ಜನತಾ ಜಲಧಾರೆ ಸಮಾವೇಶಕ್ಕೂ ಮುನ್ನ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ: ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ

ಜಾತ್ಯತೀತ ಜನತಾದಳ ನಾಳೆ ಹಮ್ಮಿಕೊಂಡಿರುವ ಜನತಾ ಜಲಧಾರೆ ಸಮಾರೋಪ ಸಮಾವೇಶದಲ್ಲಿ ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.

ಜನತಾ ಜಲಧಾರೆ ಸಮಾವೇಶಕ್ಕೂ ಮುನ್ನ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ: ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:May 13, 2022 | 11:36 AM

ಮೈಸೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದಲ್ಲಿ ಇಂದು ನಡೆಯಲಿರುವ ಜನತಾ ಜಲಧಾರೆ ಸಮಾವೇಶಕ್ಕೂ ಮುನ್ನ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡಿದ್ದಾರೆ. ಚಾಮುಂಡಿ ಬೆಟ್ಟದಲ್ಲೇ ಜಲಧಾರೆ ಕಾರ್ಯಕ್ರಮ ಆರಂಭಿಸಲಾಗಿತ್ತು. ಮಾಜಿ ಸಚಿವ ಸಾ.ರಾ.ಮಹೇಶ್ ಸಾಥ್​ ನೀಡಿದರು. ಏಪ್ರೀಲ್ 14ರಂದು ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಚಾಲನೆ ನೀಡಿದ್ದರು.

ಈ ಕುರಿತಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ರಾಮನಗರದಲ್ಲಿ ಹೇಳಿಕೆ ನೀಡಿದ್ದಾರೆ. ಏಪ್ರಿಲ್ 16 ರಂದು ಜನತಾ ಜಲಧಾರೆ ಕಾರ್ಯಕ್ರಮ ಆರಂಭವಾಗಿದೆ. ಸಮಾರೋಪ ಸಮಾವೇಶ ನೆಲಮಂಗದಲ್ಲಿ ಇಂದು ನಡೆಯುತ್ತಿದೆ. ಎಲ್ಲರಲ್ಲೂ ಆತಂಕ ‌ಇದೆ. ಮಳೆ ಇದ್ದರು ಕುಮಾರಸ್ವಾಮಿ ಬಂಡ ಧೈರ್ಯ‌ ಮಾಡಿದ್ದಾರೆ ಎನ್ನುತ್ತಿದ್ದಾರೆ. ನಮಗೆ ನಂಬಿಕೆ ಇದೆ. ಚಾಮುಂಡೇಶ್ವರಿ ಮಕ್ಕಳಾದ ನಮಗೆ ಯಾವುದೇ ಅಡಚಣೆ ಬರುವುದಿಲ್ಲ ಎಂಬ ವಿಶ್ವಾಸವಿದೆ. ಜನತಾ ಜಲಧಾರೆ ಕಾರ್ಯಕ್ರಮ ಪಕ್ಷಕ್ಕೆ ಪುನಶ್ಚೇತನ ಕೊಡುತ್ತದೆ. ನಮ್ಮ‌ಪಕ್ಷದ ಕಾರ್ಯಕ್ರಮವನ್ನ ಜನರ ಮುಂದೆ ಇಡುತ್ತಿದ್ದೇವೆ. ನಾಡಿನ‌ ಜೀವನದಿಗಳ ನೀರನ್ನ ಬಳಸಿಕೊಳ್ಳಲು ವೈಫಲ್ಯತೆ ಕಂಡಿದ್ದೇವೆ. ಎರಡು ರಾಷ್ಟ್ರೀಯ ಪಕ್ಷಗಳಿಂದ ದ್ರೋಹ ಅಗಿರೋ ಬಗ್ಗೆ ಜನರ ಮುಂದೆ ಇಡುತ್ತೇವೆ ಎಂದರು.

ಐದು ವರ್ಷ ಅಧಿಕಾರ ಕೊಟ್ಟರೇ ಯೋಜನೆಗಳನ್ನ ಸಕಾರಗೊಳಿಸುತ್ತೇವೆ. ಇಲ್ಲದಿದ್ದರೆ ‌ಪಕ್ಷವನ್ನ ವಿಸರ್ಜನೆಗೊಳಿಸುತ್ತೇವೆ ಎಂದು ಸವಾಲು ಸ್ವೀಕಾರ ಮಾಡಿದ್ದೇವೆ. ತಾಯಿಯ‌ ಆರ್ಶೀವಾದ ಇದೆ. ನೂರಾಕ್ಕೆ ನೂರು ಯಶಸ್ಸು ಕಾಣುತ್ತೇವೆ. ಜನರ ವಿಶ್ವಾಸಗಳಿಸಲು ಜನತಾ ಜಲಧಾರೆ ಹೋಗಿದ್ದು, ಜನತಾ ಜಲಧಾರೆ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯುತ್ತಿದೆ. ಉತ್ತಮ ಕಾರ್ಯಕ್ರಮ, ಮತ್ತೊಮ್ಮೆ ಕುಮಾರಸ್ವಾಮಿ ಅಯ್ಕೆ ಮಾಡೋಣಾ ಎಂಬ ಚರ್ಚೆ ನಡೆಯುತ್ತಿದೆ. ವಿರೋಧ ಪಕ್ಷಗಳು ಜೆಡಿಎಸ್ ಮುಳಗಿ ಹೋಯಿತು ಎಂಬ ಅಪಪ್ರಚಾರ ಮಾಡಿದ್ರು. ಇದಕ್ಕೆ ಜನತಾ ಜಲಧಾರೆ ಉತ್ತರ ಕೊಟ್ಟಿದೆ. ಕಾರ್ಯಕರ್ತರು ಡಬಲ್ ಎನರ್ಜಿಯಿಂದ ಹೊರಟಿದ್ದಾರೆ ಎಂದು ಹೇಳಿದರು.

ನಮ್ಮ ಪಕ್ಷದ ಶಾಸಕರ ಕೆಲ ಗೊಂದಲಗಳನ್ನ ಭಗವಂತನೇ ಇತಿಶ್ರೀ ಮಾಡುತ್ತಾನೆ. ಎಲ್ಲ ಪಕ್ಷದಲ್ಲೂ ಸಮಸ್ಯೆ ಇದೆ. ಕಾಂಗ್ರೆಸ್​ನಲ್ಲಿ ಹತ್ತಿ ಉರಿಯುತ್ತಿದೆ. ಅಷ್ಟೊಂದು ದೊಡ್ಡ ಮಟ್ಟಿನ ಸಮಸ್ಯೆ ನಮ್ಮ ಪಕ್ಷದಲ್ಲಿ ಇಲ್ಲ. ಕಾಂಗ್ರೆಸ್ ಪಕ್ಷದ ಆತಂರಿಕ ಜಗಳವನ್ನ ನಾನೇಕೆ ಚರ್ಚೆ ಮಾಡಲಿ. ಸಮಾರೋಪ ಸಮಾರಂಭದಲ್ಲಿ ‌ನಾಲ್ಕರಿಂದ ಐದು‌ ಲಕ್ಷ ಜನ ಭಾಗವಹಿಸುತ್ತಿದ್ದಾರೆ. ಗಂಗಾರಥಗಳು ಹೋಗಿದ್ದಾವೆ ಅಲ್ಲೆಲ್ಲ ಮಳೆಯಾಗಿದೆ. ಜನತಾ ಜಲಧಾರೆ ಆರಂಭಿಸಿದ ನಂತರ ಧಾರಕಾರ ಮಳೆಯಾಗಿದೆ. ಇದು‌ ಒಂದು ರೀತಿಯ ಕಾಕತಾಳೀಯ. ನಾನೇನು‌ ಮ್ಯಾಜೀಕ್‌ ಮಾಡುವುದು ಇಲ್ಲ. ನಮ್ಮ‌ಗುರಿ 123 ಸ್ಥಾನ ಗೆಲ್ಲುವುದಾಗಿದೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಜನತಾ ಜಲಧಾರೆ ಸಮಾವೇಶದಲ್ಲಿ ದಾಸೋಹ; 5 ಲಕ್ಷ ಜನರಿಗೆ ಊಟೋಪಚಾರ

ಜಾತ್ಯತೀತ ಜನತಾದಳ ನಾಳೆ ಹಮ್ಮಿಕೊಂಡಿರುವ ಜನತಾ ಜಲಧಾರೆ ಸಮಾರೋಪ ಸಮಾವೇಶದಲ್ಲಿ ರಾಜ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ. ಐದು ಲಕ್ಷ ಜನರಿಗೆ ಅಡುಗೆ ವ್ಯವಸ್ಥೆ ಮಾಡಿಸಲಾಗಿದೆ. ಮೂರು ಸಾವಿರ ಬಾಣಸಿಗರು ಅಡುಗೆ ತಯಾರಿಯಲ್ಲಿ ತೊಡಗಿದ್ದಾರೆ. ಊಟ ಬಡಿಸಲು ಎರಡು ಸಾವಿರ ಸಿಬ್ಬಂದಿ ಇದ್ದಾರೆ. ಅಡುಗೆ ಬಡಿಸುವ ವ್ಯವಸ್ಥೆಯನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡಲಾಗಿದೆ. ನಾಳೆ ಬೆಳಗ್ಗೆ 10 ಗಂಟೆಯಿಂದಲೇ ಫಲಾವ್ ಮತ್ತು ಜಿಲೇಬಿಯನ್ನು ಜನತೆಗೆ ನೀಡಲಾಗುತ್ತಿದೆ. ಸಂಜೆ 4 ಗಂಟೆಗೆ ಉಪ್ಪಿಟ್ಟು – ಕೇಸರಿಬಾತ್ ಕೊಡಲಾಗುವುದು. ಜತೆಯಲ್ಲಿ ಮಜ್ಜಿಗೆಯನ್ನು ನೀಡಲಾಗುವುದು.

ಸತೀಶ್ ಅವರ ನೇತೃತ್ವದ ಎ.ಎಸ್. ಕೇಟರಿಂಗ್​ನವರು ಕೇಟರಿಂಗ್ ಮಾಡಿದ್ದಾರೆ. ಬೃಹತ್ ಪ್ರಮಾಣದಲ್ಲಿ ಆಗುತ್ತಿರುವ ಅಡುಗೆ ತಯಾರಿ ಕೆಲಸವನ್ನು ಕುಮಾರಸ್ವಾಮಿ ಅವರು ಪರಿಶೀಲನೆ ನಡೆಸಿದರು. ಸಮಾವೇಶದ ಸ್ಥಳದಲ್ಲಿ ಅಡುಗೆ ತಯಾರಿಸುವ ಕಾಯಕವೇ ಎಲ್ಲರ ಗಮನವನ್ನು ಸೆಳೆದಿದ್ದು, ಸಮಾವೇಶದ ಬಗ್ಗೆ ಭಾರೀ ನಿರೀಕ್ಷೆ ಸೃಷ್ಟಿ ಮಾಡಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:17 am, Fri, 13 May 22