ಕಾಟಾಚಾರಕ್ಕೆ ಮತ್ತು ಗೇಲಿ ಮಾಡುತ್ತಾ ಡಿಕೆ ಶಿವಕುಮಾರ್ ಕ್ಷಮೆಯಾಚಿಸಿದ ಹೆಚ್ ಡಿ ಕುಮಾರಸ್ವಾಮಿ!
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ವಿಶ್ವದ ಅತಿದೊಡ್ಡ ಲೈಂಗಿಕ ಹಗರಣ ಅಂತ ಹೇಳಿರುವುದನ್ನು ಕುಮಾರಸ್ವಾಮಿ ಟೀಕಿಸುತ್ತಾರೆ. ಕಾಂಗ್ರೆಸ್ ನಾಯಕರಿಗೆ ಸಂತ್ರಸ್ತೆಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ, ಅವರ ಗುರಿ ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಕೊನೆಗೊಳಿಸುವುದಾಗಿದೆ ಎಂದರು.
ಬೆಂಗಳೂರು: ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ಇಂದು ಪಕ್ಷದ ಮುಖಂಡರ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ಹೆಚ್ ಡಿ ಕುಮಾರಸ್ವಾಮಿಯವರು (HD Kumaraswamy), ನಿನ್ನೆ ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ವಿರುದ್ಧ ಏಕವಚನದಲ್ಲಿ ಮಾತಾಡಿದ್ದಕ್ಕೂ ಗೇಲಿ ಮಾಡುವ ರೀತಿಯಲ್ಲಿ ಕ್ಷಮೆಯಾಚಿಸಿದರು. ಅವರು ಕ್ಷಮೆ ಕೇಳುವ ರೀತಿ ನೋಡಿ ಹೇಗಿದೆ? ಏಕವಚನದಲ್ಲಿ ಮಾತಾಬಾರದಂತಪ್ಪ ಈ ನಾಯಕರ ಬಗ್ಗೆ, ಅವರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎನ್ನುತ್ತಾರೆ. ಅವರ ಮುಖದಲ್ಲಾಗಲೀ ಆಡಿದ ಮಾತಲ್ಲಾಗಲೀ ವಿಷಾದದ ಛಾಯೆ ಕಾಣೋದಿಲ್ಲ. ಬಿಡಿ ಅದರ ಬಗ್ಗೆ ಚರ್ಚೆ ಬೇಡ. ಪ್ರೊಡ್ಯೂಸರ್-ಡೈರೆಕ್ಟರ್ ಅಂತ ಶಿವಕುಮಾರ್ ಹೇಳಿದ್ದಕ್ಕೆ ಕುಮಾರಸ್ವಾಮಿ ಒಬ್ಬ ನಿರ್ಮಾಪಕರೂ ಆಗಿರುವುದರಿಂದ ಸಿನಿಮಾಗಳ ಬಗ್ಗೆ ಮಾತಾಡುತ್ತಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಪ್ರಜ್ವಲ್ ರೇವಣ್ಣ ಪ್ರಕರಣವನ್ನು ವಿಶ್ವದ ಅತಿದೊಡ್ಡ ಲೈಂಗಿಕ ಹಗರಣ ಅಂತ ಹೇಳಿರುವುದನ್ನು ಕುಮಾರಸ್ವಾಮಿ ಟೀಕಿಸುತ್ತಾರೆ. ಕಾಂಗ್ರೆಸ್ ನಾಯಕರಿಗೆ ಸಂತ್ರಸ್ತೆಯರ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ, ಅವರ ಗುರಿ ಜೆಡಿಎಸ್-ಬಿಜೆಪಿ ಮೈತ್ರಿಯನ್ನು ಕೊನೆಗೊಳಿಸುವುದಾಗಿದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಬೆಂಗಳೂರಿನಲ್ಲೇ ಇದ್ದಾನೆ ಕಾರ್ತಿಕ್, ಡಿಕೆಶಿಯಿಂದಲೇ ರಕ್ಷಣೆ; ಕುಮಾರಸ್ವಾಮಿ ಸ್ಫೋಟಕ ಹೇಳಿಕೆ