ಮೈಸೂರು: ನಂಜನಗೂಡು ಶ್ರೀಕಂಠೇಶ್ವರನ ಹುಂಡಿಯಲ್ಲಿ ₹ 2.40 ಕೋಟಿ ಕಾಣಿಕೆ ಸಂಗ್ರಹ; ನಿಷೇಧಿತ ನೋಟುಗಳನ್ನೂ ಸಮರ್ಪಿಸಿದ ಭಕ್ತರು

| Updated By: shivaprasad.hs

Updated on: May 07, 2022 | 1:08 PM

Nanjanagud | Srikanteshwara Hundi Collection: ದಕ್ಷಿಣಕಾಶಿ ಎಂದೇ ಪ್ರಸಿದ್ಧವಾದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಕಾಣಿಕೆ ಎಣಿಕೆ ಕಾರ್ಯ ನಡೆದಿದೆ. ಈ ಬಾರಿ 2.40 ಕೋಟಿ ಸಂಗ್ರಹವಾಗಿದೆ. ಕಾಣಿಕೆಯಾಗಿ ನಿಷೇಧಿತ ನೋಟುಗಳನ್ನೂ ಸಮರ್ಪಿಸಲಾಗಿದೆ.

ಮೈಸೂರು: ನಂಜನಗೂಡು ಶ್ರೀಕಂಠೇಶ್ವರನ ಹುಂಡಿಯಲ್ಲಿ ₹ 2.40 ಕೋಟಿ ಕಾಣಿಕೆ ಸಂಗ್ರಹ; ನಿಷೇಧಿತ ನೋಟುಗಳನ್ನೂ ಸಮರ್ಪಿಸಿದ ಭಕ್ತರು
ನಂಜನಗೂಡು ದೇವಸ್ಥಾನ (ಸಂಗ್ರಹ ಚಿತ್ರ)
Follow us on

ಮೈಸೂರು: ದಕ್ಷಿಣಕಾಶಿ ಎಂದೇ ಪ್ರಸಿದ್ಧವಾದ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ (Nanjanagud Srikanteshwara) ಕಾಣಿಕೆ ಎಣಿಕೆ ಕಾರ್ಯ ನಡೆದಿದೆ. ಈ ಬಾರಿ 2.40 ಕೋಟಿ ಸಂಗ್ರಹವಾಗಿದೆ. ಕಾಣಿಕೆಯಾಗಿ ನಿಷೇಧಿತ ನೋಟುಗಳನ್ನೂ ಸಮರ್ಪಿಸಲಾಗಿದೆ. ದೇವಾಲಯದ 20 ಕ್ಕೂ ಹೆಚ್ಚು ಹುಂಡಿಗಳಿಂದ 2,49,07,052 ರೂ ಅರ್ಥಾತ್ ಎರಡು ಕೋಟಿ ನಲವತ್ತೊಂಭತ್ತು ಲಕ್ಷದ ಏಳು ಸಾವಿರದ ಐವತ್ತೆರಡು ರೂಪಾಯಿ ಸಂಗ್ರಹವಾಗಿದೆ. ಕಳೆದ ಬಾರಿಗಿಂತ 45 ಲಕ್ಷ ರೂ ಹೆಚ್ಚುವರಿಯಾಗಿ ಹಣ ಸಂಗ್ರಹವಾಗಿರೋದು ವಿಶೇಷ. ನಂಜನಗೂಡು ದೊಡ್ಡ ಜಾತ್ರೆ ಅಂಗವಾಗಿ ಹೆಚ್ಚಿನ ಮೊತ್ತ ಸಂಗ್ರಹವಾಗಿದೆ.

ಹುಂಡಿಯಲ್ಲಿ ನಿಷೇಧಿತ ನೋಟುಗಳು:

ಸರ್ಕಾರವು ಹಳೆಯ ನೋಟುಗಳನ್ನು ನಿಷೇಧಿಸಿದ್ದರೂ ಕೂಡ ಕಾಣಿಕೆಯಾಗಿ ಜನರು ಅದನ್ನು ಸಮರ್ಪಿಸುವುದು ನಿಂತಿಲ್ಲ. ಪ್ರಸ್ತುತ ದೇಶದಲ್ಲಿ ಈ ನೋಟುಗಳು ಚಲಾವಣೆಯಲ್ಲಿಲ್ಲ. ಅದಾಗ್ಯೂ ಅಳಿದುಳಿದ ನೋಟುಗಳನ್ನು ಜನರು ದೇವರಿಗೆ ಸಮರ್ಪಿಸುತ್ತಿದ್ದಾರೆ. ಕಳೆದ ಬಾರಿ ಕಾಣಿಕೆ ಎಣಿಕೆ ಸಂದರ್ಭದಲ್ಲೂ ದೊಡ್ಡ ಮಟ್ಟದಲ್ಲಿ ನಿಷೇಧಿತ ನೋಟುಗಳು ಪತ್ತೆಯಾಗಿತ್ತು. ಈ ಬಾರಿ ಅದಕ್ಕಿಂತ ಹೆಚ್ಚು ನಿಷೇಧಿ ನೋಟುಗಳು ಸಿಕ್ಕಿವೆ. ಕಳೆದ ಬಾರಿ ಎಣಿಕೆಯ ಸಂದರ್ಭದಲ್ಲಿ 28,500 ಮೌಲ್ಯದ ನಿಷೇಧಿತ ನೋಟುಗಳು ಸಂಗ್ರಹವಾಗಿತ್ತು. ಈ ಬಾರಿ ಬರೋಬ್ಬರಿ 41 ಸಾವಿರ ರೂ ಮೌಲ್ಯದ ನಿಷೇಧಿತ ನೋಟುಗಳು ಕಾಣಿಕೆ ಎಣಿಕೆಯಲ್ಲಿ ಸಿಕ್ಕಿವೆ ಎಂದು ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ
5,000 ಮೀಟರ್ ರೇಸ್​ನಲ್ಲಿ 30 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆ ಮುರಿದ ಅವಿನಾಶ್; ಹೊಸ ಇತಿಹಾಸ ಸೃಷ್ಟಿ
ಕರ್ನಾಟಕದಲ್ಲಿ ಎರಡು ವಾರ ತಡವಾಗಿ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆಗೆ ಸಚಿವರ ಪತ್ರ; ಪತ್ರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ
ಪ್ರತಿಭಟನೆ ನಡುವೆ ಕಾಶಿ ವಿಶ್ವನಾಥ ದೇವಾಲಯ ಬಳಿಯ ಮಸೀದಿ ಸಮೀಕ್ಷೆ ಶುರು
ಹಿಂದಿಯಲ್ಲಿ 400 ಕೋಟಿ ರೂ. ಬಾಚಿದ ‘ಕೆಜಿಎಫ್​ 2’; ವಿಶ್ವಾದ್ಯಂತ ಯಶ್​ ಚಿತ್ರ ಗಳಿಸಿದ್ದು 1100 ಪ್ಲಸ್​ ಕೋಟಿ

ಭಕ್ತರಿಂದ ವಿದೇಶಿ ಕರೆನ್ಸಿ, ಚಿನ್ನ- ಬೆಳ್ಳಿಯೂ ಅರ್ಪಣೆ: 

ನಂಜನಗೂಡಿನ ಶ್ರೀಕಂಠನಿಗೆ ಭಕ್ತರು ವಿದೇಶಿ ಕರೆನ್ಸಿಗಳು, ಚಿನ್ನ ಬೆಳ್ಳಿಯನ್ನೂ ಸಮರ್ಪಿಸಿದ್ದಾರೆ. ಪ್ರಸ್ತುತ ಎಣಿಕೆಯಲ್ಲಿ ಒಟ್ಟು 220 ಗ್ರಾಂ ಚಿನ್ನ, 6 ಕೆಜಿ 500 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. 111 ವಿದೇಶಿ ಕರೆನ್ಸಿ ಸಂಗ್ರಹವಾಗಿದೆ. ಸುಮಾರು 40 ಕ್ಕೂ ಹೆಚ್ಚು ಸಿಬ್ಬಂದಿಗಳಿಂದ ಎಣಿಕೆ ಕಾರ್ಯ ನಡೆಸಲಾಗಿದೆ.

ಬ್ರೇಕಿಂಗ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:37 pm, Sat, 7 May 22