ಶಾಸಕ ಮುನಿರತ್ನ ವಿರುದ್ಧದ ಜಾತಿನಿಂದನೆ‌ ಕೇಸ್​: 590 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ ಎಸ್‌ಐಟಿ

ಆರ್‌ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ವಿರುದ್ಧದ ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ 590 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದೆ. ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳ ಜೊತೆಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಒಳಗೊಂಡಿದೆ. ಮುನಿರತ್ನರ ಧ್ವನಿ ಮಾದರಿಯನ್ನು ಎಫ್‌ಎಸ್‌ಎಲ್ ಪರೀಕ್ಷಿಸಿದ್ದು, ಅವರದೇ ಧ್ವನಿ ಎಂಬುದು ದೃಢಪಟ್ಟಿತ್ತು.

ಶಾಸಕ ಮುನಿರತ್ನ ವಿರುದ್ಧದ ಜಾತಿನಿಂದನೆ‌ ಕೇಸ್​: 590 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ ಎಸ್‌ಐಟಿ
ಶಾಸಕ ಮುನಿರತ್ನ ವಿರುದ್ಧದ ಜಾತಿನಿಂದನೆ‌ ಕೇಸ್​: 590 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ ಎಸ್‌ಐಟಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 30, 2024 | 5:09 PM

ಬೆಂಗಳೂರು, ನವೆಂಬರ್​ 30: ಆರ್​ಆರ್ ನಗರ ಬಿಜೆಪಿ ಶಾಸಕ ಮುನಿರತ್ನ (Munirathna) ವಿರುದ್ಧದ ಜಾತಿನಿಂದನೆ‌ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ 590 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಟೆಕ್ನಿಕಲ್, ವೈಜ್ಞಾನಿಕ ಸಾಕ್ಷ್ಯ ಸೇರಿ ಪ್ರತ್ಯಕ್ಷದರ್ಶಿಗಳ ಸಾಕ್ಷ್ಯ ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ 14ರಂದು ಮುನಿರತ್ನ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ರು. ಸದ್ಯ ಷರತ್ತು ಬದ್ಧ ಜಾಮೀನಿನ ಮೇಲೆ ಹೊರಗಿದ್ದಾರೆ. 53 ಸಾಕ್ಷಿಗಳು ಹಾಗೂ ಮೂವರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಕೂಡ ದಾಖಲಾಗಿದೆ.

ಇದನ್ನೂ ಓದಿ: ಜಾತಿ ನಿಂದನೆ ಕೇಸ್: ಬಿಜೆಪಿ ಶಾಸಕ ಮುನಿರತ್ನ ಧ್ವನಿ ಎಂದು FSL ವರದಿಯಲ್ಲಿ ಧೃಡ

ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿರುವುದು ದೃಢಪಟ್ಟಿದ್ದು, ಜಾತಿ ನಿಂದನೆ, ಬೆದರಿಕೆ ಹಾಕಿದ್ದು ತನಿಖೆಯಲ್ಲಿ ದೃಢಪಟ್ಟ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಎಸ್‌ಐಟಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಸೆ.13ರಂದು ವೈಯಾಲಿಕಾವಲ್ ‌ಠಾಣೆಗೆ ವೇಲುನಾಯ್ಕರ್ ದೂರು ನೀಡಿದ್ದರು. ಬಳಿಕ ಪ್ರಕರಣದ ತನಿಖೆ ಸಿಐಡಿ ಎಸ್‌ಐಟಿಗೆ ವರ್ಗಾವಣೆ ಮಾಡಲಾಗಿತ್ತು.

ಇತ್ತೀಚೆಗೆ ಎಫ್​​ಎಸ್​ಎಲ್​ ರಿಪೋರ್ಟ್‌ನಲ್ಲಿ ಆಡಿಯೋ ಮುನಿರತ್ನರದ್ದೇ ಎಂದು ದೃಢಪಟ್ಟಿತ್ತು. ಮುನಿರತ್ನ ಗುತ್ತಿಗೆದಾರ ಚೆಲುವರಾಜುಗೆ ಕರೆ ಮಾಡಿ ಮಾತನಾಡಿದ್ದು ಎನ್ನಲಾದ ಆಡಿಯೋದ್ದಲ್ಲಿದ್ದ ಧ್ವನಿ ಅವರದ್ದೇ ಧ್ವನಿ ಎಂದು ದೃಢಪಟ್ಟಿತ್ತು.

ಶಾಸಕ ಮುನಿರತ್ನ ಬಂಧಿಸಿದ್ದ ಪೊಲೀಸರು ಅವರ ವಾಯ್ಸ್ ಸ್ಯಾಂಪಲ್ ಕಲೆಕ್ಟ್ ಮಾಡಿ FSLಗೆ ಕಳಿಸಿದ್ದರು. FSL ಅಧಿಕಾರಿಗಳು ಆಡಿಯೋ ಮತ್ತು ಮುನಿರತ್ನ ಧ್ವನಿ ಮ್ಯಾಚ್ ಮಾಡಿದ್ದು, ಆಡಿಯೋದಲ್ಲಿದ್ದ ಧ್ವನಿ ಮುನಿರತ್ನರದ್ದೇ ಎಂದು ರಿಪೋರ್ಟ್ ಕೊಟ್ಟಿದ್ದರು.

ಇದನ್ನೂ ಓದಿ: ಗುತ್ತಿಗೆದಾರನಿಗೆ ಜೀವ ಬೆದರಿಕೆ: ಮುನಿರತ್ನ ವಿರುದ್ಧ ಎರಡು ಎಫ್ಐಆರ್​​

ಗುತ್ತಿಗೆದಾರ ಚೆಲುವರಾಜು ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಾಸಕ ಮುನಿರತ್ನ ಬಳಿಕ ಆತನಿಗೆ ನಿಂದನೆ ಮಾತುಗಳನ್ನಾಡಿದ್ದರು. ಜೊತೆಗೆ ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಬಗ್ಗೆ ಜಾತಿ ನಿಂದನೆ ಮಾಡಿದ್ದರು. ಇದೆಲ್ಲವನ್ನ ರೆಕಾರ್ಡ್ ಮಾಡಿದ್ದ ಚೆಲುವರಾಜು, ವೇಲು ನಾಯ್ಕರ್ ಮುನಿರತ್ನ ವಿರುದ್ಧ ಕೇಸ್ ದಾಖಲಿಸಿದ್ದರು. ಬಳಿಕ ಮುನಿರತ್ನ ಬಂದನವಾಗಿ ಅವರ ವಾಯ್ಸ್ ಸ್ಯಾಂಪಲ್ ಪರೀಕ್ಷೆಗೆ ಕಳಿಸಲಾಗಿತ್ತು.

ವರದಿ: ಪ್ರದೀಪ್​ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಚೆನ್ನೈ- ಬೆಂಗಳೂರು ಹೆದ್ದಾರಿಯಲ್ಲಿ ಟ್ರಕ್ ಡಿಕ್ಕಿಯಾಗಿ ಪಲ್ಟಿ ಹೊಡೆದ ಬಸ್
ಚೆನ್ನೈ- ಬೆಂಗಳೂರು ಹೆದ್ದಾರಿಯಲ್ಲಿ ಟ್ರಕ್ ಡಿಕ್ಕಿಯಾಗಿ ಪಲ್ಟಿ ಹೊಡೆದ ಬಸ್
ದೆಹಲಿ ಆಟೋ ಚಾಲಕರ ಮನೆಯಲ್ಲಿ ಊಟ ಮಾಡಿದ ಅರವಿಂದ್ ಕೇಜ್ರಿವಾಲ್ ದಂಪತಿ
ದೆಹಲಿ ಆಟೋ ಚಾಲಕರ ಮನೆಯಲ್ಲಿ ಊಟ ಮಾಡಿದ ಅರವಿಂದ್ ಕೇಜ್ರಿವಾಲ್ ದಂಪತಿ
ನನಗೆ ಏಟು ಬಿದಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳುತಿತ್ತು: ಸ್ಚಾಮೀಜಿ
ನನಗೆ ಏಟು ಬಿದಿದ್ದರೆ ಇಡೀ ರಾಜ್ಯಕ್ಕೆ ಬೆಂಕಿ ಬೀಳುತಿತ್ತು: ಸ್ಚಾಮೀಜಿ
ಮನವಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಬರಲಿಲ್ಲ ಎಂದ ಪ್ರತಿಭಟನಾಕಾರರು
ಮನವಿ ಸ್ವೀಕರಿಸಲು ಸಿಎಂ ಸಿದ್ದರಾಮಯ್ಯ ಬರಲಿಲ್ಲ ಎಂದ ಪ್ರತಿಭಟನಾಕಾರರು
ಬಿಗ್​ಬಾಸ್: ಗೌತಮಿ ಹೊಗಳಿಕೆಗೆ ನಾಚಿ ನೀರಾದ ಮೋಕ್ಷಿತಾ
ಬಿಗ್​ಬಾಸ್: ಗೌತಮಿ ಹೊಗಳಿಕೆಗೆ ನಾಚಿ ನೀರಾದ ಮೋಕ್ಷಿತಾ
ವಿಧಾನಸೌಧ ಆವರಣದಲ್ಲಿ ಕೃಷ್ಣ ಅವರ ಪ್ರತಿಮೆ ಸ್ಥಾಪಿಸಬೇಕು: ಇಬ್ರಾಹಿಂ
ವಿಧಾನಸೌಧ ಆವರಣದಲ್ಲಿ ಕೃಷ್ಣ ಅವರ ಪ್ರತಿಮೆ ಸ್ಥಾಪಿಸಬೇಕು: ಇಬ್ರಾಹಿಂ
ಪಾತ್ರೆ ತೊಳೆದರೆ ನಾನು ಗಂಡಸೇ ಅಲ್ಲ; ಚೈತ್ರಾಗೆ ಸವಾಲು ಹಾಕಿದ ರಜತ್
ಪಾತ್ರೆ ತೊಳೆದರೆ ನಾನು ಗಂಡಸೇ ಅಲ್ಲ; ಚೈತ್ರಾಗೆ ಸವಾಲು ಹಾಕಿದ ರಜತ್
ಪಂಚಮಸಾಲಿ ಹೋರಾಟ ತೀವ್ರ: ಯತ್ನಾಳ್,ಸ್ವಾಮೀಜಿ ಸೇರಿ ಹಲವರು ಪೊಲೀಸ್ ವಶಕ್ಕೆ
ಪಂಚಮಸಾಲಿ ಹೋರಾಟ ತೀವ್ರ: ಯತ್ನಾಳ್,ಸ್ವಾಮೀಜಿ ಸೇರಿ ಹಲವರು ಪೊಲೀಸ್ ವಶಕ್ಕೆ
ಪಂಚಮಸಾಲಿ ಹೋರಾಟದಿಂದ ಬೆಳಗಾವಿ ಕೊತ-ಕೊತ!
ಪಂಚಮಸಾಲಿ ಹೋರಾಟದಿಂದ ಬೆಳಗಾವಿ ಕೊತ-ಕೊತ!
ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಆಶೀರ್ವಾದ ಪಡೆದಿದ್ದೆ: ಕುಮಾರಸ್ವಾಮಿ
ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಆಶೀರ್ವಾದ ಪಡೆದಿದ್ದೆ: ಕುಮಾರಸ್ವಾಮಿ