Rohit Sharma: ಕೊರೊನಾ ನಡುವೆ ಇಂಗ್ಲೆಂಡ್ ಆಟಗಾರರಿಗೆ ಖಡಕ್ ಸಂದೇಶ ರವಾನಿಸಿದ ರೋಹಿತ್ ಶರ್ಮಾ
IND vs ENG: ಪ್ರಸ್ತುತ ರೋಹಿತ್ ಶರ್ಮಾ ತಂಡದ ಹೋಟೆಲ್ನಲ್ಲಿ ಪ್ರತ್ಯೇಕವಾಗಿದ್ದಾರೆ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ಹೀಗಿರುವಾಗ ಹೋಟೆಲ್ನಿಂದಲೇ ಹಿಟ್ಮ್ಯಾನ್ ಎದುರಾಳಿ ತಂಡಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ (England vs India) ನಡುವೆ ಬಾಕಿ ಉಳಿದಿರುವ ಐದನೇ ಟೆಸ್ಟ್ ಜುಲೈ 1 ರಿಂದ ಆರಂಭವಾಗಲಿದೆ. ಆದರೆ, ಇದಕ್ಕೂ ಮುನ್ನವೇ ನಾಯಕ ರೋಹಿತ್ ಶರ್ಮಾ (Rohit Sharma) ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು ಚಿಕಿತ್ಸೆಯಲ್ಲಿದ್ದಾರೆ. ಲೀಸೆಸ್ಟರ್ ವಿರುದ್ಧದ ಅಭ್ಯಾಸ ಪಂದ್ಯದ ಮೂರನೇ ದಿನದಾಟ ಮುಗಿದ ಬಳಿಕ ನಡೆದ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಅವರಿಗೆ ಕೋವಿಡ್ -19 (Covid-19) ಸೋಂಕು ಇರುವುದು ದೃಢಪಟ್ಟಿದೆ. ಪ್ರಸ್ತುತ ಹಿಟ್ಮ್ಯಾನ್ ತಂಡದ ಹೋಟೆಲ್ನಲ್ಲಿ ಪ್ರತ್ಯೇಕವಾಗಿದ್ದಾರೆ ಮತ್ತು ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ. ಜುಲೈ 1ರ ವೇಳೆಗೆ ಇವರು ಗುಣಮುಖರಾಗುವುದು ಅನುಮಾನ ಎನ್ನಲಾಗುತ್ತಿದೆ. ಹೀಗಿರುವಾಗ ಹೋಟೆಲ್ನಿಂದಲೇ ಹಿಟ್ಮ್ಯಾನ್ ಎದುರಾಳಿ ತಂಡಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಒಂದನ್ನು ಹಂಚಿಕೊಂಡಿರುವ ರೋಹಿತ್ ಶರ್ಮಾ ನಾನು ಗುಣಮುಖನಾಗುತ್ತಿದ್ದೇನೆ ಎಂಬಂತೆ ನಗುತ್ತಾ ಫೋಟೋ ಶೇರ್ ಮಾಡಿದ್ದಾರೆ. ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಇದರ ನಡುವೆ ರೋಹಿತ್ ಶರ್ಮಾ ಎಲ್ಲಾದರು ಟೆಸ್ಟ್ಗೆ ಅಲಭ್ಯರಾದರೆ ಇವರ ಜಾಗಕ್ಕೆ ಬದಲಿ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಅವರನ್ನು ಬಿಸಿಸಿಐ ಇಂಗ್ಲೆಂಡ್ಗೆ ಕಳಿಹಿಸಿದೆ. ಮಯಾಂಕ್ ಕೂಡ ಆಂಗ್ಲರ ನಾಡಿಗೆ ತಲುಪಿದ್ದಾರೆ.
IND vs IRE: ಒಂದು ಬದಲಾವಣೆ: ದ್ವಿತೀಯ ಟಿ20ಗೆ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ ಟೀಮ್ ಇಂಡಿಯಾ
ಇಂಗ್ಲೆಂಡ್‌ನ ಕೋವಿಡ್ ಮಾರ್ಗಸೂಚಿಯಂತೆ ಆರ್‌ಟಿಪಿಸಿಆರ್ ನೆಗೆಟಿವ್ ಬಂದರೆ ಕ್ವಾರಂಟೈನ್‌ನಲ್ಲಿರುವ ಅಗತ್ಯವಿಲ್ಲ. ಆದ್ದರಿಂದ ಜುಲೈ 1 ರಂದು ಆರಂಭವಾಗುವ ಟೆಸ್ಟ್‌ನಲ್ಲಿ ಆಡುವ ಅನಿವಾರ್ಯತೆ ಒದಗಿದರೆ ಮಯಂಕ್ ಲಭ್ಯರಿರುತ್ತಾರೆ. ಇದರ ನಡುವೆ ರೋಹಿತ್ ಅಲಭ್ಯರಾದರೆ ನೂತನ ನಾಯಕ ಯಾರು ಎಂಬ ಬಗ್ಗೆಯೂ ಸ್ಪಷ್ಟನೆ ನೀಡಿಲ್ಲ. ಆದರೆ, ಮೂಲಗಳ ಪ್ರಕಾರ ಪಂದ್ಯದ ಹೊತ್ತಿಗೆ ರೋಹಿತ್ ಚೇತರಿಸದೇ ಇದ್ದರೆ, ವೇಗಿ ಜಸ್‌ಪ್ರೀತ್ ಬುಮ್ರಾಗೆ ಕ್ಯಾಪ್ಟನ್ ಪಟ್ಟ ಸಿಗುವುದು ಖಾತ್ರಿಯಾಗಿದೆ.
ಭಾರತ ಟೆಸ್ಟ್ ತಂಡದ ಉಪನಾಯಕ ಕೆ. ಎಲ್ ರಾಹುಲ್ ಕೂಡ ಗಾಯದ ಸಮಸ್ಯೆ ಕಾರಣ ಇಂಗ್ಲೆಂಡ್ ಪ್ರವಾಸ ಕೈಗೊಂಡಿಲ್ಲ. ಹೀಗಾಗಿ ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಟೆಸ್ಟ್ ತಂಡದ ಉಪನಾಯಕನಾಗಿದ್ದ ಬುಮ್ರಾಗೆ ಕ್ಯಾಪ್ಟನ್ ಜವಾಬ್ದಾರಿ ಸಿಗಲಿದೆ ಎಂದು ವರದಿಗಳು ಹೇಳಿವೆ. ಆದರೆ, ಈ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ.
ಬೆನ್ ಫೋಕ್ಸ್ಗೆ ಕೊರೊನಾ:
ಭಾರತ ತಂಡದಲ್ಲಿ ಕೊರೊನಾ ಪ್ರಕರಣ ಕಂಡುಬಂದ ಬೆನ್ನಲ್ಲೇ ಇದೀಗ ಇಂಗ್ಲೆಂಡ್ ತಂಡದಲ್ಲೂ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೆನ್ ಫೋಕ್ಸ್ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಕೊರೊನಾ ಸೋಂಕಿತ ಫಾಕ್ಸ್ ಹೆಡಿಂಗ್ಲಿ ಟೆಸ್ಟ್‌ನಿಂದ ತನ್ನ ಹೆಸರನ್ನು ಹಿಂಪಡೆದಿದ್ದಾರೆ. ಅವರ ಸ್ಥಾನಕ್ಕೆ ಸ್ಯಾಮ್ ಬಿಲ್ಲಿಂಗ್ಸ್ ಅವರನ್ನು ಇಂಗ್ಲೆಂಡ್ ತಂಡ ಸೇರಿಸಿಕೊಂಡಿದೆ. ಹಿಂದಿನ ಶನಿವಾರ, ಫಾಕ್ಸ್ ಬೆನ್ನುನೋವಿನಿಂದ ನರುಳುತ್ತಿದ್ದರಿಂದ ವಿಕೆಟ್ ಕೀಪಿಂಗ್ ಮಾಡಿರಲಿಲ್ಲ. ಹಾಗಾಗಿ ಜಾನಿ ಬೈರ್‌ಸ್ಟೋ ಅವರ ಸ್ಥಾನವನ್ನು ಭರ್ತಿ ಮಾಡಿದ್ದರು. ಶನಿವಾರ ಸಂಜೆ ಫಾಕ್ಸ್ ಅವರ ಕೊರೊನಾ ಪರೀಕ್ಷೆಯನ್ನು ಮಾಡಲಾಗಿದ್ದು, ಫಲಿತಾಂಶವು ಪಾಸಿಟಿವ್ ಎಂದು ತಿಳಿದುಬಂದಿದೆ.
T20 Cricket Records: ಟಿ20ಕ್ರಿಕೆಟ್ನಲ್ಲಿ ಕಾಂಗರೂಗಳ ದಾಖಲೆ ಮುರಿದ ಭಾರತದ ಹುಲಿಗಳು..!