ಪ್ರಜ್ವಲ್ ರೇವಣ್ಣ ಪ್ರಕರಣ ನಿಸ್ಸಂದೇಹವಾಗಿ ನಾಗರಿಕ ಸಮಾಜ ತಲೆ ತಗ್ಗಿಸುವ, ವಿಶ್ವದ ಅತಿದೊಡ್ಡ ಲೈಂಗಿಕ ಹಗರಣ: ಕೃಷ್ಣ ಭೈರೇಗೌಡ

ಪ್ರಜ್ವಲ್ ರೇವಣ್ಣ ಪ್ರಕರಣ ನಿಸ್ಸಂದೇಹವಾಗಿ ನಾಗರಿಕ ಸಮಾಜ ತಲೆ ತಗ್ಗಿಸುವ, ವಿಶ್ವದ ಅತಿದೊಡ್ಡ ಲೈಂಗಿಕ ಹಗರಣ: ಕೃಷ್ಣ ಭೈರೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: May 09, 2024 | 5:56 PM

ಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣ ಇದು, ಇದರಲ್ಲಿ ಅನ್ಯಾಯವಾದವರಿಗೆ ಶಿಕ್ಷೆಯಾಗಲೇ ಬೇಕು ಮತ್ತು ತಪ್ಪಿತಸ್ಥರು ಯಾರೇ ಅಗಿರಲಿ, ಅದು ನಾನೇ ಆಗಿರಬಹುದು, ನನ್ನ ಸರ್ಕಾರ ಆಗಿರಬಹುದು ಅಥವಾ ಬೇರೆ ಯಾರೇ ಆಗಿರಬಹುದು, ಅವರಿಗೆ ಶಿಕ್ಷೆಯಾಗಲೇಬೇಕು, ಯಾವ ಕಾರಣಕ್ಕೂ ವಿಷಯಾಂತರ ಅಗಬಾರದು, ನನ್ನ ಗುರಿ ಮತ್ತು ಉದ್ದೇಶ ಇಷ್ಟೇ ಆಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ಲೈಂಗಿಕ ಟೇಪ್ ಗಳ (Prajwal Revanna sex tapes) ವಿಷಯದಲ್ಲಿ ರಾಜಕೀಯ ಮುಖಂಡರು ತಮಗೆ ತೋಚಿದ್ದನ್ನು ಹೇಳಿ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ. ಅದರೆ, ಅವರೆಲ್ಲರಿಗಿಂತ ಭಿನ್ನ ಮತ್ತು ಅರ್ಥಗರ್ಭಿತವಾಗಿ ಮಾತಾಡಿದ್ದು ಕಂದಾಯ ಸಚಿವ ಕೃಷ್ಣ ಭೈರೇಗೌಡ (Krishna Byre Gowda). ಕಂದಾಯ ಸಚಿವನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಅವರ ಬಗ್ಗೆ ಕುಮಾರಸ್ವಾಮಿ ಹೇಳಿದ್ದನ್ನು ತಿಳಿಸಿದಾಗ ಗಂಭೀರ ಸ್ವರೂಪದ ಬೈರೇಗೌಡರು ಜೋರಾಗಿ ನಕ್ಕರು. ಆರೋಪ-ಪ್ರತ್ಯಾರೋಪಗಳಲ್ಲಿ ತನಗೆ ಯಾವುದೇ ಆಸಕ್ತಿ ಇಲ್ಲ ಎಂದ ಅವರು, ಮೊದಲು ಹೇಳಿದ್ದನ್ನು ಪುನರುಚ್ಛರಿಸುತ್ತೇನೆ, ಇದು ವಿಶ್ವದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣ (world’s biggest sex scandal), ಅದರಲ್ಲಿ ಎರಡು ಮಾತಿಲ್ಲ, ಒಬ್ಬ ನಿವೃತ್ತ ಐಎಎಸ್ ಅಧಿಕಾರಿ ಇಂದು ಬೆಳಗ್ಗೆ ತನಗೆ ಫೋನ್ ಮಾಡಿ ವಿಡಿಯೋ ನೋಡಿದ ಬಳಿಕ ತನಗೆ ವಿಪರೀತ ಮಾನಸಿಕ ಹಿಂಸೆಯಾಗುತ್ತಿದೆ ಅಂತ ಕಣ್ಣೀರು ಸುರಿಸಿದ್ದಾರೆ ಎಂದು ಹೇಳಿದರು. ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣ ಇದು, ಇದರಲ್ಲಿ ಅನ್ಯಾಯವಾದವರಿಗೆ ಶಿಕ್ಷೆಯಾಗಲೇ ಬೇಕು ಮತ್ತು ತಪ್ಪಿತಸ್ಥರು ಯಾರೇ ಅಗಿರಲಿ, ಅದು ನಾನೇ ಆಗಿರಬಹುದು, ನನ್ನ ಸರ್ಕಾರ ಆಗಿರಬಹುದು ಅಥವಾ ಬೇರೆ ಯಾರೇ ಆಗಿರಬಹುದು, ಅವರಿಗೆ ಶಿಕ್ಷೆಯಾಗಲೇಬೇಕು, ಯಾವ ಕಾರಣಕ್ಕೂ ವಿಷಯಾಂತರ ಅಗಬಾರದು, ನನ್ನ ಗುರಿ ಮತ್ತು ಉದ್ದೇಶ ಇಷ್ಟೇ ಆಗಿದೆ ಎಂದು ಕೃಷ್ಣ ಭೈರೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಗೊಂದಲದ ಗೂಡಾಗಿರುವ ಬಿಜೆಪಿಗೆ ಜೆಡಿಎಸ್ ಜೊತೆಯ ಮೈತ್ರಿ ಅದನ್ನು ಇನ್ನಷ್ಟು ಹೆಚ್ಚಿಸಿದೆ: ಕೃಷ್ಣ ಭೈರೇಗೌಡ, ಸಚಿವ