ಮಾನವೀಯತೆ ಮೆರೆದ ಮೈಸೂರು ಪೊಲೀಸರು: ತಮಗೆ ಬಂದ ಬಹುಮಾನದ ಹಣದಲ್ಲಿ ಶೂಟೌಟ್ ಸಂತ್ರಸ್ತ ಕುಟುಂಬಕ್ಕೆ ನೆರವು
mysuru police: ಮೈಸೂರಿನ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 23 ರಂದು ಶೂಟೌಟ್ ನಡೆದಿತ್ತು. ಆ ವೇಳೆ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‌ನಲ್ಲಿ ಶೂಟೌಟ್ ಮತ್ತು ದರೋಡೆ ಪ್ರಕರಣ ನಡೆದಿತ್ತು. ಗುಂಡಿನ ದಾಳಿಗೆ ತುತ್ತಾಗಿದ್ದ ದಡದಹಳ್ಳಿ ಯುವಕ ಚಂದ್ರು ಮೃತಪಟ್ಟಿದ್ದ. ಇದೀಗ ದಡದಹಳ್ಳಿ ಚಂದ್ರು ಕುಟುಂಬಕ್ಕೆ ನೆರವು ನೀಡಿದ್ದಾರೆ.
ಮೈಸೂರು: ಮೈಸೂರು ಪೊಲೀಸರು ಮತ್ತೊಮ್ಮೆ ಸುದ್ದಿಯ ಕೇಂದ್ರವಾಗಿದ್ದಾರೆ. ಮಾನವೀಯತೆ ಮೆರೆದ ಮೈಸೂರು ಪೊಲೀಸರು ತಮಗೆ ಬಂದ ಬಹುಮಾನದ ಹಣದಲ್ಲಿ ಸಂತ್ರಸ್ತ ಕುಟುಂಬಕ್ಕೆ ನೆರವಾಗಿದ್ದಾರೆ.
ಮೈಸೂರಿನ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಆಗಸ್ಟ್ 23 ರಂದು ಶೂಟೌಟ್ ನಡೆದಿತ್ತು. ಆ ವೇಳೆ ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‌ನಲ್ಲಿ ಶೂಟೌಟ್ ಮತ್ತು ದರೋಡೆ ಪ್ರಕರಣ ನಡೆದಿತ್ತು. ಗುಂಡಿನ ದಾಳಿಗೆ ತುತ್ತಾಗಿದ್ದ ದಡದಹಳ್ಳಿ ಯುವಕ ಚಂದ್ರು ಮೃತಪಟ್ಟಿದ್ದ. ಇದೀಗ ದಡದಹಳ್ಳಿ ಚಂದ್ರು ಕುಟುಂಬಕ್ಕೆ ನೆರವು ನೀಡಿದ್ದಾರೆ.
ಶೀಘ್ರವಾಗಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದ ಮೈಸೂರು ಪೊಲೀಸರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ ಬಹುಮಾನ ಘೋಷಿಸಿತ್ತು. ತಮ್ಮ ಬಹುಮಾನದ ಹಣದಲ್ಲಿ ಮೈಸೂರು ಕಮಿಷನರ್ ಮತ್ತು ಅವರ ತಂಡವು ಚಂದ್ರು ಕುಟುಂಬಕ್ಕೆ ಒಂದು ಲಕ್ಷ ರೂ ನೆರವು ನೀಡಿದೆ. ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು ಚಂದ್ರು ಕುಟುಂಬಕ್ಕೆ ನಗದು ಹಸ್ತಾಂತರ ಮಾಡಿದ್ದಾರೆ. ಡಿಸಿಪಿಗಳಾದ ಪ್ರದೀಪ್ ಗುಂಟಿ ಮತ್ತು ಗೀತಾ ಪ್ರಸನ್ನ ಉಪಸ್ಥಿತರಿದ್ದರು.
ಇದನ್ನೂ ಓದಿ: ಮೈಸೂರು: ವೃತ್ತಿ ವೈಷಮ್ಯದಿಂದ ದರೋಡೆಗೆ ಸುಪಾರಿ ನೀಡಿದ್ದ ಬೇರೊಂದು ಗೋಲ್ಡ್ ಅಂಗಡಿಯ ಮಾಲೀಕನ ಬಂಧನ
ಇದನ್ನೂ ಓದಿ: ಮೈಸೂರಿನಲ್ಲಿ ಸಂಬಂಧಿಕರಿಂದಲೇ ದರೋಡೆಗೆ ಸುಪಾರಿ? ಆಕಸ್ಮಿಕವಾಗಿ ಶೂಟೌಟ್ಗೆ ಬಲಿಯಾದ ಅಮಾಯಕ ಯುವಕ
Women’s Commission Pramila Naidu Meets Rape Victim | ಆತ್ಯಾಚಾರಗೊಳಗಾದ ಯುವತಿ ಭೇಟಿ ಮಾಡಿದ ಮಹಿಳಾ ಆಯೋಗ
(mysuru robbery incident mysuru police hand over 1 lakh rupees to jewellery shop shoot out person family)