಸ್ನೊಂದಿಗೆ ವಿಶೇಷವಾಗಿ ಮಾಡಿರುವ ಆಮಂತ್ರಣ ಪತ್ರ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ
*Anant Ambani’s* *Wedding Invite* 🤔😳😊 pic.twitter.com/b3SGNHwHP1
— Rajiv Mehta (@rajivmehta19) June 26, 2024
ವೈರಲ್ ಆದ ವಿಡಿಯೋದಲ್ಲಿ ಪೆಟ್ಟಿಗೆಯಂತಹ ದೇವಾಲಯವನ್ನು ತೋರಿಸಲಾಗಿದೆ. ಅದರಲ್ಲಿ ಬೆಳ್ಳಿಯಿಂದ ಮಾಡಿದ ಸಣ್ಣ ದೇವಾಲಯವಿದೆ. ಕೆಂಪು ಬಣ್ಣದ ಪೆಟ್ಟಿಗೆ ತೆರೆದ ಕೂಡಲೇ ಬೆಳ್ಳಿಯ ದೇವಾಲಯದ ಮಾದರಿ ಹಾಗೂ ದೇವಾಲಯದಲ್ಲಿ ಗಣೇಶ, ವಿಷ್ಣು, ಲಕ್ಷ್ಮಿ, ರಾಧಾ-ಕೃಷ್ಣ ಮತ್ತು ದುರ್ಗಾ ದೇವತೆ ಚಿನ್ನದ ವಿಗ್ರಹಗಳಿವೆ. ಹಿನ್ನಲೆಯಲ್ಲಿ ಹಿಂದಿ ಭಾಷೆಯಲ್ಲಿ ದೇವರ ಸ್ತುತಿ, ಮಂತ್ರ ಕೇಳಿಸುತ್ತದೆ.
ಇದನ್ನೂ ಓದಿ: ಅನಂತ್ ಅಂಬಾನಿ ಮದುವೆ: ಸ್ವರ್ಗವನ್ನು ಧರೆಗಿಳಿಸಿದ ಮುಖೇಶ್ ಅಂಬಾನಿ, ಇಲ್ಲಿವೆ ಚಿತ್ರಗಳು
ಇದೇ ವರ್ಷದ ಮಾರ್ಚ್ನಲ್ಲಿ ಅಂಬಾನಿ ಕುಟುಂಬವು ಜಾಮ್ ನಗರದಲ್ಲಿ ಅದ್ಧೂರಿ ವಿವಾಹಪೂರ್ವ ಸಮಾರಂಭವನ್ನು ಆಯೋಜಿಸಿತ್ತು. ದೇಶದ ಗಣ್ಯಾತಿ ಗಣ್ಯರು ಭಾಗಿಯಾಗಿದ್ದರು. ಸದ್ಯ ಅನಂತ್-ರಾಧಿಕಾ ಜೋಡಿಯ ಅದ್ಧೂರಿ ವಿವಾಹ ಸಮಾರಂಭಕ್ಕೆ ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.