ಪಿಎಂ-ಇಬಸ್ ಸೇವಾ ಯೋಜನೆಯಡಿ ಮೈಸೂರಿನಲ್ಲಿ ರಸ್ತೆಗಿಳಿಯಲಿವೆ 200 ಎಲೆಕ್ಟ್ರಿಕ್ ಬಸ್

PM-eBus Sewa scheme; ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ತಯಾರಕರೊಂದಿಗೆ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದು, ವರ್ಷಾಂತ್ಯದೊಳಗೆ 169 ನಗರಗಳಲ್ಲಿ ಒಟ್ಟು 10,000 ಬಸ್‌ಗಳ ಕಾರ್ಯಾಚರಣೆ ಆರಂಭಿಸಲಿದೆ. ಈ ನಗರಗಳಲ್ಲಿ ಮೈಸೂರು ಕೂಡ ಒಂದಾಗಿದೆ. ಎಂದು ಉನ್ನತ ಮೂಲಗಳು ತಿಳಿಸಿವೆ.

ಪಿಎಂ-ಇಬಸ್ ಸೇವಾ ಯೋಜನೆಯಡಿ ಮೈಸೂರಿನಲ್ಲಿ ರಸ್ತೆಗಿಳಿಯಲಿವೆ 200 ಎಲೆಕ್ಟ್ರಿಕ್ ಬಸ್
ಸಾಂದರ್ಭಿಕ ಚಿತ್ರ

Updated on: Sep 12, 2023 | 10:19 PM

ಮೈಸೂರು, ಸೆಪ್ಟೆಂಬರ್ 12: ಪರಿಸರ ಮಾಲಿನ್ಯದ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರವು ಅಂದಾಜು 57,613 ಕೋಟಿ ರೂ.ಗಳ ವೆಚ್ಚದಲ್ಲಿ 10,000 ಎಲೆಕ್ಟ್ರಿಕ್ ಬಸ್‌ಗಳನ್ನು (Electric Bus) ಖರೀದಿಸಲು ಚಿಂತನೆ ನಡೆಸಿದೆ. ಪಿಎಂ-ಇಬಸ್ (PM-eBus) ಸೇವಾ ಯೋಜನೆಯ ಮೂಲಕ ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಉದ್ದೇಶಿಸಲಾಗಿದ್ದು, ಈ ಪೈಕಿ 200 ಪರಿಸರ ಸ್ನೇಹಿ ಬಸ್‌ಗಳು ಮೈಸೂರಿನಲ್ಲಿಯೂ ರಸ್ತೆಗಿಳಿಯಲಿವೆ ಎಂದು ವರದಿಯಾಗಿದೆ. ಪಿಎಂ-ಇಬಸ್ ಸೇವಾ ಯೋಜನೆಯಲ್ಲಿ ಅಡಕವಾಗಿರುವ 169 ನಗರಗಳಲ್ಲಿ ಮೈಸೂರು (Mysore) ಕೂಡ ಒಂದಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ಈಗಾಗಲೇ ಜುಲೈ 2023 ರಿಂದ ಮೈಸೂರು-ಬೆಂಗಳೂರು ಮಾರ್ಗದಲ್ಲಿ ಎಂಟು ಎಲೆಕ್ಟ್ರಿಕ್ ಬಸ್‌ಗಳನ್ನು ಆರಂಭಿಸಿದೆ. ಪಿಎಂ-ಇಬಸ್ ಸೇವಾ ಯೋಜನೆಯಡಿಯಲ್ಲಿ ಎಲೆಕ್ಟ್ರಿಕ್ ಬಸ್​ಗಳ ಸಂಚಾರವು ನಗರ ಮತ್ತು ಗ್ರಾಮೀಣ ಮಾರ್ಗಗಳೆರಡರಲ್ಲೂ ಹೆಚ್ಚಾಗುವ ನಿರೀಕ್ಷೆ ಇದೆ.

ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನ ತಯಾರಕರೊಂದಿಗೆ ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದ್ದು, ವರ್ಷಾಂತ್ಯದೊಳಗೆ 169 ನಗರಗಳಲ್ಲಿ ಒಟ್ಟು 10,000 ಬಸ್‌ಗಳ ಕಾರ್ಯಾಚರಣೆ ಆರಂಭಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಸಾಂಪ್ರದಾಯಿಕ ಇಂಧನ-ಚಾಲಿತ ಬಸ್‌ಗಳಿಂದ ಎಲೆಕ್ಟ್ರಿಕ್ ಬಸ್‌ಗಳಿಗೆ ಪರಿವರ್ತನೆಯಾಗುವುದರಿಂದ ನಿರುದ್ಯೋಗ ಸಮಸ್ಯೆಗೂ ಸಣ್ಣಮಟ್ಟಿನ ಪರಿಹಾರ ದೊರೆಯುವ ನಿರೀಕ್ಷೆ ಇದೆ. ಎಲೆಕ್ಟ್ರಿಕ್ ಬಸ್​ಗಳ ಬಳಕೆಯಿಂದಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮಾಜಿ ಪ್ರಧಾನಿ ಹೆಚ್ ​ಡಿ ದೇವೇಗೌಡರಿಗೆ ಮಂಡಿಯೂರಿ ನಮಸ್ಕರಿಸಿ, ಆಶೀರ್ವಾದ ಬೇಡಿದ ಸಂಸದ ಪ್ರತಾಪ್ ಸಿಂಹ

ರಾಜ್ಯದೊಳಗೆ ಕೆಎಸ್ಆರ್​ಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುವ ಶಕ್ತಿ ಯೋಜನೆಯನ್ನು ಜೂನ್ 2023 ರಲ್ಲಿ ಪ್ರಾರಂಭಿಸಿದಾಗಿನಿಂದ, ಬಸ್ಸುಗಳು ನಿರಂತರವಾಗಿ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಿಸುತ್ತಿವೆ. ಪಿಎಂ-ಇಬಸ್ ಸೇವಾ ಯೋಜನೆಯ ಮೂಲಕ ಹೆಚ್ಚಿನ ಎಲೆಕ್ಟ್ರಿಕ್ ಬಸ್‌ಗಳ ಸಂಚಾರವು ಸಾರ್ವಜನಿಕ ಸಾರಿಗೆ ವಲಯದಲ್ಲಿ ಎದುರಿಸುತ್ತಿರುವ ಕೆಲವು ಸವಾಲುಗಳನ್ನು ನಿವಾರಿಸಲಿದೆ. ಈ ಪರಿವರ್ತನೆಯು ಮಾಲಿನ್ಯ-ಮುಕ್ತ ಪರಿಸರವನ್ನು ಖಾತರಿಪಡಿಸುವುದರ ಜತೆಗೆ ಡೀಸೆಲ್ ಮೇಲೆ ಹೆಚ್ಚಿನ ಅವಲಂಬನೆಯನ್ನು ಕಡಿಮೆ ಮಾಡಲಿದೆ. ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಗ್ಗಿಸಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us