Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore News: ಶತಮಾನದಷ್ಟು ಹಳೆಯದಾದ ಹುಣಸೂರು ಸೇತುವೆ ಶಿಥಿಲ, ನಿಷೇಧವಿದ್ದರೂ ಸಂಚರಿಸುವ ಭಾರಿ ವಾಹನಗಳು; ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದ ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶತಮಾನ ಪೂರೈಸಿದೆ. ಈ ಸೇತುವೆ ನಿರ್ವಹಣೆಯ ಕೊರತೆಯಿಂದ ಶಿಥಿಲಗೊಂಡಿದ್ದು, ಸೇತುವೆ ಮೇಲೆ ವಾಹನಗಳು ಸಂಚಾರಕ್ಕೆ ನಿಷೇಧವಿದೆ.

Mysore News: ಶತಮಾನದಷ್ಟು ಹಳೆಯದಾದ ಹುಣಸೂರು ಸೇತುವೆ ಶಿಥಿಲ, ನಿಷೇಧವಿದ್ದರೂ ಸಂಚರಿಸುವ ಭಾರಿ ವಾಹನಗಳು; ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಹುಣಸೂರು ಸೇತುವೆ
Follow us
ವಿವೇಕ ಬಿರಾದಾರ
|

Updated on: Jun 26, 2023 | 7:34 AM

ಮೈಸೂರು: ಜಿಲ್ಲೆಯ ಹುಣಸೂರು (Hunsur) ಪಟ್ಟಣದ ಲಕ್ಷ್ಮಣ ತೀರ್ಥ ನದಿಗೆ (Laxman Tirtha River) ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಶತಮಾನ ಪೂರೈಸಿದೆ. ಈ ಸೇತುವೆ ನಿರ್ವಹಣೆಯ ಕೊರತೆಯಿಂದ ಶಿಥಿಲಗೊಂಡಿದ್ದು, ಸೇತುವೆ ಮೇಲೆ ಭಾರಿ ವಾಹನಗಳ (Vehicles) ಸಂಚಾರಕ್ಕೆ ನಿಷೇಧವಿದೆ. ಶಿಥಿಲಾವಸ್ಥೆಯಲ್ಲಿರುವ ಸೇತುವೆ ವಾಹನ ಸವಾರರ ಜೀವಕ್ಕೆ ಅಪಾಯ ತಂದೊಡ್ಡುತ್ತಿದೆ. ಟಿಪ್ಪು ಸುಲ್ತಾನ್ ಕಾಲದಲ್ಲಿ ಸುಣ್ಣದ ಗಾರೆ ಮತ್ತು ಇಟ್ಟಿಗೆಗಳನ್ನು ಬಳಸಿ ಸೇತುವೆಯನ್ನು ನಿರ್ಮಿಸಲಾಯಿತು. ಹುಣಸೂರು ನಗರ ಪುರಸಭೆ (CMC) ಅಧಿಕಾರಿಗಳು ಸೇತುವೆ ನಿರ್ವಹಣೆಯಲ್ಲಿ ವಿಫಲವಾಗಿದ್ದರಿಂದ ಹಲವೆಡೆ ಗಿಡಗಂಟಿಗಳು ಬೆಳದಿದ್ದು, ಕಳೆದ ನಾಲ್ಕು ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ ಎನ್ನುತ್ತಾರೆ ಸ್ಥಳೀಯರು.

ಸೇತುವೆ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವುದರಿಂದ ಬಹುತೇಕ ವಾಹನ ಸವಾರರು ಈಗಲೂ ಇದನ್ನು ಬಳಸುತ್ತಾರೆ. ಇತ್ತೀಚಿನವರೆಗೂ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆ ಕಡೆಗೆ ಹೋಗುವ ವಾಹನಗಳು ಈ ಸೇತುವೆಯ ಮೇಲೆಯೇ ಹೋಗುತ್ತವೆ. ಆದರೆ ಬೈಪಾಸ್ ರಸ್ತೆ ನಿರ್ಮಾಣದ ನಂತರ ಸೇತುವೆ ಮೇಲೆ ಲಘು ಮೋಟಾರು ವಾಹನಗಳಿಗೆ ನಿರ್ಬಂಧಿಸಲಾಗಿದೆ. ಹನಗೋಡು, ಪಂಚವಳ್ಳಿ, ನೇರಳಕುಪ್ಪೆ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಗೆ ತೆರಳುವ ಗ್ರಾಮಸ್ಥರು ಇಂದಿಗೂ ಈ ಹಳೆಯ ಸೇತುವೆಯ ಮೂಲಕ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ.

ಇದನ್ನೂ ಓದಿ: MSIL Recruitment 2023: ಮೈಸೂರು ಸೇಲ್ಸ್ ಲಿಮಿಟೆಡ್​ನಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸೇತುವೆಯ ಪ್ರವೇಶ ಮತ್ತು ನಿರ್ಗಮನ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕುವ ಮೂಲಕ ಭಾರಿ ವಾಹನಗಳ ಸಂಚಾರವನ್ನು ಅಧಿಕಾರಿಗಳು ನಿಷೇಧಿಸಲಾಗಿತ್ತು. ಇದೀಗ ಅವು ಮಾಯವಾಗಿದ್ದು, ಭಾರಿ ವಾಹನಗಳು ಮತ್ತೆ ಸಂಚರಿಸಲು ಆರಂಭಿಸಿವೆ. 50 ರಿಂದ 60 ಟನ್ ಸರಕುಗಳನ್ನು ಸಾಗಿಸುವ ನೂರಾರು ಟ್ರಕ್‌ಗಳು ಪೊಲೀಸರು ಅಥವಾ ಸಿಎಂಸಿ ಅಧಿಕಾರಿಗಳ ಯಾವುದೇ ತಪಾಸಣೆ ಇಲ್ಲದೆ ಸೇತುವೆಯ ಮೇಲೆ ಚಲಿಸುತ್ತವೆ.

ಸೇತುವೆ ಮೇಲೆ ಭಾರಿ ವಾಹನಗಳು ಸಂಚರಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಬ್ಯಾರಿಕೇಡ್‌ಗಳನ್ನು ಹಾಕಿ ತಡೆಯುತ್ತೇವೆ ಎಂದರು. ಹಳೆಯ ಸೇತುವೆಯಲ್ಲಿನ ಕಳೆ, ಗಿಡಗಂಟಿಗಳನ್ನು ತೆಗೆದು ಸಂರಕ್ಷಿಸುವುದಾಗಿ ಹುಣಸೂರು ಉಪವಿಭಾಗದ ಸಹಾಯಕ ಆಯುಕ್ತ ಎಸ್.ಎನ್.ಸುಜಯಕುಮಾರ್ ಭರವಸೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ