ಮೈಸೂರು: ಟೈರ್ ಸ್ಫೋಟಗೊಂಡು ಕಾರಿನಲ್ಲಿದ್ದ ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ. ಈ ಘಟನೆ ಮೈಸೂರಿನ ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಸಂಭವಿಸಿದೆ. ದಟ್ಟಗಳ್ಳಿ ರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಕಾರಿನ ಟೈರ್ಗಳು ಸ್ಫೋಟಗೊಂಡಿವೆ. ಈ ವೇಳೆ 12 ವರ್ಷದ ದೈವಿಕ್ ಮತ್ತು 35 ವರ್ಷದ ಗುಣಲಕ್ಷ್ಮೀ ಮೃತಪಟ್ಟಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಜಗದೀಶ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೈಸೂರಿನ ಕುವೆಂಪು ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನ ಮುಂಭಾಗದ ಟೈರ್ಗಳು ಸ್ಫೋಟಗೊಂಡಿವೆ. ಟೈರ್ಗಳು ಸ್ಫೋಟಗೊಂಡಾಗ ಕಾರು ಕಂಬಕ್ಕೆ ಗುದ್ದಿದೆ. ತಾಯಿ ಮಗ ಕಾರಿನಲ್ಲೆ ಸಾವು. ಈ ವೇಳೆ ತಾಯಿ ಮತ್ತು ಮಗ ಕಾರಿನಲ್ಲೇ ಸಾವನ್ನಪ್ಪಿದ್ದಾರೆ. ಕಾರು ಚಾಲನೆ ಮಾಡುತ್ತಿದ್ದ ಪತಿ ಜಗದೀಶ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆ ಇಂದು (ಅ.6) ಮುಂಜಾನೆ 4.30ಕ್ಕೆ ನಡೆದಿದೆ.
ಕುಟುಂಬ ಕುಶಾಲನಗರದಿಂದ ಮೈಸೂರಿಗೆ ವಾಪಸಾಗುತ್ತಿತ್ತು. ಪೂಜೆಗೆಂದು ಕುಶಾಲನಗರಕ್ಕೆ ತೆರಳಿದ್ದರು. ಪೂಜೆ ಮುಗಿಸಿ ವಾಪಸ್ಸು ಬರುವಾಗ ಕಾರಿನ ಟೈರ್ಗಳು ಬ್ಲಾಸ್ಟ್ ಆಗಿವೆ. ಮನೆಗೆ ಒಂದು ಕಿ.ಮೀ ದೂರದಲ್ಲಿರುವಾಗ ಅಪಘಾತವಾಗಿದೆ. ಕಾರಿನ ಮುಂಭಾಗದ ಗಾಜಿಗೆ ಡಿಕ್ಕಿ ಹೊಡೆದು ಗುಣಲಕ್ಷ್ಮಿ ಸಾವನ್ನಪ್ಪಿದ್ದಾರೆ. ಹಿಂಬದಿ ಸೀಟ್ನಲ್ಲಿ ಕುಳಿತಿದ್ದ ಪುತ್ರ ದೈವಿಕ್ ಮೃತಪಟ್ಟಿದ್ದಾನೆ. ಸೀಟ್ ಬೆಲ್ಟ್ ಕುತ್ತಿಗೆ ಸಿಕ್ಕಿ ಹಾಕಿಕೊಂಡು ದೈವಿಕ್ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಜಗದೀಶ್ ಕೈ ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ
Crime News: ಬಟ್ಟೆಯೊಳಗೆ ಜಿಲೆಟಿನ್ ಇಟ್ಟುಕೊಂಡು ಹೆಂಡತಿಯನ್ನು ತಬ್ಬಿದ ಗಂಡ; ಬಾಂಬ್ ಸ್ಫೋಟಗೊಂಡು ಇಬ್ಬರೂ ಸಾವು!
ಟ್ವಿಟರ್ನಲ್ಲಿ ಟ್ರೆಂಡ್ ಆಯ್ತು ಜಿಯೋ ನೆಟ್ವರ್ಕ್ ಡೌನ್; ನಿಮಗೂ ಎದುರಾಯ್ತಾ ಈ ಸಮಸ್ಯೆ?