ಅಪ್ಪನ ಹಾದಿಯಲ್ಲಿ ಮಗ.. 45 ಹಾವಿನ ಮರಿಗಳ ರಕ್ಷಿಸಿದ ಮೈಸೂರಿನ ಉರಗ ಸಂರಕ್ಷಕ

ಉರಗ ಸಂರಕ್ಷಕ ಸೂರ್ಯಕೀರ್ತಿ ಸ್ನೇಕ್ ಶ್ಯಾಮ ಅವರ ಪುತ್ರರಾಗಿದ್ದು, ಎರಡು ತಿಂಗಳ ಹಿಂದೆ ಖಾಲಿ ನಿವೇಶನದಲ್ಲಿ‌ ಸಿಕ್ಕಿದ್ದ 45 ಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿ‌ ಕೃತಕ ಕಾವಿನ ವ್ಯವಸ್ಥೆ ಮಾಡಿದ್ದರು.ಸದ್ಯ ಎಲ್ಲಾ 45 ಮೊಟ್ಟೆಗಳಿಂದಲೂ ಮರಿ ಜನನವಾಗಿದ್ದು, ನೀರಿನ ಹಾವು ಜಾತಿಗೆ ಸೇರಿದ ಹಾವಿನ ಮರಿಗಳು ಎಂದು ತಿಳಿದುಬಂದಿದೆ.

ಅಪ್ಪನ ಹಾದಿಯಲ್ಲಿ ಮಗ.. 45 ಹಾವಿನ ಮರಿಗಳ ರಕ್ಷಿಸಿದ ಮೈಸೂರಿನ ಉರಗ ಸಂರಕ್ಷಕ
45 ಹಾವಿನ ಮರಿಗಳನ್ನು ಸಂಗ್ರಹಿಸಿದ ಉರಗ ಸಂರಕ್ಷಕ
Follow us
preethi shettigar
|

Updated on:Mar 02, 2021 | 3:11 PM

ಮೈಸೂರು: ಹಾವು ಕಂಡರೆ ಯಾರಿಗೆ ತಾನೇ ಭಯ ಇಲ್ಲ ಹೇಳಿ. ಸಣ್ಣ ಹಾವಿನ ಮರಿಯಿಂದ ಹಿಡಿದು ದೊಡ್ಡ ದೊಡ್ಡ ಗಾತ್ರದ ಕಾಳಿಂಗ ಸರ್ಪದಂತಹ ಹಾವುಗಳು ದೂರದಲ್ಲಿ ಎಲ್ಲೋ ಇದ್ದರೆ ಅತ್ತ ಸುಳಿಯದೇ ಇರುವ ಮಂದಿಯೇ ಹೆಚ್ಚು. ಇನ್ನು ಮನೆ ಬಳಿ ಹಾವು ಬಾರದಿರುವ ಹಾಗೇ ಹಿಂಗುವಿನ ನೀರು ಇನ್ನಿತರ ವಿಧಾನವನ್ನು ಬಳಸಿ ಉರಗ ಮನೆಯ ಅಕ್ಕಪಕ್ಕದಲ್ಲೂ ಸುಳಿಯದ ಹಾಗೆ ಮಾಡುತ್ತಾರೆ. ಆದರೆ ಮೈಸೂರಿನಲ್ಲಿ ಉರಗ ಸಂರಕ್ಷಕರೊಬ್ಬರು ಬರೊಬ್ಬರಿ 45 ಹಾವಿನ ಮರಿಗಳನ್ನು ಸಂರಕ್ಷಿಸಿದ್ದಾರೆ.

ಮೈಸೂರು ನಗರದಲ್ಲಿ 45 ಹಾವಿನ ಮೊಟ್ಟೆಗಳನ್ನು ಸಂಗ್ರಹಿಸಿದ್ದ ಉರಗ ಸಂರಕ್ಷಕ ಸೂರ್ಯಕೀರ್ತಿ, ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ಪ್ರಕ್ರಿಯೆ ನಡೆಸಿದ್ದು, ಈ ಕಾರ್ಯ ಯಶಸ್ವಿಯಾಗಿದೆ. ಮೈಸೂರಿನಲ್ಲಿ ಇದೀಗ 45 ಹಾವಿನ ಮರಿಗಳ ಜನನವಾಗಿದ್ದು, ಹಾವುಗಳನ್ನು ಸುರಕ್ಷಿತ ಸ್ಥಳದಲ್ಲಿ ಸೂರ್ಯಕೀರ್ತಿ ಬಿಟ್ಟಿದ್ದಾರೆ.

snake mysore

ಮೊಟ್ಟೆಗಳಿಗೆ ಕೃತಕ ಕಾವು ಪ್ರಕ್ರಿಯೆ

ಉರಗ ಸಂರಕ್ಷಕ ಸೂರ್ಯಕೀರ್ತಿ ಸ್ನೇಕ್ ಶ್ಯಾಮ್​ ಅವರ ಪುತ್ರರಾಗಿದ್ದು, ಎರಡು ತಿಂಗಳ ಹಿಂದೆ ಖಾಲಿ ನಿವೇಶನದಲ್ಲಿ‌ ಸಿಕ್ಕಿದ್ದ 45 ಹಾವಿನ ಮೊಟ್ಟೆಗಳನ್ನು ಸಂರಕ್ಷಿಸಿ‌ ಕೃತಕ ಕಾವಿನ ವ್ಯವಸ್ಥೆ ಮಾಡಿದ್ದರು.ಸದ್ಯ ಎಲ್ಲಾ 45 ಮೊಟ್ಟೆಗಳಿಂದಲೂ ಮರಿ ಜನನವಾಗಿದ್ದು, ನೀರಿನ ಹಾವು ಜಾತಿಗೆ ಸೇರಿದ ಹಾವಿನ ಮರಿಗಳು ಎಂದು ತಿಳಿದುಬಂದಿದೆ.

mysore snake

45 ಹಾವುಗಳ ರಕ್ಷಣೆ

ಕೃತಕವಾಗಿ ಕಾವು ಕೊಟ್ಟು ಮರಿ ಮಾಡುವುದು ಅಷ್ಟು ಸುಲಭವಾದ ಕೆಲಸವಲ್ಲ. ಅದರಲ್ಲೂ ಹಾವಿನ ಮೊಟ್ಟೆಗಳಿಗೆ ಕೃತಕ ಕಾವು ಕೊಟ್ಟು ಮರಿ ಮಾಡುವುದು ತುಸು ಕಷ್ಟವೇ ಸರಿ. ಆದರೆ ಸೂರ್ಯಕೀರ್ತಿ ಕೃತಕ ಶಾಖ ನೀಡಿ ಮರಿಗಳ ಜನನಕ್ಕೆ ಸಹಾಯ ನೀಡಿರುವುದು ನಿಜಕ್ಕೂ ಶ್ಲಾಘನೀಯ.

mysore snake

ಮರಳಿನ ಮೇಲೆ ಹಾವಿನ ಮರಿಗಳ ಪೋಷಣೆ

ವಾಹನಕ್ಕೆ ಡಿಕ್ಕಿ ಹೊಡೆದು ಮೈಸೂರಿನಲ್ಲಿ ಕಪ್ಪು ಮುಂಗುಸಿ ಸಾವು: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಕಪ್ಪು ಮುಂಗುಸಿ ಸಾವಿಗೀಡಾದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೊಡ್ಡ ಕವಲಂದೆ ಗ್ರಾಮದ ಬಳಿ ನಡೆದಿದೆ. ಮುಂಗುಸಿ ರಸ್ತೆ ದಾಟುವಾಗ ಈ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತಿಚೀನ ದಿನಗಳಲ್ಲಿ ಅರಣ್ಯ ಪ್ರದೇಶದ ಪಕ್ಕದಲ್ಲಿನ ರಸ್ತೆಗಳನ್ನು ದಾಟುವಾಗ ಈ ರೀತಿಯ ದುರಂತಗಳು ನಡೆಯುವುದು ಸಾಮಾನ್ಯವಾಗಿದ್ದು, ವಾಹನಗಳಿಗೆ ವನ್ಯ ಪ್ರಾಣಿಗಳು ಡಿಕ್ಕಿಯಾಗಿ ಮೃತಪಡುತ್ತಿರುವುದು ಅಷ್ಟೇ ಅಲ್ಲದೇ ಅಂಗವೀಕಲವಾಗುತ್ತಿವೆ. ಅದರಂತೆ ಈಗ ಮುಂಗುಸಿ ಕೂಡ ಅಪಘಾತಕ್ಕೆ ಈಡಾಗಿದ್ದು, ಕಂದು ಬಣ್ಣದ ಮುಂಗುಸಿಗಳಾದರೆ ಹೆಚ್ಚಾಗಿವೆ. ಆದರೆ ಕಪ್ಪು ಬಣ್ಣದ ಮುಂಗುಸಿಗಳು ಅಳಿವಿನಂಚಿನಲ್ಲಿವೆ ಎನ್ನುವುದು ವಿಪರ್ಯಾಸ ಸಂಗತಿಯಾಗಿದೆ.

ಮೈಸೂರು ಜಿಲ್ಲೆಯಲ್ಲಿ ಜಿಂಕೆ ಕಳೇಬರ ಪತ್ತೆ: ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದಲ್ಲಿ ಜಿಂಕೆ ಮೃತದೇಹ ಪತ್ತೆಯಾಗಿದ್ದು, ಜಿಂಕೆಯನ್ನು ಚಿರತೆ ಬಲಿ ಪಡೆದಿರಬಹುದು ಎಂದು ಶಂಕಿಸಲಾಗಿದೆ. ಕಾಡಿನಿಂದ ಗ್ರಾಮದ ಜಮೀನಿಗೆ ಆಹಾರ ಅರಸಿ ಬಂದ ಜಿಂಕೆಯನ್ನು ಚಿರತೆ ಅರ್ಧ ಭಾಗವನ್ನು ತಿಂದು ಹೋಗಿದೆ. ಪ್ರತಿ ದಿನವೂ ಈ ಭಾಗದಲ್ಲಿ ರಾತ್ರಿ ವೇಳೆ ಕಾಡಿನಿಂದ ನಾಡಿಗೆ ಚಿರತೆ ಆಗನಿಸುತ್ತಿದ್ದು, ಚಿರತೆ ಭೀತಿಯಿಂದ ರೈತರು ಜಮೀನಿಗೆ ತೆರಳಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಗ್ರಾಮಸ್ಥರು ಚಿರತೆ ಸೆರೆಹಿಡಿಯುವಂತೆ ಇಲ್ಲಿನ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

.

ಇದನ್ನೂ ಓದಿ: ದೊಡ್ಡಬಳ್ಳಾಪುರ: ರೌಂಡ್ಸ್​ನಲ್ಲಿದ್ದಾಗ ಇನ್ಸ್​ಪೆಕ್ಟರ್​ ಜೀಪ್​ನಲ್ಲಿ ಹಾವು ಪ್ರತ್ಯಕ್ಷ್ಯ!

Published On - 12:29 pm, Tue, 2 March 21