AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸಕ್ಕೆಂದು ಆಫ್ರಿಕಾಕ್ಕೆ ಹೋಗಿದ್ದ ಮೈಸೂರಿನ ಯುವಕ ಸಾವು; ಮೃತದೇಹ ಸ್ವಗ್ರಾಮಕ್ಕೆ ತರಿಸುವಂತೆ ಸರ್ಕಾರಕ್ಕೆ ಫೋಷಕರ ಮನವಿ

ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ್ದ, ಮೈಸೂರು ಜಿಲ್ಲೆಯ ಹೆಚ್​.ಡಿ ಕೋಟೆ‌ ತಾಲ್ಲೂಕಿನ ಟೈಗರ್ ಬ್ಲಾಕ್​ನಲ್ಲಿ ವಾಸವಾಗಿದ್ದ ಯುವಕನೋರ್ವ, ಕೆಲಸಕ್ಕಾಗಿ ಆಫ್ರಿಕಾ ದೇಶಕ್ಕೆ ಹೋಗಿದ್ದ. ಇದೀಗ ಆತ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ.

ಕೆಲಸಕ್ಕೆಂದು ಆಫ್ರಿಕಾಕ್ಕೆ ಹೋಗಿದ್ದ ಮೈಸೂರಿನ ಯುವಕ ಸಾವು; ಮೃತದೇಹ ಸ್ವಗ್ರಾಮಕ್ಕೆ ತರಿಸುವಂತೆ ಸರ್ಕಾರಕ್ಕೆ ಫೋಷಕರ ಮನವಿ
ಮೃತ ಯುವಕ
ರಾಮ್​, ಮೈಸೂರು
| Updated By: ಕಿರಣ್ ಹನುಮಂತ್​ ಮಾದಾರ್|

Updated on:Jul 04, 2023 | 7:14 AM

Share

ಮೈಸೂರು: ಕೆಲಸಕ್ಕಾಗಿ ಆಫ್ರಿಕಾ(Africa) ದೇಶಕ್ಕೆ ಹೋಗಿದ್ದ ಯುವಕನೋರ್ವ ಅನಾರೋಗ್ಯದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಎಫ್ರಾಹಿಂ (20) ಮೃತ ದುರ್ದೈವಿ. ಹಕ್ಕಿ ಪಿಕ್ಕಿ(Hakki Pikki) ಸಮುದಾಯಕ್ಕೆ ಸೇರಿದ ಇವರು ಮೈಸೂರು ಜಿಲ್ಲೆಯ ಹೆಚ್​.ಡಿ ಕೋಟೆ‌ ತಾಲ್ಲೂಕಿನ ಟೈಗರ್ ಬ್ಲಾಕ್​ನಲ್ಲಿ ವಾಸವಾಗಿದ್ದರು. ಒಂದು ವರ್ಷದ ಹಿಂದೆ ಮಸಾಜ್ ಮಾಡುವ ಕೆಲಸಕ್ಕೆ ಆಫ್ರಿಕಾಕ್ಕೆ ತೆರಳಿದ್ದನು. ಅಲ್ಲಿಯ ಅಮೇಜಾನ್ ಅಬಿಜಾನಾನಲ್ಲಿ ವಾಸವಾಗಿದ್ದ. ಕುಟುಂಬಕ್ಕೆ ಆಧಾರವಾಗಿದ್ದ ಎಫ್ರಾಹಿಂ, ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಈ ಬಗ್ಗೆ ತಂದೆ ತಾಯಿ ಜೊತೆ ದೂರವಾಣಿಯಲ್ಲಿ ಮಾತನಾಡಿ, ಬಳಿಕ ಆಸ್ಪತ್ರೆಗೆ ದಾಖಲಾಗಿದ್ದ. ಆದರೀಗ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

ಮೃತದೇಹವನ್ನ ಸ್ವಗ್ರಾಮಕ್ಕೆ ತರಿಸುವಂತೆ ಸರ್ಕಾರಕ್ಕೆ ಕುಟುಂಬದ ಮನವಿ

ಇಡೀ ಕುಟುಂಬಕ್ಕೆ ಇತನೊಬ್ಬನೇ ಆಧಾರವಾಗಿದ್ದ. ಇದೀಗ ಮಗನ ಅಕಾಲಿಕ ಸಾವಿನಿಂದ ಕುಟುಂಬ ಆಘಾತಕ್ಕೀಡಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗನ ಅಂತಿಮ ದರ್ಶನ ಪಡೆಯಲು ಆಗದೆ ಪೋಷಕರ ಕಂಗಾಲಾಗಿದ್ದು, ಮೃತದೇಹವನ್ನ ಸ್ವಗ್ರಾಮಕ್ಕೆ ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಕೂಡಲೇ ಸರ್ಕಾರ ಇವರ ಮನವಿಗೆ ಪ್ರತಿಕ್ರಿಯಿಸಿ, ಆತನ ಪೋಷಕರಿಗೆ ಮಗನ ಅಂತಿಮ ದರ್ಶನ ಪಡೆಯುವ ವ್ಯವಸ್ಥೆ ಮಾಡುವಂತಾಗಲಿ.

ಇದನ್ನೂ ಓದಿ:Rajasthan: ರೈಲು ಹತ್ತುವಾಗ ಕಾಲು ಜಾರಿ ಬಿದ್ದು ತಂದೆ ಮಗಳು ಸಾವು

ಹಕ್ಕಿ ಪಿಕ್ಕಿ ಜನಾಂಗ

ಮೂಲತಃ ಈ ಹಕ್ಕಿ ಪಿಕ್ಕಿ ಜನಾಂಗ ಉತ್ತರ ಭಾರತದಿಂದ ಬಂದವರಾಗಿದ್ದು, ಹಕ್ಕಿ ಎಂದರೆ ‘ಪಕ್ಷಿ’ ಪಿಕ್ಕಿ ಎಂದರೆ ಹಿಡಿಯುವುದು. ಪಕ್ಷಿಯನ್ನ ಹಿಡಿಯುವುದು ಇವರ ಸಾಂಪ್ರದಾಯಿಕ ಉದ್ಯೋಗವಾಗಿತ್ತು. ಬಳಿಕ ಸರ್ಕಾರ ಇದನ್ನು ನಿಷೇಧಿಸಿದ ಮೇಲೆ ಕೃಷಿ ಚಟುವಟಿಕೆ, ಗಿಡಮೂಲಿಕೆಗಳಿಂದ ಔಷಧಿ ತಯಾರಿಕೆ ಮಾಡಿ, ದುಬೈ, ಆಫ್ರಿಕಾ ಸೇರಿ ಮುಂತಾದ ದೇಶಗಳಿಗೆ ವಲಸೆ ಹೋಗಲಾರಂಭಿಸಿದರು. ಇವರು ಕರ್ನಾಟಕದ ಮೈಸೂರು, ದಾವಣೆಗೆರೆ, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:13 am, Tue, 4 July 23