Mysore Mayor Election: ಚುನಾವಣಾ ರಣತಂತ್ರ ರೂಪಿಸಿದ ‘ಕೈ’; ಹೇಗಿದೆ ಪಕ್ಷಗಳ ಬಲಾಬಲ?
ಮೈಸೂರು ಪಾಲಿಕೆ ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಒಂದೆಡೆ ಬಿಜೆಪಿ ಕೈ-ಜೆಡಿಎಸ್ ಮೈತ್ರಿಯನ್ನು ಮುಂದೆ ನೋಡುತ್ತಿದ್ದು, ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ ಜಪಿಸುತ್ತಿದೆ. ಕಾಂಗ್ರೆಸ್ ಜೆಡಿಎಸ್ ತನ್ನೊಂದಿಗೆ ಮೈತ್ರಿ ಮಾಡಿಕೊಳ್ಳದಿದ್ದರೆ ಮುಂದೇನು? ಎಂಬ ಪ್ರಶ್ನೆಗೆ ಉತ್ತರವಾಗಿ ರಣತಂತ್ರ ರೂಪಿಸಿದೆ.
ಮೈಸೂರು: ಪಾಲಿಕೆ ಮೇಯರ್ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಮೇಯರ್ ಗಾದಿ ಹಿಡಿಯಲು ಕಾಂಗ್ರೆಸ್ ಪಕ್ಷ ರಣತಂತ್ರ ರೂಪಿಸಿದೆ. ಪಾಲಿಕೆಯಲ್ಲಿ ಗೆದ್ದುಗೆ ಹಿಡಿಯಲು ಸಂಖ್ಯಾ ಬಲವನ್ನು ಹೆಚ್ಚಿಸಲು ಯೋಜನೆಯನ್ನು ಕೈ ನಾಯಕರು ಹಾಕಿಕೊಂಡಿದ್ದಾರೆ. ಅದರಂತೆ ಮಂಡ್ಯ ಪರಿಷತ್ಗೆ ಕಾಂಗ್ರೆಸ್ನಿಂದ ಆಯ್ಕೆಯಾಗಿರುವ ದಿನೇಶ್ ಗೂಳಿಗೌಡ ಅವರು ಹೆಸರು ಮೈಸೂರು ನಿವಾಸಿ ಎಂದು ಮತಪಟ್ಟಿಗೆ ಸೇರಿಸಲಾಗಿದೆ. ಮಧು ಮಾದೇಗೌಡ, ತಿಮ್ಮಯ್ಯ ಕೂಡ ಈಗ ಮತದಾರರು ಅಲ್ಲಿನ ಮತದಾರರಾಗಿದ್ದಾರೆ. ಇದರಿಂದಾಗಿ ಪಾಲಿಕೆ ಚುನಾವಣೆಯಲ್ಲಿ ಓರ್ವ ಕಾಂಗ್ರೆಸ್ ಸದಸ್ಯೆ ಗೆದ್ದುಕೊಂಡು ಸಂಖ್ಯಾ ಬಲವನ್ನು ಹೆಚ್ಚಿಸಿಕೊಂಡಿದೆ. ಹಾಗಿದ್ದರೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಲ್ಲಿನ ಸಂಖ್ಯಾ ಬಲ ಹೇಗಿದೆ?
ಕಾಂಗ್ರೆಸ್ ಪಕ್ಷದ ಸಂಖ್ಯಾ ಬಲ
- ಪಾಲಿಕೆ ಸದಸ್ಯರು-21
- ಶಾಸಕರ ಸಂಖ್ಯೆ- 01
- ಪರಿಷತ್ ಸದಸ್ಯರ ಸಂಖ್ಯೆ- 03
- ಪಕ್ಷೇತರ ಬೆಂಬಲ- 2
- ಒಟ್ಟು 27
ಬಿಜೆಪಿ ಸಂಖ್ಯಾ ಬಲ
- ಪಾಲಿಕೆ ಸದಸ್ಯರಸಂಖ್ಯೆ- 22
- ಶಾಸಕರ ಸಂಖ್ಯೆ- 02
- ಪರಿಷತ್ ಸದಸ್ಯರ ಸಂಖ್ಯೆ- 01
- ಸಂಸದರು- 01
- ಪಕ್ಷೇತರ ಬೆಂಬಲ- 01
- ಒಟ್ಟು 27
ಜೆಡಿಎಸ್ ಪಕ್ಷದ ಸಂಖ್ಯಾ ಬಲ
- ಪಾಲಿಕೆ ಸದಸ್ಯರ ಸಂಖ್ಯೆ- 17
- ಶಾಸಕರ ಸಂಖ್ಯೆ- 01
- ಪರಿಷತ್ ಸದಸ್ಯರ ಸಂಖ್ಯೆ- 02
- ಪಕ್ಷೇತರರ ಬೆಂಬಲ- 02
- ಒಟ್ಟು 22
ಮೈತ್ರಿ ಜಪಿಸುತ್ತಿರುವ ಜೆಡಿಎಸ್
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮುಸುಕಿನ ಗುದ್ದಾಟ ನಡೆದು ಮೇಯರ್ ಗಾದಿಯಲ್ಲಿ ತಟಸ್ಥವಾಗಿ ನಿಂತುಬಿಟ್ಟಿತ್ತು. ಇದರ ಫಲವಾಗಿ ಮೇಯರ್ ಸ್ಥಾನ ಬಿಜೆಪಿ ಪಾಲಾಗಿತ್ತು. ಈ ಬಾರಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಹೊಂದಾಣಿಕೆಯಾಗದಿದ್ದರೆ ತಮಗೆ ಮೇಯರ್ ಗಾದಿ ಮತ್ತೊಮ್ಮೆ ಒಲಿಯದೆ ಎಂದು ಬಿಜೆಪಿ ಚಿಂತನೆಯಲ್ಲಿದೆ. ಆದರೆ ಇತ್ತ ಕಾಂಗ್ರೆಸ್ ಜೆಡಿಎಸ್ ನಡೆ ಏನು ಎಂಬುದರ ಮೇಲೆ ಕಣ್ಣಿಟ್ಟುಕೊಂಡಿದೆ. ಮೈತ್ರಿ ಮಾಡದಿದ್ದರೇ ಮುಂದೇನು? ಎಂಬ ಪ್ರಶ್ನೆಗೆ ಉತ್ತರವಾಗಿ ರಣತಂತ್ರ ರೂಪಿಸಿಕೊಂಡಿದೆ. ಇನ್ನೊಂದೆಡೆ ಮೈತ್ರಿ ಜಪಿಸುತ್ತಿರುವ ಜೆಡಿಎಸ್, ಮೇಯರ್ ಸ್ಥಾನ ತಮಗೆ ಬಿಟ್ಟುಕೊಡುವಂತೆ ಹೇಳಿಕೊಳ್ಳುತ್ತಿದೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:23 am, Sat, 3 September 22