‘ಹುಣಸೂರಿನಲ್ಲಿ ವಿಶ್ವನಾಥ್ ಸೋತರೆ ಜಗತ್ತು ಮುಳುಗಿಹೋಗುತ್ತಾ?’
ಮೈಸೂರು: ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಸೋತರೆ ಜಗತ್ತು ಮುಳುಗೋಗುತ್ತಾ? ಸಿದ್ದರಾಮಯ್ಯ ಎಷ್ಟು ಸಲ ತೊಡೆ ತಟ್ಟಿ ಬಿದ್ದೋಗಿಲ್ಲ ಹೇಳಿ? ಎಂದು ಉಪಚುನಾವಣೆ ಫಲಿತಾಂಶಕ್ಕೂ ಮುನ್ನ ವಿಶ್ವನಾಥ್ ಸೋಲಿನ ಬಗ್ಗೆ ಸಂಸದ ಶ್ರೀನಿವಾಸ್ ಪ್ರಸಾದ್ ಸುಳಿವು ನೀಡಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ವಿಶ್ವನಾಥ್ ಸೋತರೆ ಏನೂ ಪರಿಣಾಮ ಬೀರುವುದಿಲ್ಲ. ನಾಳಿನ ಫಲಿತಾಂಶ ಎಲ್ಲರೂ ಕಾಯುತ್ತಿದ್ದಾರೆ. ಇದು ಜನತೆಗೆ ಬಿಟ್ಟ ವಿಚಾರ. ಅನರ್ಹರ ಬಗ್ಗೆ ಜನರ ಮನಸ್ಥಿತಿ ಏನಿದೆ ಅಂತ ನಾಳೆ ಗೊತ್ತಾಗಲಿದೆ. ಸರ್ಕಾರ ಸ್ಥಿರವಾಗಿದೆ ನಾಳೆ ಹೆಚ್ಚು ಸ್ಥಾನಗಳಲ್ಲಿ ಗೆದ್ದು […]
ಮೈಸೂರು: ಬಿಜೆಪಿ ಅಭ್ಯರ್ಥಿ ಹೆಚ್.ವಿಶ್ವನಾಥ್ ಸೋತರೆ ಜಗತ್ತು ಮುಳುಗೋಗುತ್ತಾ? ಸಿದ್ದರಾಮಯ್ಯ ಎಷ್ಟು ಸಲ ತೊಡೆ ತಟ್ಟಿ ಬಿದ್ದೋಗಿಲ್ಲ ಹೇಳಿ? ಎಂದು ಉಪಚುನಾವಣೆ ಫಲಿತಾಂಶಕ್ಕೂ ಮುನ್ನ ವಿಶ್ವನಾಥ್ ಸೋಲಿನ ಬಗ್ಗೆ ಸಂಸದ ಶ್ರೀನಿವಾಸ್ ಪ್ರಸಾದ್ ಸುಳಿವು ನೀಡಿದ್ದಾರೆ.
ಹುಣಸೂರು ಕ್ಷೇತ್ರದಲ್ಲಿ ವಿಶ್ವನಾಥ್ ಸೋತರೆ ಏನೂ ಪರಿಣಾಮ ಬೀರುವುದಿಲ್ಲ. ನಾಳಿನ ಫಲಿತಾಂಶ ಎಲ್ಲರೂ ಕಾಯುತ್ತಿದ್ದಾರೆ. ಇದು ಜನತೆಗೆ ಬಿಟ್ಟ ವಿಚಾರ. ಅನರ್ಹರ ಬಗ್ಗೆ ಜನರ ಮನಸ್ಥಿತಿ ಏನಿದೆ ಅಂತ ನಾಳೆ ಗೊತ್ತಾಗಲಿದೆ. ಸರ್ಕಾರ ಸ್ಥಿರವಾಗಿದೆ ನಾಳೆ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಬಿಜೆಪಿ ಸರ್ಕಾರ ಮತ್ತಷ್ಟು ಸ್ಥಿರ ಆಗಲಿದೆ ಎಂದರು.
ಸೋಲುವವರ ಬಗ್ಗೆ ಈಗ ಮಾತನಾಡುವುದು ಬೇಡ. ಗೆದ್ದವರೆಲ್ಲರಿಗೂ ಮಂತ್ರಿಭಾಗ್ಯ ನೀಡಲಾಗುತ್ತೆ ಅಂತ ಸ್ವತಃ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಅನರ್ಹರಿಗೆ ಕೊಟ್ಟ ಭರವಸೆಯನ್ನು ಬಿಜೆಪಿ ಈಡೇರಿಸಲಿದೆ ಎಂದು ಶ್ರೀನಿವಾಸ್ ಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.