Mysuru News: ಪ್ರೀತ್ಸೆ.. ಪ್ರೀತ್ಸೆ.. ಅಂತಾ ಹಿಂದೆ ಬಿದ್ದ ಯುವಕ, ಕಿರುಕುಳ ತಾಳಲಾರದೇ ಪ್ರಾಣಬಿಟ್ಟ ಯುವತಿ
ಪ್ರೀತ್ಸೆ..ಪ್ರೀತ್ಸೆ ಎಂದು ಯುವಕನೋರ್ವ ಕಿರುಕುಳಕ್ಕೆ ಬೇಸತ್ತು ಯುವಿತೋರ್ವಳು ಆತ್ಮಹತ್ಯೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು: ಪ್ರೀತ್ಸೆ….ಪ್ರೀತ್ಸೆ(Love) ಎಂದು ಯುವಕನ ಕಿರುಕುಳಕ್ಕೆ ಮನನೊಂದು ಯುವತಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಮೈಸೂರು (Mysuru) ತಾಲ್ಲೂಕು ಗಣಗರಹುಂಡಿ ಗ್ರಾಮದಲ್ಲಿ ನಡೆದಿದೆ. ಹರ್ಷಿತಾ(21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಅದೇ ಗ್ರಾಮದಲ್ಲಿ ವಾಸವಿದ್ದ ಯುವಕ ಶಿವು ಎನ್ನುವ ಯುವಕ ತನ್ನ ಪ್ರೀತಿಸುವಂತೆ ಹರ್ಷಿತಾ ಹಿಂದೆ ಬಿದ್ದಿದ್ದ. ಆದ್ರೆ, ಶಿವು ಮಾಡಿದ್ದ ಲವ್ ಪ್ರಪೋಸ್ ಹರ್ಷಿತಾ ತಿರಸ್ಕರಿಸಿದ್ದಾಳೆ. ಆದರೂ ಪದೇ ಪದೇ ಪ್ರೀತಸುವಂತೆ ಪೀಡಿಸುತ್ತಿದ್ದ. ಇದರಿಂದ ಮನನೊಂದ ಹರ್ಷಿತಾ ಕೀಟನಾಶಕ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: ಲವ್ ಮಾಡುವಂತೆ ಪೀಡಿಸುತ್ತಿದ್ದ ಶಿಕ್ಷಕಿಯ ಮಗ: ಮನನೊಂದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಅದೇ ಗ್ರಾಮದಲ್ಲಿ ವಾಸವಿದ್ದ ಯುವಕ ಶಿವು ಎನ್ನುವ ಯುವಕ ತನ್ನ ಪ್ರೀತಿಸುವಂತೆ ಹರ್ಷಿತಾ ಹಿಂದೆ ಬಿದ್ದಿದ್ದ. ಆದ್ರೆ, ಶಿವು ಮಾಡಿದ್ದ ಲವ್ ಪ್ರಪೋಸ್ ಹರ್ಷಿತಾ ತಿರಸ್ಕರಿಸಿದ್ದಾಳೆ. ಈ ಮಧ್ಯೆ ಹರ್ಷಿತಾಳಿಗೆ ಮನೆಯವರು ಮದುವೆಗೆ ಸಿದ್ದತೆ ಮಾಡಿಕೊಂಡಿದ್ದು, ಆಷಾಢ ನಂತರ ಮದುವೆ ದಿನಾಂಕ ಗೊತ್ತುಪಡಿಸಲು ನಿರ್ಧರಿಸಿದ್ದರು. ಇದನ್ನು ತಿಳಿದ ಶಿವು ತನ್ನನ್ನು ಪ್ರೀತಿಸಿ ಮದುವೆ ಆಗುವಂತೆ ದುಂಬಾಲು ಬಿದ್ದಿದ್ದ. ಇದರಿಂದ ಬೇಸತ್ತ ಹರ್ಷಿತಾ ಕೀಟನಾಶಕ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಕುಟುಂಬಸ್ಥರು ಹರ್ಷಿತಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಜೀವಬಿಟ್ಟಿದ್ದಾಳೆ. ಮಗಳ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ಆರೋಪ ಮಾಡಿದ್ದು, ಈ ಬಗ್ಗೆ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಘಟನೆ ನಡೆದ ಬಳಿಕ ಲವರ್ ಬಾಯ್ ಶಿವು ತಲೆ ಮರೆಸಿಕೊಂಡಿದ್ದಾನೆ.
ಬಸ್ ಡಿಪೋ ಆವರಣದಲ್ಲಿಯೇ ಸಾರಿಗೆ ನೌಕರ ಆತ್ಮಹತ್ಯೆ
ಹಾವೇರಿ: ಡಿಪೋ ಆವರಣದಲ್ಲಿಯೇ ಸಾರಿಗೆ ನೌಕರ ಆತ್ಮಹತ್ಯೆ (Sucide) ಮಾಡಿಕೊಂಡಿರುವ ಘಟನೆ ಜಿಲ್ಲೆಯ ರಾಣೆಬೇನ್ನೂರು (Ranebennur) ನಗರ ಹೊರ ಹೊಲಯದಲ್ಲಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್ ಡಿಪೋದಲ್ಲಿ (Bus Depot) ನಡೆದಿದೆ. ಮಲ್ಲನಗೌಡ ಬಡಗೇರ (48) ಮೃತ ಸಾರಿಗೆ ನೌಕರ. ಇನ್ನು ಆತ್ಮಹತ್ಯೆ ಕಾರಣ ತಿಳಿದುಬಂದಿಲ್ಲ. ಹಲಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ