ಕೊಲೆ ಯತ್ನ, ಸುಪಾರಿ ಆರೋಪ: ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್

ಆರ್‌ಆರ್ ನಗರದ ಶಾಸಕ ಮುನಿರತ್ನ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ 590 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಇದೇ ದಿನ, ಮಾಜಿ ಕಾರ್ಪೊರೇಟರ್ ಪತಿಯ ದೂರಿನ ಮೇರೆಗೆ ಕೊಲೆ ಯತ್ನ ಮತ್ತು ಸುಪಾರಿ ಆರೋಪದ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಆ ಮೂಲಕ ಮುನಿರತ್ನಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.

ಕೊಲೆ ಯತ್ನ, ಸುಪಾರಿ ಆರೋಪ: ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್
ಕೊಲೆ ಯತ್ನ, ಸುಪಾರಿ ಆರೋಪ: ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್
Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2024 | 7:44 PM

ಬೆಂಗಳೂರು, ನವೆಂಬರ್​​ 30: ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗಿರುವ ಆರ್​ಆರ್ ನಗರ ಶಾಸಕ ಮುನಿರತ್ನ (Munirathna) ವಿರುದ್ಧ ಇದೀಗ ಮತ್ತೊಂದು ಎಫ್ಐಆರ್​ ದಾಖಲಾಗಿದೆ. ಕೊಲೆ ಯತ್ನ, ಸುಪಾರಿ ಆರೋಪಿಸಿ ಮಾಜಿ ಕಾರ್ಪೊರೇಟರ್ ಮಂಜುಳಾ ಪತಿ ನಾರಾಯಣಸ್ವಾಮಿ ನೀಡಿದ ದೂರಿನ ಮೇರೆಗೆ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ಮುನಿರತ್ನ ಹಾಗೂ ಕೆಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ಎಸ್‌ಐಟಿ ಅಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ 590 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಇದೇ ದಿನವೇ ಮತ್ತೊಂದು ಎಫ್ಐಆರ್  ದಾಖಲಾಗಿದೆ. ಹೀಗಾಗಿ ಮುನಿರತ್ನಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸದ್ಯ ನಂದಿನಿ ಲೇಔಟ್ ಪೊಲೀಸರಿಂದ ತನಿಖೆ ನಡೆಯುತ್ತಿದೆ.

ದೂರುದಾರ ನಾರಾಯಣಸ್ವಾಮಿ ಹೇಳಿದ್ದಿಷ್ಟು

ದೂರುದಾರ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ಬಿಜೆಪಿ ಶಾಸಕ ಮುನಿರತ್ನ ನಮ್ಮ ಮೇಲೆ ದೌರ್ಜನ್ಯವೆಸಗಿದ್ದಾರೆ. ನಮ್ಮನ್ನು ಸೆಕ್ಸ್ ಸ್ಕ್ಯಾಂಡಲ್​ನಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದರು. ನಾನು ಸಿಐಡಿ ಎಸ್ಐಟಿಗೆ ದೂರು ಕೊಡಲು ಹೋಗಿದ್ದೆವು. ಸ್ಥಳೀಯ ಠಾಣೆಗೆ ದೂರು ನೀಡುವಂತೆ ಹೇಳಿ ಕಳುಹಿಸಿದ್ದಾರೆ. ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದೇನೆ, FIR ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ಶಾಸಕ ಮುನಿರತ್ನ ವಿರುದ್ಧದ ಜಾತಿನಿಂದನೆ‌ ಕೇಸ್​: 590 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ ಎಸ್‌ಐಟಿ

ಮುನಿರತ್ನರಿಂದ SC, ST ದೌರ್ಜನ್ಯ ತಡೆ ಕಾಯ್ದೆ ದುರ್ಬಳಕೆ ಮಾಡಿದ್ದು, ನಮ್ಮ ಮೇಲೆ ನಡೆಸಿರುವ ದೌರ್ಜನ್ಯದ ಬಗ್ಗೆ ದೂರು ನೀಡಿದ್ದೇನೆ. ಬಿಬಿಎಂಪಿ ಸದಸ್ಯೆಯಾಗಿದ್ದ ಮಂಜುಳಾ ಮೇಲೆ ದಾಳಿ ಮಾಡಿದ್ದರು. ನನ್ನ ಮೇಲೂ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ದಾಳಿ ಮಾಡಿದ್ದರು. ದಾಳಿ ಸಂಬಂಧ ದಾಖಲೆಗಳನ್ನು ಸೋಮವಾರ ಬಿಡುಗಡೆ ಮಾಡುವೆ ಎಂದು ಹೇಳಿದ್ದಾರೆ.

ಇನ್ನು ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್​ಎಸ್​ಎಲ್​ ವರದಿ ಬಂದಿದ್ದು, ಜಾತಿ ನಿಂದನೆ ಮಾಡಿರುವ ಆಡಿಯೋ ಶಾಸಕ ಮುನಿರತ್ನ ಅವರದ್ದೇ ಎಂಬುವುದು ಎಫ್​ಎಸ್​ಎಲ್​ ವರದಿಯಲ್ಲಿ ದೃಢಪಟ್ಟಿದೆ.

ಪ್ರಕರಣದಲ್ಲಿ ಮುನಿರತ್ನರನ್ನು ಬಂಧಿಸಿದ್ದ ಪೊಲೀಸರು ಅವರ ವಾಯ್ಸ್ ಸ್ಯಾಂಪಲ್ ಸಂಗ್ರಹ ಮಾಡಿ ಎಫ್​ಎಸ್​ಎಲ್​ಗೆ ಕಳುಹಿಸಲಾಗಿತ್ತು. ಬಳಿಕ ಎಸ್​ಎಲ್ ಅಧಿಕಾರಿಗಳು ಆಡಿಯೋ ಮತ್ತು ಮುನಿರತ್ನ ಧ್ವನಿ ಮ್ಯಾಚ್ ಮಾಡಿದ್ದು, ಆಡಿಯೋದಲ್ಲಿದ್ದ ಧ್ವನಿ ಮುನಿರತ್ನರದ್ದೇ ಎಂದು ರಿಪೋರ್ಟ್ ಕೊಟ್ಟಿದ್ದರು.

ಇದನ್ನೂ ಓದಿ: ಜಾತಿ ನಿಂದನೆ ಕೇಸ್: ಬಿಜೆಪಿ ಶಾಸಕ ಮುನಿರತ್ನ ಧ್ವನಿ ಎಂದು FSL ವರದಿಯಲ್ಲಿ ಧೃಡ

ಇನ್ನು ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ್ದ ದೂರು ವೇಲು ನಾಯ್ಕರ್, ಮುನಿರತ್ನ ವಿರುದ್ಧ ಈ ಆರೋಪ ಮಾಡಿದಾಗ ಅದನ್ನ ನಿರಾಕರಿಸಿದ್ದರು. ಅಷ್ಟೆ ಅಲ್ಲದೇ ಎಫ್​ಎಸ್​ಎಲ್​ ವರದಿಯಲ್ಲಿ ನಂದೇ ಧ್ವನಿ ಅಂತ ಬಂದ್ರೆ, ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವುದಾಗಿ ಹೇಳಿಕೆ ನೀಡಿದ್ದರು. ಈಗ FSL ವರದಿ ಮುನಿರತ್ನ ವಿರುದ್ಧ ಬಂದಿದ್ದು ಅವರು ರಾಜೀನಾಮೆ ನೀಡಿ ತಮ್ಮ ಮಾತು ಉಳಿಸಿಕೊಳ್ಳಬೇಕೆಂದು ಆಗ್ರಹಿಸಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:47 pm, Sat, 30 November 24