AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಕ್ತಾದಿಗಳೇ ಗಮನಿಸಿ, ಮೈಸೂರು ಚಾಮುಂಡಿ ತಾಯಿ ದರ್ಶನಕ್ಕೆ ಮುಂದಿನ 14 ದಿನಗಳ ಕಾಲ ನಿರ್ಬಂಧ

ಇಂದು ರಾತ್ರಿ 9 ರಿಂದ ಮೇ 4 ರ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಅರ್ಚಕರು ಎಂದಿನಂತೆ ಪೂಜೆ ಪುನಸ್ಕಾರ ನಡೆಸಲಿದ್ದಾರೆ. ಈ ಕುರಿತು ಚಾಮುಂಡಿ ಬೆಟ್ಟದ ಕಾರ್ಯ ನಿರ್ವಹಣಾ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.

ಭಕ್ತಾದಿಗಳೇ ಗಮನಿಸಿ, ಮೈಸೂರು ಚಾಮುಂಡಿ ತಾಯಿ ದರ್ಶನಕ್ಕೆ ಮುಂದಿನ 14 ದಿನಗಳ ಕಾಲ ನಿರ್ಬಂಧ
ಮೈಸೂರು ಚಾಮುಂಡಿ ಬೆಟ್ಟ (ಸಂಗ್ರಹ ಚಿತ್ರ)
guruganesh bhat
|

Updated on: Apr 21, 2021 | 8:45 PM

Share

ಮೈಸೂರು: ಕೊರೊನಾ ಸೋಂಕಿನ ಹೆಚ್ಚಳದ ಕಾರಣ ಮುಂದಿನ ಹದಿನಾಲ್ಕು ದಿನಗಳ ಕಾಲ ಮೈಸೂರಿನ ಬೆಟ್ಟದಲ್ಲಿ ಚಾಮುಂಡಿ ದರ್ಶನಕ್ಕೆ ಅವಕಾಶ ನಿರ್ಬಂಧಿಸಲಾಗಿದೆ. ಇಂದು ರಾತ್ರಿ 9 ರಿಂದ ಮೇ 4 ರ ಬೆಳಗ್ಗೆ 6 ಗಂಟೆವರೆಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಆದರೆ ಅರ್ಚಕರು ಎಂದಿನಂತೆ ಪೂಜೆ ಪುನಸ್ಕಾರ ನಡೆಸಲಿದ್ದಾರೆ. ಈ ಕುರಿತು ಚಾಮುಂಡಿ ಬೆಟ್ಟದ ಕಾರ್ಯ ನಿರ್ವಹಣಾ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಕೊವಿಡ್ ಸೋಂಕಿನ ಹೆಚ್ಚಳ ಕಂಡುಬಂದ ಕಾರಣ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡುವಂತೆ ಒತ್ತಾಯಿಸಿ ಸಿಎಂ ಯಡಿಯೂರಪ್ಪಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮನವಿ ಮಾಡಿದ್ದಾರೆ.  ಸಮರೋಪಾದಿಯಲ್ಲಿ ಕೊರೊನಾ ಕಾರ್ಯಾಚರಣೆ ನಡೆಸುವಂತೆ ಸಲಹೆ ನೀಡಿರುವ ಅವರು,  ವೆಂಟಿಲೇಟರ್, ಆಕ್ಸಿಜನ್ ಮುಂತಾದ ಸೂಕ್ತ ಸೌಲಭ್ಯ ಒದಗಿಸಲು ಸಲಹೆ ನೀಡಿದ್ದಾರೆ.  ತಜ್ಞ ವೈದ್ಯರು ಹಾಗೂ ತಂತ್ರಜ್ಞರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಬೇಕು. ಕೊರೊನಾ ವಿರುದ್ಧ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಅವರು ಸಿಎಂ ಯಡಿಯೂರಪ್ಪಗೆ ಪತ್ರದ ಮೂಲಕ ಸಲಹೆ ನೀಡಿದ್ದಾರೆ.

ರಾಜ್ಯ ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟ ರಾತ್ರಿ 9ರಿಂದ ಮೇ 4ರವರೆಗೆ ರಾಜ್ಯದಲ್ಲಿ ಕ್ಲಬ್​ಗಳನ್ನು ತೆರೆಯಲು ಅವಕಾಶವಿಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇಂದು ಬಿಡುಗಡೆ ಮಾಡಿರುವ ನೂತನ ಪರಿಷ್ಕೃತ ಮಾರ್ಗಸೂಚಿಯಲ್ಲಿ ಈಕುರಿತು ವಿವರಿಸಲಾಗಿದ್ದು, ಮೇ 4ರವರೆಗೆ ಕ್ಲಬ್​ಗಳನ್ನು ತೆರೆಯಲು ಅವಕಾಶವಿಲ್ಲ ಎಂದು ನೀಡಲಾಗಿದೆ.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ

ನಾನ್ ಕೊವಿಡ್ ರೋಗಿಗಳನ್ನು  30 ಬೆಡ್ ಗಳಿಗಿಂತ ಕಡಿಮೆ ಇರುವ ನರ್ಸಿಂಗ್ ಹೋಂ ಗಳಿಗೆ ರವಾನೆ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಕೂಡ ಸಣ್ಣ ಸಮಸ್ಯೆ ಕೂಡ ಆಗಬಾರದು ಅಂತ ವ್ಯವಸ್ಥೆ ಮಾಡಲಾಗ್ತಿದೆ. 8951755722  ನಂಬರ್​ಗೆ  ಕಾಲ್ ಮಾಡಿದರೆ ಆಕ್ಸಿಜನ್ ಎಲ್ಲಿಯೇ ಬೇಕಾದರೂ  ಸರಬರಾಜು ಮಾಡಲಾಗುತ್ತದೆ ಎಂದು ಸಚಿವ ಡಾ.ಕೆ.ಸುಧಾಕರ್ ವಿವರಿಸಿದರು.

ಬೆಂಗಳೂರು ನಗರದಲ್ಲಿ ಯಾವುದೇ ಕಾರಣಕ್ಕೂ ಕೂಡ ಆಕ್ಸಿಜನ್ ಕೊರತೆ ಇಲ್ಲ. ಇಂದು 5000 ಸಿಲಿಂಡರ್ ಪೂರೈಕೆ ಆಗುತ್ತಿದೆ. 40 ಮೆಟ್ರಿಕ್ ಟನ್ ಹೆಚ್ಚುವರಿ ಆಕ್ಸಿಜನ್​ನ್ನು ಜೆಎಸ್​ಡಬ್ಲ್ಯೂ ಸಂಸ್ಥೆ ಕೊಟ್ಟಿದೆ. ಕೈಗಾರಿಕಾ ಆಯುಕ್ತರು ಸಿಎಸ್ಆರ್ ಫಂಡ್ ಮೂಲಕ ಮತ್ತೆ 500 ಸಿಲಿಂಡರ್ ವ್ಯವಸ್ಥೆ ಮಾಡಿದ್ದಾರೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ತೆಗೆದುಕೊಳ್ಳಲು ಅರ್ಹರು. ಎಲ್ಲರೂ ತಮ್ಮ ಮನೆಯಲ್ಲಿರುವ ಹಿರಿಯರಿಗೆ ಲಸಿಕೆ ಕೊಡಿಸುವುದು ಮುಖ್ಯ. ಒಟ್ಟಾರೆಯಾಗಿ 12.7 ಕೋಟಿ ಡೋಸ್ ಗಳನ್ನು ಲಸಿಕೆ ವಿತರಿಸಲಾಗಿದೆ. ಲಸಿಕೆ ತೆಗೆದುಕೊಂಡ 99.96 ಶೇಕಡಾ ಜನರಲ್ಲಿ ಸೋಂಕು ಹರಡಿಲ್ಲ. ಸರ್ಕಾರದಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಕೂಡ ಅತಿ ಶೀಘ್ರದಲ್ಲಿ ಲಸಿಕೆ ತೆಗೆದುಕೊಳ್ಳಲಿ ಎಂದು ಅವರು ವಿವರಿಸಿದರು. ತಾಯಿ

ಇದನ್ನೂ ಓದಿ: ಕೊವಿಡ್ ಇಲ್ಲದ ರೋಗಿಗಳ ಚಿಕಿತ್ಸೆಗೆ ಹೊಸ ವ್ಯವಸ್ಥೆ, ಆಕ್ಸಿಜನ್​ಗೆ ಕಾಲ್​ಸೆಂಟರ್: ಡಾ.ಕೆ.ಸುಧಾಕರ್

ದೇಶವ್ಯಾಪಿ ಕೊರೊನಾ 2ನೇ ಅಲೆ, ಸತ್ತವರಲ್ಲಿ ವೃದ್ಧರೇ ಹೆಚ್ಚು: ಐಸಿಎಂಆರ್

(Mysore Chamundi temple darshan restrictions on surge of covid cases)