ಮೈಸೂರಿನಲ್ಲಿ ಮತ್ತೊಂದು ಪಾರಂಪರಿಕ ಕಟ್ಟಡ ಕುಸಿತ; ರಾಜವಂಶಸ್ಥೆ ಪ್ರಮೋದಾದೇವಿಯನ್ನು ಭೇಟಿ ಮಾಡಿದ ಶಾಸಕ L.ನಾಗೇಂದ್ರ
ವಾಣಿ ವಿಲಾಸ ರಸ್ತೆ ಭಾಗದ ಕಟ್ಟಡದ ಮೇಲ್ಛಾವಣಿ ಕುಸಿದಿದೆ. ಸುಮಾರು 95 ವರ್ಷದ ಹಳೆಯ ಕಟ್ಟಡ ಇದಾಗಿದ್ದು 1927ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿದ್ದ ಮಾರುಕಟ್ಟೆ ಇದು.
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ನಗರದಲ್ಲಿ ಮತ್ತೊಂದು ಪಾರಂಪರಿಕ ಕಟ್ಟಡ ಕುಸಿದು ಬಿದ್ದಿದೆ. ಸದ್ಯ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ನಿರಂತರ ಮಳೆಯಿಂದಾಗಿ ಅಗ್ರಹಾರದ ವಾಣಿ ವಿಲಾಸ ಮಾರುಕಟ್ಟೆ ಕಟ್ಟಡ ಕುಸಿದಿದೆ. ವಾಣಿ ವಿಲಾಸ ರಸ್ತೆ ಭಾಗದ ಕಟ್ಟಡದ ಮೇಲ್ಛಾವಣಿ ಕುಸಿದಿದೆ. ಸುಮಾರು 95 ವರ್ಷದ ಹಳೆಯ ಕಟ್ಟಡ ಇದಾಗಿದ್ದು 1927ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿದ್ದ ಮಾರುಕಟ್ಟೆ ಇದು. ಸೂಕ್ತ ನಿರ್ವಹಣೆ ಇಲ್ಲದೇ ಹಲವು ಭಾಗಗಳಲ್ಲಿ ಕುಸಿದಿದೆ. ಕಟ್ಟಡ ನಿರ್ವಹಣೆ ಮಾಡುವಲ್ಲಿ ಮೈಸೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯ ಕಂಡು ಬಂದಿದೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯ ವ್ಯಾಪಾರಿಗಳು ಆಕ್ರೋಶ ಹೊರ ಹಾಕಿದ್ದಾರೆ.
ರಾಜವಂಶಸ್ಥೆ ಪ್ರಮೋದಾದೇವಿಯನ್ನು ಭೇಟಿ ಮಾಡಿದ ಶಾಸಕ L.ನಾಗೇಂದ್ರ ಇನ್ನು ದೇವರಾಜ ಮಾರುಕಟ್ಟೆ, ಲ್ಯಾನ್ಸ್ ಡೌನ್ ಕಟ್ಟಡ ನೆಲಸಮ ವಿಚಾರಕ್ಕೆ ಸಂಬಂಧಿಸಿ ರಾಜವಂಶಸ್ಥೆ ಪ್ರಮೋದಾದೇವಿಯನ್ನು ಶಾಸಕ L.ನಾಗೇಂದ್ರ ಭೇಟಿಯಾಗಿದ್ದಾರೆ. ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಪಾರಂಪರಿಕ ಕಟ್ಟಡಗಳ ಜೀರ್ಣೋದ್ಧಾರ, ಅಭಿವೃದ್ಧಿ, ದುರಸ್ತಿ ಬಗ್ಗೆ ಚರ್ಚೆ ನಡೆಸಿದ್ದಾರೆ.
ಇದೇ ವೇಳೆ ಟಾಸ್ಕ್ ಫೋರ್ಸ್ ಸಮಿತಿ, ಪಾರಂಪರಿಕ ತಜ್ಞರ ಸಮಿತಿ, ಮೈಸೂರು ಪಾಲಿಕೆ ಕೌನ್ಸಿಲ್ ನಿರ್ಣಯಗಳ ಬಗ್ಗೆ ಪ್ರಮೋದಾದೇವಿ ಒಡೆಯರ್ಗೆ ಶಾಸಕ ನಾಗೇಂದ್ರ ಮಾಹಿತಿ ನೀಡಿದ್ದಾರೆ. ನ್ಯಾಯಾಲಯದ ಆದೇಶ, ಸಮಿತಿಗಳ ಅಭಿಪ್ರಾಯಗಳ ಬಗ್ಗೆ ವಿವರಣೆ ನೀಡಿದ್ದಾರೆ. ಈ ಬಗ್ಗೆ ತಜ್ಞರೊಂದಿಗೆ ಚರ್ಚಿಸಿ ಅಭಿಪ್ರಾಯ ಪಡೆಯುತ್ತೇನೆ. 10-15 ದಿನಗಳಲ್ಲಿ ನಿರ್ಧಾರ ತಿಳಿಸೋದಾಗಿ ಪ್ರಮೋದಾದೇವಿ ಹೇಳಿದ್ರು.
ಮೈಸೂರು ಜಿಲ್ಲೆಯ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ