AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡೀಪುರ, ನಾಗರಹೊಳೆ ಸಫಾರಿ ಹೋಗೋರಿಗೆ ವಿಮಾ ಸೌಲಭ್ಯ: ಬರೋಬ್ಬರಿ 1 ಕೋಟಿ ರೂ. ಇನ್ಶೂರೆನ್ಸ್‌

ಬಂಡಿಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಸಂದರ್ಭದಲ್ಲಿ ಕಾಡು ಪ್ರಾಣಿಗಳ ದಾಳಿ ಸೇರಿದಂತೆ ಇತರೆ ಯಾವುದೇ ಅವಘಡದ ಸಂದರ್ಭಗಳಲ್ಲಿ ಪ್ರವಾಸಿಗರ ಜೀವ ಹಾನಿಯಾದರೆ ₹1 ಕೋಟಿ ವಿಮಾ ಮೊತ್ತ ಪ್ರವಾಸಿಗರ ಕುಟುಂಬದವರಿಗೆ ಸಿಗಲಿದೆ.

ಬಂಡೀಪುರ, ನಾಗರಹೊಳೆ ಸಫಾರಿ ಹೋಗೋರಿಗೆ ವಿಮಾ ಸೌಲಭ್ಯ: ಬರೋಬ್ಬರಿ 1 ಕೋಟಿ ರೂ. ಇನ್ಶೂರೆನ್ಸ್‌
ಬಂಡೀಪುರ ಸಫಾರಿ
ದಿಲೀಪ್​, ಚೌಡಹಳ್ಳಿ
| Edited By: |

Updated on:Oct 09, 2023 | 12:42 PM

Share

ಮೈಸೂರು, ಅ.08: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶ (Bandipur National Park) ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ (Nagarahole Tiger Reserve) ಅಧಿಕಾರಿಗಳು ಬಸ್ ಮತ್ತು ಜೀಪ್‌ಗಳಲ್ಲಿ ಹುಲಿ ಸಫಾರಿ ಸೇರಿದಂತೆ ಪರಿಸರ ಪ್ರವಾಸೋದ್ಯಮ ವಲಯಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮಾ ರಕ್ಷಣೆಯನ್ನು (Insurance) ವಿಸ್ತರಿಸಿದ್ದಾರೆ.

ಬಂಡಿಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಫಾರಿ ಸಂದರ್ಭದಲ್ಲಿ ಕಾಡು ಪ್ರಾಣಿಗಳ ದಾಳಿ ಸೇರಿದಂತೆ ಇತರೆ ಯಾವುದೇ ಅವಘಡದ ಸಂದರ್ಭಗಳಲ್ಲಿ ಪ್ರವಾಸಿಗರ ಜೀವ ಹಾನಿಯಾದರೆ ₹1 ಕೋಟಿ ವಿಮಾ ಮೊತ್ತ ಪ್ರವಾಸಿಗರ ಕುಟುಂಬದವರಿಗೆ ಸಿಗಲಿದೆ. ಈ ಯೋಜನೆಗೆ ಅರ್ಹರಾಗಲು ಯಾವುದೇ ನೋಂದಣಿ ಅಗತ್ಯವಿಲ್ಲ, ಸಫಾರಿಗೆ ಹೋಗಿರುವ ಟಿಕೆಟ್ ಇದ್ದರೆ ಸಾಕು. ಕಾಡಿನೊಳಗೆ ಪ್ರಾಣ ಹಾನಿ ಸಂಭವಿಸಿದರೆ ಆರ್ಥಿಕ ನೆರವು ಸಿಗಲಿದೆ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶ‌ಕ ರಮೇಶ್‌ಕುಮಾರ್ ಮಾಹಿತಿ ನೀಡಿದ್ದಾರೆ.

ಸಾರ್ವಜನಿಕ ಹೊಣೆಗಾರಿಕೆ ನಾನ್ ಇಂಡಸ್ಟ್ರಿಯಲ್ ಪಾಲಿಸಿಯ ಅಡಿಯಲ್ಲಿ ಈ ಯೋಜನೆ ಜಾರಿ ತರಲು ಉದ್ದೇಶಿಸಲಾಗಿದ್ದು, ಪ್ರವಾಸಿಗರು ಎದುರಿಸುವ ಯಾವುದೇ ಅಪಾಯ/ ಅಹಿತಕರ ಘಟನೆಗಳಿಗೆ 1 ಕೋಟಿ ರೂ. ವಿಮಾ ಮೊತ್ತ ನಿಗದಿಪಡಿಸಲಾಗಿದೆ. ಅರಣ್ಯ ಇಲಾಖೆ ಇದಕ್ಕಾಗಿ 80 ಸಾವಿರ ಪ್ರೀಮಿಯಮ್ ಹಣ ಕಟ್ಟಿದ್ದು, ಸುಮಾರು ಒಂದು ಕೋಟಿಯಷ್ಟು‌ ವಿಮೆ ಮಾಡಿಸಿದೆ. ಇದ್ರಿಂದ ಮುಂದೆ ಸಫಾರಿ ವೇಳೆ ಯಾರಿಗಾದ್ರು ಪ್ರಾಣ ಹಾನಿ ಸಂಭವಿಸಿದ್ರೆ ಅಂತವರಿಗೆ ತಲಾ 5 ಲಕ್ಷ ಪರಿಹಾರ ಕೊಡಲು ಮುಂದಾಗಿದೆ.‌ ಇನ್ನು ಒಂದು ವರ್ಷಗಳ ಕಾಲ ವಿಮೆ ಇರಲಿದೆ. ಬಂಡೀಪುರದ ಸಫಾರಿಗೆ ಪ್ರತಿ ವರ್ಷ 1.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬರುತ್ತಾರೆ. ಸಫಾರಿ ವೇಳೆ ಆನೆ, ಹುಲಿ ಚಿರತೆ ಹಾಗೂ ಕಾಡೆಮ್ಮೆಗಳು ಪ್ರವಾಸಿಗರ ವಾಹನದ ಮೇಲೆ ದಾಳಿ ಮಾಡುವ ಅಪಾಯ ಇರುತ್ತದೆ. ಹೀಗಾಗಿ ವಿಮೆ ಯೋಜನೆ ಜಾರಿಗೊಳಿಸಲಾಗಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಹುಲಿಗಳ ಸಂರಕ್ಷಣೆಗೆ ಮುಂದಾದ ಕರ್ನಾಟಕದ 4 ಆನೆಗಳು, ಸಾರಥ್ಯ ವಹಿಸಿದ ಮಣಿಕಂಠ ಆನೆ

ನಾಗರಹೊಳೆ ಅಧಿಕಾರಿಗಳು ವಾರ್ಷಿಕ 70,000 ರೂ. ಪ್ರೀಮಿಯಂ ಪಾವತಿಸಿದ್ದರೆ, ಬಂಡೀಪುರ ಅಧಿಕಾರಿಗಳು CGST ಮತ್ತು SGST ಹೊರತುಪಡಿಸಿ 80,000 ರೂ. ಪಾವತಿಸುತ್ತಾರೆ. ಎರಡೂ ಹುಲಿ ಸಂರಕ್ಷಿತ ಪ್ರದೇಶಗಳ ನಿರ್ದೇಶಕರ ಪ್ರಕಾರ, ಸಂರಕ್ಷಿತ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರು ಎದುರಿಸುವ ಅಪಾಯವನ್ನು ಸರಿದೂಗಿಸಲು ಆಡಳಿತ ಮಂಡಳಿಗಳು ವಿಮಾ ಪಾಲಿಸಿಗಳನ್ನು ಖರೀದಿಸಿದವು. ಮೀಸಲು ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರು ಎದುರಿಸುವ ಯಾವುದೇ ಅಪಾಯ ಮತ್ತು ಅಹಿತಕರ ಘಟನೆಗಳಿಗೆ ನಾವು ವಿಮೆ ಮಾಡಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ಹಿಂದೆಯೇ ಪ್ರಧಾನಿ ಮೋದಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್‌ ಪುಷ್ಕರ್‌ ಅವರು ಜಿಲ್ಲೆಯ ಬಂಡೀಪುರ, ಬಿಆರ್‌ಟಿ ಸೇರಿದಂತೆ ರಾಜ್ಯದ ಎಲ್ಲ ಐದು ಹುಲಿಸಂರಕ್ಷಿತ ಪ್ರದೇಶದ ನಿರ್ದೇಶಕರು, ರಕ್ಷಿತಾರಣ್ಯಗಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಇದೇ ಜೂನ್‌ 22ರಂದು ಪತ್ರ ಬರೆದು ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸುವಂತೆ ಸೂಚಿಸಿದ್ದರು. ಜಿಲ್ಲೆಯ ಬಿಆರ್‌ಟಿ ಹುಲಿ ಯೋಜನೆ ಪ್ರದೇಶದಲ್ಲೂ ಈ ಯೋಜನೆ ಜಾರಿಗೆ ಬರುತ್ತಿದ್ದು, ಕೊನೆಯ ಹಂತದ ಪ್ರಕ್ರಿಯೆ ನಡೆಯುತ್ತಿದೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 3:40 pm, Sun, 8 October 23

ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಕಡಲೆ ಕಳ್ಳನಿಗೆ ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗಾ ಥಳಿತ!
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ