ದುಬೈನಲ್ಲಿ ಮೋದಿ ಕಾರ್ಯಕ್ರಮ ಆಯೋಜಿಸಿದ್ದ ಉದ್ಯಮಿ ಬಿ.ಆರ್.ಶೆಟ್ಟಿ ಮಂಗಳೂರಿನಲ್ಲಿ ಮೂಲೆಗುಂಪು
ಅಂದು ದುಬೈನಲ್ಲಿನ ಪ್ರಧಾನಿ ಮೋದಿ ಅವರ ಕಾರ್ಯಕ್ರಮವನ್ನು ಆಯೋಜಿಸಿದ್ದ ಉದ್ಯಮಿ ಬಿ.ಆರ್.ಶೆಟ್ಟಿ ಅವರು ಇಂದು ಮಂಗಳೂರಿನಲ್ಲಿ ಮೂಲೆಗುಂಪಾಗಿದ್ದಾರೆ. ಪೊಲೀಸರು ಶೆಟ್ಟಿ ಅವರನ್ನು ಒಳಗೆ ಪ್ರವೇಶ ಮಾಡಲು ನಿರಾಕರಿಸಿದ ಹಿನ್ನೆಲೆ ಅವರು ವಾಪಸ್ ಆಗಿದ್ದಾರೆ.
ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು 3,800 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗಿಯಾಗಿದ್ದರು. ಆದರೆ ಈ ಕಾರ್ಯಕ್ರಮಕ್ಕೆ ವೀಕ್ಷಿಸಲು ಬಂದ ಉದ್ಯಮಿ ಬಿ.ಆರ್.ಶೆಟ್ಟಿ ಮೂಲೆಗುಂಪಾಗಿದ್ದಾರೆ. ಪೊಲೀಸರು ಅವರನ್ನು ಗೇಟ್ ಒಳಗೆ ಪ್ರವೇಶವನ್ನು ನಿರಾಕರಿಸಿದ ಹಿನ್ನೆಲೆ ಸಭಾಂಗಣಕ್ಕೆ ಹೋಗಲಾರದೆ ಬಿ.ಆರ್. ಶೆಟ್ಟಿ ವಾಪಾಸಾಗಿದ್ದಾರೆ.
ಅಂದು ದುಬೈನಲ್ಲಿನ ಪ್ರಧಾನಿ ಮೋದಿ ಅವರ ಕಾರ್ಯಕ್ರಮವನ್ನು ಆಯೋಜಿಸಿದ್ದ ಉದ್ಯಮಿ ಬಿ.ಆರ್.ಶೆಟ್ಟಿ ಅವರು ಇಂದು ಮಂಗಳೂರಿನಲ್ಲಿ ಮೂಲೆಗುಂಪಾಗಿದ್ದಾರೆ. ವಿಶ್ವದ ಹಲವು ದೇಶಗಳಲ್ಲಿ ಉದ್ದಿಮೆ ಹೊಂದಿರುವ ಶೆಟ್ಟಿ, ಮೋದಿ ಆಗಮಿಸಿದ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಆಗಮಿಸಿದಾಗ ಪೊಲೀಸರು ಗೇಟಿನೊಳಗೆ ಬಿಡದ ಹಿನ್ನೆಲೆ ಸಭಾಂಗಣಕ್ಕೆ ಹೋಗಲಾರದೆ ವಾಪಸ್ ತೆರಳಿದ್ದಾರೆ. ಶೆಟ್ಟಿ ಬೆಂಬಲಿಗರು ಕಾರ್ಯಕ್ರಮಕ್ಕೆ ಅವರನ್ನಾದರೂ ಬಿಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪೊಲೀಸರು ಒಳಗಡೆ ಪ್ರವೇಶ ನಿರಾಕರಿಸಿದ್ದಾರೆ.
ವಂಚನೆ ಪ್ರಕರಣದಲ್ಲಿ ಸಿಲುಕಿದ್ದ ಶೆಟ್ಟಿ
ವಿಶ್ವದ ಹಲವು ದೇಶಗಳಲ್ಲಿ ಉದ್ದಿಮೆ ಹೊಂದಿರುವ ಬಿ.ಆರ್.ಶೆಟ್ಟಿ, ಮೋದಿಗೆ ಪರಿಚಿತರೂ ಆಗಿದ್ದರು. ಇಂತಹ ಶೆಟ್ಟಿ ಲಂಡನ್ನಲ್ಲಿ ವಂಚನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆ ದೇಶದಲ್ಲಿ ಶೆಟ್ಟಿ ವಿರುದ್ಧ ಕೇಳಿಬಂದ ಆರೋಪ ಬರೋಬ್ಬರಿ 960 ಕೋಟಿ ರೂಪಾಯಿ ವಂಚನೆ. ಅದರಂತೆ ಬಿ.ಆರ್.ಶೆಟ್ಟಿ ಆಸ್ತಿ ಮುಟ್ಟುಗೋಲಿಗೆ ಲಂಡನ್ ಕೋರ್ಟ್ ಆದೇಶಿಸಿತ್ತು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:13 pm, Fri, 2 September 22