Mysore News: ಆಟವಾಡುವ ವೇಳೆ ಅಪ್ರಾಪ್ತರಿಬ್ಬರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ

ಆಟವಾಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತರಿಬ್ಬರ ನಡುವೆ ಗಲಾಟೆಯಾಗಿ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮೈಸೂರು ನಗರದ ಸುನ್ನಿಚೌಕ ಬಳಿ ನಡೆದಿದೆ. 17 ವರ್ಷದ ಫರ್ವೇಜ್​ ಖಾನ್ ಮೃತ ವ್ಯಕ್ತಿ.

Mysore News: ಆಟವಾಡುವ ವೇಳೆ ಅಪ್ರಾಪ್ತರಿಬ್ಬರ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ
ಮೃತ ಬಾಲಕ
Follow us
ರಾಮ್​, ಮೈಸೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 04, 2023 | 8:28 AM

ಮೈಸೂರು: ಆಟವಾಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಅಪ್ರಾಪ್ತರಿಬ್ಬರ ನಡುವೆ ಗಲಾಟೆಯಾಗಿ ಚಾಕುವಿನಿಂದ ಇರಿದು ಕೊಲೆ(Murder) ಮಾಡಿರುವ ಘಟನೆ ಮೈಸೂರು(Mysore) ನಗರದ ಸುನ್ನಿಚೌಕ ಬಳಿ ನಡೆದಿದೆ. 17 ವರ್ಷದ ಫರ್ವೇಜ್​ ಖಾನ್ ಮೃತ ವ್ಯಕ್ತಿ. ಇಬ್ಬರ ನಡುವೆ ಗಲಾಟೆಯಾಗಿದ್ದು, ಈ ವೇಳೆ 15 ವರ್ಷದ ಬಾಲಕನೋರ್ವ ಚಾಕುವಿನಿಂದ ಇರಿದಿದ್ದು, ಸ್ಥಳದಲ್ಲೇ ಯುವಕ ಸಾವನ್ನಪ್ಪಿದ್ದಾನೆ. ಈ ಕುರಿತು ಮೈಸೂರಿನ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಲಕನನ್ನು ವಶಕ್ಕೆ ಪಡೆಯಲಾಗಿದೆ.

ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ

ಮೈಸೂರು: ನಂಜನಗೂಡು ತಾಲೂಕಿನ ಸಿದ್ದೇಗೌಡನಹುಂಡಿ ಗ್ರಾಮದಲ್ಲಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದು, ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮಹದೇವಸ್ವಾಮಿ 30ಮೃತ ಯುವಕ. ಜುಲೈ 1 ರಂದು ರಾತ್ರಿ ಮನೆಯಿಂದ ಹೋದ ಮಹದೇವಸ್ವಾಮಿ ವಾಪಸ್ಸು ಬಂದಿರಲಿಲ್ಲ. ಈ ಬಗ್ಗೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮೃತನ ತಂದೆ ಚಿನ್ನಪ್ಪ ದೂರು ನೀಡಿದ್ದರು. ಇದೀಗ ಮಹದೇವಸ್ವಾಮಿಯ ಮೃತ ದೇಹ ಜಮೀನಿನಲ್ಲಿ ಪತ್ತೆಯಾಗಿದೆ. ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Assam: 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಕೊಲೆ ಮಾಡಿ ಶವವನ್ನು ನದಿಗೆ ಎಸೆದ ಆಟೋ ಚಾಲಕನ ಬಂಧನ

ಟಾಟಾ ಏಸ್ ಡಿಕ್ಕಿ ಪಾದಚಾರಿ ಸಾವು

ಮೈಸೂರು: ಜಿಲ್ಲೆಯ ಹುಣಸೂರು ಬಸ್ ನಿಲ್ದಾಣದ ಬಳಿ ಪಾದಚಾರಿಗೆ ಟಾಟಾ ಏಸ್​ ವಾಹನ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪುಟ್ಟಸ್ವಾಮಿ ಗೌಡ (80) ಮೃತ ದುರ್ದೈವಿ. ಮೆಡಿಕಲ್ ಸ್ಟೋರ್‌ನಿಂದ ಬಸ್ ನಿಲ್ದಾಣಕ್ಕೆ ತೆರಳುವ ವೇಳೆ ಅಪಘಾತವಾಗಿದೆ. ನಂತರ ಚಾಲಕ ಪರಾರಿಯಾಗಿದ್ದು, ಗಾಯಾಳು ಪುಟ್ಟಸ್ವಾಮಿ ಗೌಡರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:28 am, Tue, 4 July 23