ಸೆಮಿಸ್ಟರ್ ಪರೀಕ್ಷೆ ರದ್ದು ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ, ನಿಮ್ಮ ಮೇಲೆ ಕೇಸ್ ಹಾಕಿದ್ರೆ ಏನ್ ಮಾಡ್ತೀರಾ? ಗರಂ ಆದ ಇನ್ಸ್​​ಪೆಕ್ಟರ್

ಡಿಪ್ಲೋಮಾ ಎರಡು ಸೆಮಿಸ್ಟರ್ ಪರೀಕ್ಷೆಯನ್ನ ಒಟ್ಟಿಗೆ ಬರೆಯುವುದನ್ನ ರದ್ದುಗೊಳಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಮೈಸೂರು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಇದನ್ನು ಕಂಡ ಲಕ್ಷ್ಮಿಪುರಂ ಠಾಣೆ ಇನ್ಸ್​​ಪೆಕ್ಟರ್ ವೆಂಕಟೇಶ್ ವಿದ್ಯಾರ್ಥಿಗಳ ವಿರುದ್ಧ ಗರಂ ಆಗಿದ್ದಾರೆ.

ಸೆಮಿಸ್ಟರ್ ಪರೀಕ್ಷೆ ರದ್ದು ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ, ನಿಮ್ಮ ಮೇಲೆ ಕೇಸ್ ಹಾಕಿದ್ರೆ ಏನ್ ಮಾಡ್ತೀರಾ? ಗರಂ ಆದ ಇನ್ಸ್​​ಪೆಕ್ಟರ್
ನಿಮ್ಮ ಮೇಲೆ ಕೇಸ್ ಹಾಕಿದ್ರೆ ಏನ್ ಮಾಡ್ತೀರಾ ಎಂದು ವಿದ್ಯಾರ್ಥಿಗಳ ಮೇಲೆ ಗರಂ ಆದ ಇನ್ಸ್​​ಪೆಕ್ಟರ್
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 19, 2021 | 1:05 PM

ಮೈಸೂರು: ಮಹಾಮಾರಿ ಕೊರೊನಾ ನಡುವೆ ನೂರಾರು ವಿದ್ಯಾರ್ಥಿಗಳು ಡಿಸಿ ಆಫೀಸ್ ಮುಂಭಾಗ ಪ್ರತಿಭಟನೆ ಮಾಡಿದ್ದಾರೆ. ಹೀಗಾಗಿ ಮೈಸೂರಿನ ಲಕ್ಷ್ಮಿಪುರಂ ಠಾಣೆ ಇನ್ಸ್​​ಪೆಕ್ಟರ್ ವೆಂಕಟೇಶ್ ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿ ವಿದ್ಯಾರ್ಥಿಗಳ ವಿರುದ್ಧ ಗರಂ ಆಗಿದ್ದಾರೆ.

ಡಿಪ್ಲೋಮಾ ಎರಡು ಸೆಮಿಸ್ಟರ್ ಪರೀಕ್ಷೆಯನ್ನ ಒಟ್ಟಿಗೆ ಬರೆಯುವುದನ್ನ ರದ್ದುಗೊಳಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಮೈಸೂರು ಡಿಸಿ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ಇದನ್ನು ಕಂಡ ಲಕ್ಷ್ಮಿಪುರಂ ಠಾಣೆ ಇನ್ಸ್​​ಪೆಕ್ಟರ್ ವೆಂಕಟೇಶ್ ವಿದ್ಯಾರ್ಥಿಗಳ ವಿರುದ್ಧ ಗರಂ ಆಗಿದ್ದಾರೆ.

ಕೊರೊನಾ ನಡುವೆಯೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದೀರಲ್ಲ. ಈ ರೀತಿ ಸೇರಿರುವುದು ಸರಿಯಲ್ಲ ಎಂದು ಬುದ್ದಿವಾದ ಹೇಳಿದ್ದಾರೆ. ನೀವು ದೈಹಿಕ ಅಂತರ ಪಾಲಿಸಿಲ್ಲ. ನೀವು ವಿದ್ಯಾರ್ಥಿಗಳು ಆಗಿದ್ದೀರ್ರಿ, ನಮ್ಮಿಂದ ಹೇಳಿಸಿಕೊಳ್ಳುವುದು ಶೋಭೆ ಅಲ್ಲ. ದಯವಿಟ್ಟು ಸರ್ಕಾರದ ನೀತಿ ನಿಯಮಗಳನ್ನು ಪಾಲಿಸಿ ಎಂದು ಎಂದು ಗರಂ ಆಗಿದ್ದಾರೆ. ನೀವು ಅನುಮತಿ ಇಲ್ಲದೇ ಪ್ರತಿಭಟನೆ ಮಾಡುತ್ತಿರುವುದು ತಪ್ಪು. ನಾವು ನಿಮ್ಮ ಮೇಲೆ ಕೇಸ್ ಹಾಕಿದ್ರೆ ಏನ್ ಮಾಡ್ತೀರಾ ಎಂದು ಇನ್ಸ್​​ಪೆಕ್ಟರ್ ವೆಂಕಟೇಶ್ ವಿದ್ಯಾರ್ಥಿಗಳಿಗೆ ಪ್ರಶ್ನಿಸಿದ ಘಟನೆ ಮೈಸೂರಿನಲ್ಲಿ ನಡೆದಿದೆ.

mys student protest

ಸೆಮಿಸ್ಟರ್ ಪರೀಕ್ಷೆ ರದ್ದು ಒತ್ತಾಯಿಸಿ ವಿದ್ಯಾರ್ಥಿಗಳ ಪ್ರತಿಭಟನೆ

mys student protest

ಲಕ್ಷ್ಮಿಪುರಂ ಠಾಣೆ ಇನ್ಸ್​​ಪೆಕ್ಟರ್ ವೆಂಕಟೇಶ್ ವಿದ್ಯಾರ್ಥಿಗಳಿಗೆ ಬುದ್ದಿವಾದ ಹೇಳಿದ್ರು

ಇದನ್ನೂ ಓದಿ: ಎಸ್​ಎಸ್​ಎಲ್​ಸಿ ಪರೀಕ್ಷಾ ಕೇಂದ್ರದ ಲ್ಯಾಬ್​ನಲ್ಲಿ ಅಗ್ನಿ ಅವಗಢ; ಪರೀಕ್ಷೆ ಆರಂಭದ ಅರ್ಧ ಗಂಟೆಯಲ್ಲೇ ಏಕಾಏಕಿ ಬೆಂಕಿ

Published On - 12:37 pm, Mon, 19 July 21