ಮೈಸೂರು: ಇಬ್ಬರು ಮಕ್ಕಳ ಜೊತೆ ತಾಯಿ (Mother) ನೇಣು ಹಾಕಿಕೊಂಡು ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ರಾಮೇಗೌಡನಪುರ ಗ್ರಾಮದಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ 32 ವರ್ಷದ ಸರೋಜ ತನ್ನ ಆರು ಮತ್ತು ನಾಲ್ಕು ವರ್ಷದ ಮಕ್ಕಳ ಜೊತೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೀತಾ ಮತ್ತು ಕುಸುಮಾ ಮೃತ ಮಕ್ಕಳು. ಕೆಲ ದಿನಗಳ ಹಿಂದೆ ಗಂಡನ ಮನೆಯಿಂದ ಸ್ವಗ್ರಾಮ ರಾಮೇಗೌಡನಪುರಕ್ಕೆ ಆಗಮಿಸಿದ್ದ ಸರೋಜ, ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಈ ಪ್ರಕರಣ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪತ್ನಿಯನ್ನೇ ಹತ್ಯೆಗೈದ ಪತಿ:
ಅನೈತಿಕ ಸಂಬಂಧದ ಬಗ್ಗೆ ಶಂಕಿಸಿ ಪತ್ನಿಯನ್ನೇ ಪತಿ ಹತ್ಯೆಗೈದಿರುವ ಘಟನೆ ಮೈಸೂರು ತಾಲೂಕಿನ ಚೆಟ್ಟನಹಳ್ಳಿಯಲ್ಲಿ ಸಂಭವಿಸಿದೆ. ಮಾರಕಾಸ್ತ್ರದಿಂದ ಕೊಚ್ಚಿ ಪುಟ್ಟಮ್ಮ(40) ಎಂಬುವವರನ್ನ ದೇವರಾಜ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪತ್ನಿ ಕೊಲೆ ಮಾಡಿ ದೇವರಾಜ್ ಪರಾರಿಯಾಗಿದ್ದು, ಈ ಬಗ್ಗೆ ವರುಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ: ಭೂಮಿ ಶೆಟ್ಟಿ, ಸ್ವಪ್ನಾ ಜತೆ ‘ಸಂಚಿನ ಸುಳಿಯಲಿ’ ಸಿಲುಕಿದ ‘ಪುಟ್ಟಕ್ಕನ ಮಕ್ಕಳು’ ನಟ ಪವನ್ ಕುಮಾರ್
ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:
ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದ ನ್ಯೂಟೌನ್ನಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 38 ವರ್ಷದ ಸಂತೋಷ್ ಮೊದಲಿಯಾರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸಂತೋಷ್ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಹಣದ ಲೇವಾದೇವಿಯಲ್ಲಿ ನಷ್ಟವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
Published On - 8:55 am, Tue, 28 June 22