ಸುದ್ದಿಗೋಷ್ಟಿಯನ್ನು ಅವಸರದಲ್ಲಿ ಮುಗಿಸಿ ರಾಜ್ಯಪಾಲರ ಭೇಟಿಗೆ ಧಾವಿಸಿದ ಕುಮಾರಸ್ವಾಮಿ!

ಸುದ್ದಿಗೋಷ್ಟಿಯನ್ನು ಅವಸರದಲ್ಲಿ ಮುಗಿಸಿ ರಾಜ್ಯಪಾಲರ ಭೇಟಿಗೆ ಧಾವಿಸಿದ ಕುಮಾರಸ್ವಾಮಿ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 09, 2024 | 5:04 PM

ಅವತ್ತು ರಾಮನಗರದಲ್ಲಿ ಮಾಧ್ಯಮಗಳ ಜೊತೆ ಹುರುಪಿನಿಂದ ಮಾತಾಡಿದ ಒಂದರೆಡು ತಾಸುಗಳ ಬಳಿಕ ಅವರು ಮಂಡ್ಯದಲ್ಲಿ ಕಾಣಿಸಿದ್ದರು. ಆದರೆ ಅಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ  ಅನ್ಯಮನಸ್ಕರಾಗಿದ್ದರು. ವ್ಯತಿರಿಕ್ತ ವಿದ್ಯಮಾನಗಳ ನಡುವೆ ಸಿಕ್ಕು ಅವರು ಒದ್ದಾಡುತ್ತಿದ್ದಾರೆ.

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರ (HD Kumaraswamy) ಮನಸ್ಸಲ್ಲಿರೋದೇನು, ಅವರ ಉದ್ದೇಶಗಳೇನು ಅಂತ ಅರ್ಥಮಾಡಿಕೊಳ್ಳುವುದು ಕನ್ನಡಿಗರಿಗೆ ಕಷ್ಟವಾಗುತ್ತಿದೆ. ಅವರು ಜೆಡಿಎಸ್ ಕಚೇರಿಯಲ್ಲಿ (JDS office) ಸುದ್ದಿಗೋಷ್ಟಿ ನಡೆಸುತ್ತಿದ್ದ ವಿಷಯವನ್ನು ನಾವು ವರದಿ ಮಾಡಿದ್ದೇವೆ. ಆದರೆ, ಸುದ್ದಿಗೋಷ್ಟಿ ವಿದ್ಯುಕ್ತವಾಗಿ ಕೊನೆಗೊಳ್ಳುವ ಮೊದಲೇ ಕುಮಾರಸ್ವಾಮಿ ಅವಸರದಲ್ಲಿ ರಾಜ್ಯಪಾಲರ (governor) ಭೇಟಿಗಾಗಿ ರಾಜಭವನ ತೆರಳಿದರು. ಅಷ್ಟು ಧಾವಂತದಲ್ಲಿ ಅವರು ಹೋಗಿದ್ದು ನೋಡಿದರೆ ಯಾವುದೋ ಮಹತ್ವದ ವಿಷಯ ಚರ್ಚೆಗೆ ಇರಬಹುದು ಅನಿಸುತ್ತೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 26ರಂದು ಮತದಾನ ನಡೆದ ಬಳಿಕ ಕುಮಾರಸ್ವಾಮಿ ಸಾಮಾನ್ಯವಾಗಿಲ್ಲ. ಅಷ್ಟರಲ್ಲಾಗಲೇ ಅವರಿಗೆ ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ಗಳು ಹಾಸನ ಮತ್ತು ರಾಜ್ಯದ ಬೇರೆ ಭಾಗಗಳಲ್ಲೂ ಹರಿದಾಡುತ್ತಿದ್ದ ವಿಷಯ ಅವರಿಗೆ ಗೊತ್ತಾಗಿರಬೇಕು. ನಿಮಗೆ ನೆನಪಿರಬಹುದು, ಅವತ್ತು ರಾಮನಗರದಲ್ಲಿ ಮಾಧ್ಯಮಗಳ ಜೊತೆ ಹುರುಪಿನಿಂದ ಮಾತಾಡಿದ ಒಂದರೆಡು ತಾಸುಗಳ ಬಳಿಕ ಅವರು ಮಂಡ್ಯದಲ್ಲಿ ಕಾಣಿಸಿದ್ದರು. ಆದರೆ ಅಲ್ಲಿ ಸುದ್ದಿಗಾರರೊಂದಿಗೆ ಮಾತಾಡುವಾಗ  ಅನ್ಯಮನಸ್ಕರಾಗಿದ್ದರು. ವ್ಯತಿರಿಕ್ತ ವಿದ್ಯಮಾನಗಳ ನಡುವೆ ಸಿಕ್ಕು ಅವರು ಒದ್ದಾಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಟಾಚಾರಕ್ಕೆ ಮತ್ತು ಗೇಲಿ ಮಾಡುತ್ತಾ ಡಿಕೆ ಶಿವಕುಮಾರ್ ಕ್ಷಮೆಯಾಚಿಸಿದ ಹೆಚ್ ಡಿ ಕುಮಾರಸ್ವಾಮಿ!