ಮೈಸೂರಿನಲ್ಲಿ 4 ವರ್ಷದ ಹೆತ್ತ ಮಗನನ್ನೇ ಕೊಚ್ಚಿ ಕೊಲೆಗೈದ ತಾಯಿ!

ಬೂದನೂರಿನ ಶಂಕರ್ ಜೊತೆ 5 ವರ್ಷದ ಹಿಂದೆ ಭವಾನಿ ಮದುವೆ ಆಗಿತ್ತು. ಭವಾನಿ ಮೈ ಮೇಲೆ ದೇವರು ಬರುತ್ತೆ ಅನ್ನುತ್ತಿದ್ದಳು. ಇತ್ತೀಚೆಗೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಭವಾನಿ, ಗಂಡನೊಂದಿಗೆ ಗಲಾಟೆ ಮಾಡಿಕೊಂಡು ಮಗು ಸಹಿತ ತವರು ಮನೆ ಸೇರಿದ್ದಳು.

ಮೈಸೂರಿನಲ್ಲಿ 4 ವರ್ಷದ ಹೆತ್ತ ಮಗನನ್ನೇ ಕೊಚ್ಚಿ ಕೊಲೆಗೈದ ತಾಯಿ!
ಕೊಲೆಯಾದ ಮಗು
Follow us
TV9 Web
| Updated By: sandhya thejappa

Updated on:Jan 11, 2022 | 9:27 AM

ಮೈಸೂರು: ತಾಯಿ ಹೆತ್ತ ಮಗನನ್ನೇ ಕೊಚ್ಚಿ ಕೊಲೆಗೈದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಬೂದನೂರು ಗ್ರಾಮದಲ್ಲಿ ನಡೆದಿದೆ. ತಾಯಿ ಭವಾನಿ ಮಾನಸಿಕ ಅಸ್ವಸ್ಥರಾಗಿದ್ದು, 4 ವರ್ಷದ ಶ್ರೀನಿವಾಸ್ ಎಂಬ ಮಗನನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿದ್ದಾಳೆ. ಪತಿ ಶಂಕರ್ ಮನೆಯಲ್ಲಿ ಇಲ್ಲದಿದ್ದಾಗ ಭವಾನಿ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಎಚ್.ಡಿ.ಕೋಟೆ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಬೂದನೂರಿನ ಶಂಕರ್ ಜೊತೆ 5 ವರ್ಷದ ಹಿಂದೆ ಭವಾನಿ ಮದುವೆ ಆಗಿತ್ತು. ಭವಾನಿ ಮೈ ಮೇಲೆ ದೇವರು ಬರುತ್ತೆ ಅನ್ನುತ್ತಿದ್ದಳು. ಇತ್ತೀಚೆಗೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಭವಾನಿ, ಗಂಡನೊಂದಿಗೆ ಗಲಾಟೆ ಮಾಡಿಕೊಂಡು ಮಗು ಸಹಿತ ತವರು ಮನೆ ಸೇರಿದ್ದಳು. ಪತಿ ಶಂಕರ್ ಸಮಾಧಾನಪಡಿಸಿ ವಾಪಸ್ಸು ಕರೆತಂದಿದ್ದರು.

ಕೆಲಸದ ನಿಮಿತ್ತ ಪತಿ ಹೊರಗಡೆ ಹೋಗಿದ್ದಾಗ ತನ್ನ ಮಗುವನ್ನ ತಾಯಿ ಭವಾನಿ ಕೊಲೆ ಮಾಡಿದ್ದಾಳೆ. ಮಚ್ಚಿನಿಂದ ತಲೆಗೆ ನಾಲ್ಕೈದು ಬಾರಿ ಹೊಡೆದಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಪತಿ ಶಂಕರ್ ಗ್ರಾಮಸ್ಥರ ನೆರವಿನಿಂದ ಎಚ್.ಡಿ.ಕೋಟೆಯ ತಾಲೂಕು ಆಸ್ಪತ್ರೆಗೆ ಮಗುವನ್ನು ಸೇರಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಶ್ರೀನಿವಾಸ್ ಮೃತಪಟ್ಟಿದೆ.

ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ!                                                                                                                                                              ಮೈಸೂರಿನ ಗನ್ ಹೌಸ್ ವೃತ್ತದ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವೈದ್ಯ ತಕ್ಷಣ ಕಾರಿಂದ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ನಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಕುವೆಂಪು ನಗರದ ವೈದ್ಯ ಭೂಷಣ್ ಅವರ ಐ20 ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ.

ಇದನ್ನೂ ಓದಿ

ಮಕ್ಕಳಲ್ಲಿ ಹೆಚ್ಚಾದ ಕೊರೊನಾ, ಶಾಲೆಗಳನ್ನು ಬಂದ್ ಮಾಡುವಂತೆ ಶಾಸಕ ಸುರೇಶ್ ಗೌಡ ಒತ್ತಾಯ

ಪಾದಯಾತ್ರೆಯಲ್ಲಿ ಇಂದಿನಿಂದ ಡಿಕೆ ಶಿವಕುಮಾರ್ 3 ದಿನ‌ ಮೌನ! ಸುಪ್ರೀಂಕೋರ್ಟ್​ನಲ್ಲಿಂದು ತಮಿಳುನಾಡು ಮೇಲ್ಮನವಿ ವಿಚಾರಣೆ

Published On - 9:25 am, Tue, 11 January 22

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ