ಭೂಮಿ ಶೆಟ್ಟಿ, ಸ್ವಪ್ನಾ ಜತೆ ‘ಸಂಚಿನ ಸುಳಿಯಲಿ’ ಸಿಲುಕಿದ ‘ಪುಟ್ಟಕ್ಕನ ಮಕ್ಕಳು’ ನಟ ಪವನ್ ಕುಮಾರ್​

Sanchina Suliyali: ಸ್ವಪ್ನಾ ಶೆಟ್ಟಿಗಾರ್​, ಭೂಮಿ ಶೆಟ್ಟಿ, ಪವನ್​ ಕುಮಾರ್​ ಮುಂತಾದವರು ನಟಿಸುತ್ತಿರುವ ‘ಸಂಚಿನ ಸುಳಿಯಲಿ’ ಚಿತ್ರ ಸೆಟ್ಟೇರಿದೆ. ಈ ಸಿನಿಮಾ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ಭೂಮಿ ಶೆಟ್ಟಿ, ಸ್ವಪ್ನಾ ಜತೆ ‘ಸಂಚಿನ ಸುಳಿಯಲಿ’ ಸಿಲುಕಿದ ‘ಪುಟ್ಟಕ್ಕನ ಮಕ್ಕಳು’ ನಟ ಪವನ್ ಕುಮಾರ್​
ಸ್ವಪ್ನಾ ಶೆಟ್ಟಿಗಾರ್​, ಭೂಮಿ ಶೆಟ್ಟಿ, ಪವನ್​ ಕುಮಾರ್​
Follow us
TV9 Web
| Updated By: ಮದನ್​ ಕುಮಾರ್​

Updated on: Jun 28, 2022 | 8:54 AM

ಕಿರುತೆರೆಯಲ್ಲಿ ಮಿಂಚಿದವರ ಮುಂದಿನ ನಿಲ್ದಾಣವೇ ಹಿರಿತೆರೆ. ಯಶ್​, ರಾಧಿಕಾ ಪಂಡಿತ್​, ಶಾರುಖ್​ ಖಾನ್​ ಸೇರಿದಂತೆ ಅನೇಕರು ಧಾರಾವಾಹಿಯಲ್ಲಿ ನಟಿಸಿದ ಬಳಿಕ ಸಿನಿಮಾ ಕ್ಷೇತ್ರಕ್ಕೆ ಬಂದು ಯಶಸ್ಸು ಕಂಡರು. ಅದೇ ಹಾದಿಯಲ್ಲಿ ಅನೇಕ ಕಿರುತೆರೆ ಕಲಾವಿದರು ದೊಡ್ಡ ಪರದೆ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ನಟಿ ಭೂಮಿ ಶೆಟ್ಟಿ (Bhoomi Shetty) ಕೆಲವು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲೂ ಅವರು ಬಣ್ಣ ಹಚ್ಚಿದ್ದಾರೆ. ಅವರ ಹೊಸ ಸಿನಿಮಾಗೆ ‘ಸಂಚಿನ ಸುಳಿಯಲಿ’ (Sanchina Suliyali) ಎಂದು ಶೀರ್ಷಿಕೆ ಇಡಲಾಗಿದೆ. ಇತ್ತೀಚೆಗೆ ಈ ಸಿನಿಮಾ ಸೆಟ್ಟೇರಿದೆ. ಭೂಮಿ ಶೆಟ್ಟಿ ಜೊತೆ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್​ ಖ್ಯಾತಿಯ ನಟ ಪವನ್​ ಕುಮಾರ್​ ಅಭಿನಯಿಸುತ್ತಿದ್ದಾರೆ. ನಟಿ ಸ್ವಪ್ನಾ ಶೆಟ್ಟಿಗಾರ್​ (Swapna Shettigar) ಅವರು ಪ್ರಮುಖ ಪಾತ್ರದಲ್ಲಿ ಇದ್ದಾರೆ. ಅವರ ಅಭಿಮಾನಿಗಳಲ್ಲಿ ಈ ಚಿತ್ರದ ಬಗ್ಗೆ ನಿರೀಕ್ಷೆ ಮೂಡಿದೆ.

‘ಸಂಚಿನ ಸುಳಿಯಲಿ’ ಸಿನಿಮಾಗೆ ಪ್ರಮೋದ್​ ಎಸ್​. ಆರ್​. ಅವರು ನಿರ್ದೇಶನ ಮಾಡುತ್ತಿದ್ದಾರೆ. ‘ಪ್ರೇಮಿಗಳು ನಿರ್ಜನ ಪ್ರದೇಶಕ್ಕೆ ಹೋದಾಗ ಅಪಾಯಕ್ಕೆ ಸಿಲುಕುತ್ತಾರೆ. ಆ ಬಗ್ಗೆ ನಮ್ಮ ಸಿನಿಮಾದ ಮೂಲಕ ಸಂದೇಶ ನೀಡುತ್ತೇವೆ. ಮೈಸೂರಿನಲ್ಲಿ ನಡೆದ ಒಂದು ನೈಜ ಘಟನೆಯ ಎಳೆಯನ್ನು ಇಟ್ಟುಕೊಂಡು ಈ ಕಥೆ ಹೆಣೆದಿದ್ದೇವೆ. ಮನರಂಜನೆಯ ಜೊತೆ ಸಂದೇಶ ಇರಲಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ. ಉಡುಪಿಯಲ್ಲಿ ಶೇ.90 ಭಾಗ ಚಿತ್ರೀಕರಣ ಮಾಡುವುದಾಗಿ ಅವರು ತಿಳಿಸಿದ್ದಾರೆ.

ಕಾಲೇಜು ಹುಡುಗನ ಪಾತ್ರದಲ್ಲಿ ಪವನ್​ ಕುಮಾರ್​ ಕಾಣಿಸಿಕೊಳ್ಳಲಿದ್ದಾರೆ. ‘ಈ ವಯಸ್ಸಿನ ಹುಡುಗರಿಗೆ ಕೆಲವೊಂದು ಹುಚ್ಚಾಟಗಳು ಇರುತ್ತವೆ. ಅದರಿಂದ ಏನೆಲ್ಲ ತೊಂದರೆ ಆಗುತ್ತದೆ ಎಂಬ ಕಥೆ ಈ ಚಿತ್ರದಲ್ಲಿ ಇದೆ. ನನಗೆ ಎರಡು ಶೇಡ್​ನ ಪಾತ್ರ ಇದೆ. ವೃತ್ತಿಜೀವನದ ಆರಂಭದಲ್ಲೇ ಇಂಥ ಅವಕಾಶ ಸಿಕ್ಕಿರುವುದು ಖುಷಿ’ ಎಂದಿದ್ದಾರೆ ಪವನ್​ ಕುಮಾರ್​.

ಇದನ್ನೂ ಓದಿ
Image
Anchor Anushree: ಆ್ಯಂಕರ್​ ಅನುಶ್ರೀಗೆ ಜಾಕೆಟ್​ ಗಿಫ್ಟ್​ ನೀಡಿ, ಕೈಯಾರೆ ತೊಡಿಸಿದ ಶಿವಣ್ಣ; ವಿಡಿಯೋ ವೈರಲ್​
Image
ಡಾಲಿ ಜತೆ ಮತ್ತಷ್ಟು ಸಿನಿಮಾ ಮಾಡ್ತೀನಿ ಎಂದ ಶಿವಣ್ಣ; ಹೊಸ ಅಪ್​ಡೇಟ್ ಕೇಳಿ ಫ್ಯಾನ್ಸ್ ಖುಷ್
Image
ಡಿ-ಗ್ಲಾಮ್ ಲುಕ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಿಗ್​ಬಾಸ್ ಖ್ಯಾತಿಯ ಭೂಮಿ ಶೆಟ್ಟಿ; ಚಿತ್ರ, ಪಾತ್ರದ ಕುರಿತು ಕುತೂಹಲಕರ ಮಾಹಿತಿ ಇಲ್ಲಿದೆ
Image
ಬಿಗ್ ಬಾಸ್ ಫೈನಲಿಸ್ಟ್‌ ಭೂಮಿ ಶೆಟ್ಟಿ ಬೆಂಗಳೂರು ಬಿಟ್ಟವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ?

‘ನಾನು ಮತ್ತು ಪವನ್​ ಈ ಹಿಂದೆ ‘ಕಿನ್ನರಿ’ ಸೀರಿಯಲ್​ನಲ್ಲಿ ಜೊತೆಯಾಗಿ ನಟಿಸಿದ್ದೆವು. ಈ ಚಿತ್ರದಲ್ಲಿ ಅವರು ಹೀರೋ ಆಗಿದ್ದಾರೆ ಎಂಬುದು ಸಂತಸ ತಂದಿದೆ. ಈಗಿನ ತಲೆಮಾರಿನ ಯುವಜನಾಂಗವನ್ನು ಗಮನದಲ್ಲಿ ಇಟ್ಟುಕೊಂಡು ಈ ಸಿನಿಮಾ ಮೂಡಿಬರುತ್ತಿದೆ’ ಎಂದಿದ್ದಾರೆ ಭೂಮಿ ಶೆಟ್ಟಿ. ‘ಮಾನ್ಯ ಕ್ರಿಯೇಷನ್ಸ್​’ ಮೂಲಕ ನಾಗೇಗೌಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಹಿಂದೆ ‘ಅದೃಷ್ಟವಂತರು’ ಸೀರಿಯಲ್​ ನಿರ್ಮಾಣ ಮಾಡಿದ್ದ ಅವರು ಈಗ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ: ಗಾಂಧಿನಗರಕ್ಕೆ ಬಂದ ಹೊಸಬರ ‘ಲೆಕ್ಕಾಚಾರ’ವೇ ಬೇರೆ; ಇದೆಲ್ಲ ‘ಪ್ರೀತಿಯಲ್ಲಿ ಸಹಜ’ ಅಂತಾರೆ

Gym Ravi: 50 ದಿನ ಪೂರೈಸಿದ ‘ಪುರುಷೋತ್ತಮ’ ಸಿನಿಮಾ; ಹೀರೋ ಆಗಿ ಗೆಲುವು ಕಂಡ ಜಿಮ್​ ರವಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ