ನಮ್ಮಮ್ಮ ಒಡವೆ ಅಡವಿಟ್ಟು ಸೂಲ್ಕ್ ಫೀಸ್ ತುಂಬಿದ್ದಾರೆ; ಪ್ರತಿಭಟನಾನಿರತ ನೌಕರರ ಪುತ್ರಿ ಅಮೃತಾ ಅಳಲು

ಇಂದು ಪ್ರತಿಭಟನೆಯಲ್ಲಿ ಭಾಗಿಯಾದ ಸಾರಿಗೆ ನೌಕರರ ಹನ್ನೇರಡು ವರ್ಷದ ಪುತ್ರಿ ಈ ಬಗ್ಗೆ ಬೆಸರ ವ್ಯಕ್ತಪಡಿಸಿದ್ದು, ನನಗೆ ಶಾಲೆಯಲ್ಲಿ ಪರೀಕ್ಷೆ ಹಾಲ್ ಟಿಕೇಟ್ ಕೊಟ್ಟಿಲ್ಲ. ನಮ್ಮಮ್ಮ ತನ್ನ ಒಡವೆ ಅಡವಿಟ್ಟು ಸೂಲ್ಕ್ ಪೀಸ್ ತುಂಬಿದ್ದಾರೆ ಎಂದು ಹೇಳಿದ್ದಾರೆ.

ನಮ್ಮಮ್ಮ ಒಡವೆ ಅಡವಿಟ್ಟು ಸೂಲ್ಕ್ ಫೀಸ್ ತುಂಬಿದ್ದಾರೆ; ಪ್ರತಿಭಟನಾನಿರತ ನೌಕರರ ಪುತ್ರಿ ಅಮೃತಾ ಅಳಲು
ಕೆಎಸ್​ಆರ್​ಟಿಸಿ ಬಸ್​
Follow us
preethi shettigar
| Updated By: Skanda

Updated on: Apr 12, 2021 | 1:56 PM

ದಾವಣಗೆರೆ: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಮುಷ್ಕರ 6ನೇ ದಿನಕ್ಕೆ ಕಾಲಿಟ್ಟಿದೆ. 6ನೇ ವೇತನ ಆಯೋಗದ ಶಿಫಾರಸನ್ನು ಜಾರಿಗೊಳಿಸುವಂತೆ ಬೇಡಿಕೆ ಮುಂದಿಟ್ಟು ಸಿಬ್ಬಂದಿ ಮುಷ್ಕರ ಮುಂದುವರೆಸಿದ್ದಾರೆ. ಇಂದು ದಾವಣಗೆರೆ ನಗರದ ಜಯದೇವ ಸರ್ಕಲ್ ಬಳಿ ಇರುವ ಶಿವಯೋಗಿ ಮಂದಿರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾದ ಸಾರಿಗೆ ನೌಕರರ 12 ವರ್ಷದ ಪುತ್ರಿ ಅಮೃತಾ ಎಂಬಾಕೆ ತಮ್ಮ ಕುಟುಂಬದ ಸಮಸ್ಯೆ ಬಗ್ಗೆ ಬೆಸರ ವ್ಯಕ್ತಪಡಿಸಿದ್ದು, ನನಗೆ ಶಾಲೆಯಲ್ಲಿ ಪರೀಕ್ಷೆ ಹಾಲ್ ಟಿಕೆಟ್ ಕೊಟ್ಟಿಲ್ಲ. ನಮ್ಮಮ್ಮ ತನ್ನ ಒಡವೆ ಅಡವಿಟ್ಟು ಸೂಲ್ಕ್ ಫೀಸ್ ತುಂಬಿದ್ದಾರೆ. ಇಂದು ಯುಗಾದಿ ಹಬ್ಬ. ಹಬ್ಬ ಬಿಟ್ಟು ಬೀದಿಯಲ್ಲಿದ್ದೇವೆ. ಇದಕ್ಕೆ ರಾಜ್ಯ ಸರ್ಕಾರ ಕಾರಣ ಎಂದು  ಅಳಲು ತೋಡಿಕೊಂಡಿದ್ದಾರೆ.

ಅಮೃತಾ ಎಂಬ ಹನ್ನೆರೆಡು ವರ್ಷದ ಬಾಲಕಿ ತಮ್ಮ ಅಳಲನ್ನು ತೋಡಿಕೊಂಡಿದ್ದು, ನಮ್ಮ ತಂದೆ ಬೆಳಿಗ್ಗೆ ಎರಡು ಗಂಟೆಗೆ ಮನೆ ಬಿಡುತ್ತಾರೆ. ರಾತ್ರಿ ಒಂಬತ್ತಕ್ಕೆ ವಾಪಸ್ಸು ಬರುತ್ತಾರೆ. ನಾವು ತಂದೆ ಜೊತೆ ಕಾಲ ಕಳೆದಿದ್ದೇ ಅಪರೂಪ. ಈಗ ಮನೆಗೆ ಬಂದು ಸಾರಿಗೆ ಅಧಿಕಾರಿಗಳು ಒತ್ತಾಯ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಬೇಡಿಕೆ ಪೂರೈಕೆ ಆಗುವ ತನಕ ಹೋರಾಟ ನಿಲ್ಲದು ಎಂದು ಬಾಲಕಿ ದಿಟ್ಟ ನುಡಿ ನುಡಿದಿದ್ದಾರೆ.

ಈ ಮಧ್ಯೆ ಕರ್ನಾಟಕ ಸರ್ಕಾರ ಅತ್ಯವಶ್ಯಕ ಸೇವೆಗಳ ನಿರ್ವಹಣಾ ಅಧಿನಿಯಮ, 2013 ರಂತೆ ಎಸ್ಮಾ ಜಾರಿಗೂ ಚಿಂತನೆ ನಡೆಸಿದೆ. ಸಾರಿಗೆ ಇಲಾಖೆಯ ನೌಕರರಲ್ಲದಿದ್ದರೂ ನೌಕರರ ಸಂಘಟನೆಗಳ ಗೌರವಾಧ್ಯಕ್ಷರಾಗಿರುವ ಕೋಡಿಹಳ್ಳಿ ಚಂದ್ರಶೇಖರ್‌ ಮುಷ್ಕರ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಇಂದು ಸಾರಿಗೆ ನೌಕರರ ಕುಟುಂಬಸ್ಥರು ಡಿಸಿ ಕಚೇರಿ ಎದುರು ತಟ್ಟೆ ಲೋಡ ಹಿಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ:

ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ; ಡಿಸಿ ಕಚೆರಿ ಮುಂದೆ ತಟ್ಟೆ ಲೋಟ ಬಡಿದು ಪ್ರತಿಭಟನೆ

ಸಾರಿಗೆ ನೌಕರರ ಮುಷ್ಕರ 3ನೇ ದಿನಕ್ಕೆ: ಎಸ್ಮಾ ಕಾಯ್ದೆ ಅಂದ್ರೇನು, ಅದನ್ನು ಜಾರಿಗೊಳಿಸಿದ್ರೆ ನೌಕರರಿಗೆ ಆಗುವ ಸಮಸ್ಯೆ ಏನು.. ವಿಶ್ಲೇಷಣೆ  

( My Mother paid school fees by pledging her jewels says KSRTC Bus Employee’s daughter in Davangere)