Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾತಾಡುವಾಗ ಕುಮಾರಸ್ವಾಮಿ ನಾಲಗೆ ಮೇಲೆ ಹಿಡಿತ ಹೊಂದಿರಬೇಕು: ಕೆಎಂ ಶಿವಲಿಂಗೇಗೌಡ

ಮಾತಾಡುವಾಗ ಕುಮಾರಸ್ವಾಮಿ ನಾಲಗೆ ಮೇಲೆ ಹಿಡಿತ ಹೊಂದಿರಬೇಕು: ಕೆಎಂ ಶಿವಲಿಂಗೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: May 09, 2024 | 3:07 PM

ಪೆನ್ ಡ್ರೈವ್ ಗಳ ವಿಷಯ 4-5 ತಿಂಗಳುಗಳಿಂದ ಹರಿದಾಡುತಿತ್ತು, ಅದರೆ ಅವುಗಳನ್ನು ಸಾರ್ವಜನಿಕಗೊಳಿಸದಂತೆ ನ್ಯಾಯಲಯದಿಂದ ತಡೆಯಾಜ್ಞೆ ತಂದಿದ್ದ ಕಾರಣ ಅವು ಬೆಳಕಿಗೆ ಬಂದಿರಲಿಲ್ಲ ಎಂದು ಹೇಳಿದರು. ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಮತ್ತು ವಕೀಲ ದೇವರಾಜೇಗೌಡ ಅವರು ದಿನಕ್ಕೊಂದು ಪತ್ರಿಕಾ ಗೋಷ್ಟಿ ನಡೆಸುತ್ತಿರುವ ಔಚಿತ್ಯವನ್ನು ಶಿವಲಿಂಗೇಗೌಡ ಪ್ರಶ್ನಿಸಿದರು.

ಹಾಸನ: ನಗರದ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಅರಸೀಕೆರೆ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ (KM Shivalingegowda) ಅವರು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ (Prajwal Revanna sleazed videos) ಮತ್ತು ಹೆಚ್ ಡಿ ರೇವಣ್ಣ ಬಂಧನ ಪ್ರಕರಣಗಳಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯರು (HD Kumaraswamy) ಮನಬಂದಂತೆ ನಾಲಗೆ ಹರಿಬಿಡುತ್ತಿದ್ದಾರೆ, ಸರ್ಕಾರದಲ್ಲಿ ಉನ್ನತ ಸ್ಥಾನಗಳಲ್ಲಿರುವ ಜನನ ಬಗ್ಗೆ ಕೇವಲವಾಗಿ ಮತ್ತು ಅವಹೇಳನಕಾರಯಾಗಿ ಮಾತಾಡುವುದು ಸರಿಯಲ್ಲ ಎಂದರು. ಜೆಡಿಎಸ್ ಮತ್ತು ಬಿಜೆಪಿ ನಾಯಕರು ಪೆನ್ ಡ್ರೈವ್ ಗಳು ಸಾರ್ವಜನಿಕಗೊಂಡಿದ್ದಕ್ಕೆ ಸರ್ಕಾರವನ್ನು ದೂರುತ್ತಿದ್ದಾರೆ, ಇದಕ್ಕೆ ಸರ್ಕಾರ ಹೇಗೆ ಕಾರಣವಾಗುತ್ತದೆ ಎಂದು ಪ್ರಶ್ನಿಸಿದ ಶಿವಲಿಂಗೇಗೌಡರು, ಪೆನ್ ಡ್ರೈವ್ ಗಳ ವಿಷಯ 4-5 ತಿಂಗಳುಗಳಿಂದ ಹರಿದಾಡುತಿತ್ತು, ಅದರೆ ಅವುಗಳನ್ನು ಸಾರ್ವಜನಿಕಗೊಳಿಸದಂತೆ ನ್ಯಾಯಲಯದಿಂದ ತಡೆಯಾಜ್ಞೆ ತಂದಿದ್ದ ಕಾರಣ ಅವು ಬೆಳಕಿಗೆ ಬಂದಿರಲಿಲ್ಲ ಎಂದು ಹೇಳಿದರು. ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ಮತ್ತು ವಕೀಲ ದೇವರಾಜೇಗೌಡ ಅವರು ದಿನಕ್ಕೊಂದು ಪತ್ರಿಕಾ ಗೋಷ್ಟಿ ನಡೆಸುತ್ತಿರುವ ಔಚಿತ್ಯವನ್ನು ಶಿವಲಿಂಗೇಗೌಡ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನಾನು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿಯಾಗಬೇಕಾದರೆ ಶ್ರೇಯಸ್ ಪಟೇಲ್​ರನ್ನು ಗೆಲ್ಲಿಸಬೇಕು: ಕೆಎಂ ಶಿವಲಿಂಗೇಗೌಡ