ಮೈಸೂರು: ಮಕ್ಕಳಲ್ಲಿ ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಕಾರ್ಯಕ್ರಮ; ವಿಜಯ ವಿಠ್ಠಲ ಶಾಲೆಯಲ್ಲಿ ವಿನೂತನ ಪ್ರಯತ್ನ

ಸಮವಸ್ತ್ರ ಹೊರತುಪಡಿಸಿ ಒಂದೇ ಬಣ್ಣದ ಬಟ್ಟೆ ಹಾಕಲು ಅವಕಾಶ ನೀಡಲಾಗಿದೆ. ಒಂದನೇ ತರಗತಿಗೆ ಕೆಂಪು ಬಟ್ಟೆ ಇರಲಿದ್ದು, ಮಕ್ಕಳು ಕೆಂಪು ಬಣ್ಣದ ಹಣ್ಣು ಮತ್ತು ತರಕಾರಿ ತರಬೇಕು. ಉದಾಹರಣೆಗೆ ದಾಳಿಂಬೆ, ಸೇಬು, ಬೀಟರೂಟ್.

ಮೈಸೂರು: ಮಕ್ಕಳಲ್ಲಿ ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಕಾರ್ಯಕ್ರಮ; ವಿಜಯ ವಿಠ್ಠಲ ಶಾಲೆಯಲ್ಲಿ ವಿನೂತನ ಪ್ರಯತ್ನ
ಒಂದನೇ ತರಗತಿಗೆ ಕೆಂಪು ಬಟ್ಟೆ
Follow us
TV9 Web
| Updated By: preethi shettigar

Updated on: Nov 13, 2021 | 3:01 PM

ಮೈಸೂರು: ಮಕ್ಕಳಲ್ಲಿ ಪೌಷ್ಟಿಕಾಂಶದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೈಸೂರಿನ ವಿಜಯ ವಿಠ್ಠಲ ಶಾಲೆಯಲ್ಲಿ ವಿನೂತನ ಪ್ರಯತ್ನ ಕೈಗೊಳ್ಳಲಾಗಿದೆ. ತಿಂಗಳಲ್ಲಿ ಒಂದು ದಿನ ಕಲರ್ಸ್ ಡೇ ಆಚರಿಸಲು ನಿರ್ಧರಿಸಲಾಗಿದೆ. ಅಲ್ಲದೇ ನೋ ಬ್ಯಾಗ್ ಡೇ ಆಚರಣೆ ಕೂಡ ಆಚರಿಸಲಾಗುತ್ತಿದೆ. ಮಕ್ಕಳು ಶಾಲಾ ದಿನಗಳನ್ನು ಕೂಡ ಹೆಚ್ಚು ಉತ್ಸಾಹದಿಂದ ಕಳೆಯಲು ವಿಜಯ ವಿಠ್ಠಲ ಶಾಲೆಯಲ್ಲಿ (School) ಈ ನೂತನ ಕಾರ್ಯಕ್ರಮವನ್ನು ಆಚರಿಸಲು ನಿರ್ಧರಿಲಾಗಿದೆ.

ಬಟ್ಟೆಗೆ ಸಮನಾದ ಹಣ್ಣು ಮತ್ತು ತರಕಾರಿ ಒಂದರಿಂದ ನಾಲ್ಕನೇ ತರಗತಿ ಮಕ್ಕಳಿಗೆ ಪ್ರತಿ ತಿಂಗಳು ಎರಡನೇ ಶನಿವಾರ ಕಲರ್ಸ್ ಡೇ ಆಚರಿಸಲಾಗುತ್ತದೆ. ಸಮವಸ್ತ್ರ ಹೊರತುಪಡಿಸಿ ಒಂದೇ ಬಣ್ಣದ ಬಟ್ಟೆ ಹಾಕಲು ಅವಕಾಶ ನೀಡಲಾಗಿದೆ. ಒಂದನೇ ತರಗತಿಗೆ ಕೆಂಪು ಬಟ್ಟೆ ಇರಲಿದ್ದು, ಮಕ್ಕಳು ಕೆಂಪು ಬಣ್ಣದ ಹಣ್ಣು ಮತ್ತು ತರಕಾರಿ ತರಬೇಕು. ಉದಾಹರಣೆಗೆ ದಾಳಿಂಬೆ, ಸೇಬು, ಬೀಟರೂಟ್.

ಎರಡನೇ ತರಗತಿ ಮಕ್ಕಳು ಕೇಸರಿ ಬಣ್ಣದ ವಸ್ತ್ರ ಧರಿಸಬೇಕು. ಕಿತ್ತಳೆ, ಪಪ್ಪಾಯ ಮತ್ತು ಕ್ಯಾರೆಟ್ ತರಬೇಕು. ಮೂರನೇ ತರಗತಿಗೆ ಕೆಂಪು ಮತ್ತು ಹಳದಿ ಬಣ್ಣ ಇರಲಿದ್ದು, ಬಾಳೆಹಣ್ಣು, ಅನಾನಾಸ್ ಸೇರಿ ಹಲವು ಹಣ್ಣುಗಳನ್ನು ತರಬೇಕು. ನಾಲ್ಕನೇ ತರಗತಿಗೆ ಬ್ಲೂ ಬಣ್ಣ ಇರಲಿದೆ. ದ್ರಾಕ್ಷಿ, ಮೊಳಕೆ ಕಾಳು ಸೇರಿ ಹಲವು ಆಹಾರ ಪದಾರ್ಥಗಳನ್ನು ತರಬೇಕು. ಈ ಮೂಲಕ ಮಕ್ಕಳಲ್ಲಿ ಹಣ್ಣು ತರಕಾರಿ ಕಾಳುಗಳ ಬಗ್ಗೆ ಅರಿವು ಮೂಡಿಸಲು ನಿರ್ಧರಿಸಲಾಗಿದೆ.

ನೋ ಬ್ಯಾಗ್ ಡೇ ಪುಸ್ತಕ ಇಲ್ಲದೆ ಶಾಲೆಗೆ ಬರುವ ಮಕ್ಕಳಿಗೆ, ಪಾಠದ ಬದಲು ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಲಾಗುತ್ತದೆ. ಹಾಡು ಹೇಳುವುದು, ಕಥೆ ಹೇಳುವುದು, ಪೇಪರ್‌ನಲ್ಲಿ ಬೋಟ್ ತಯಾರಿಕೆ, ಹೂವುಗಳ ತಯಾರಿಕೆ ಸೇರಿ ಹಲವು ಚಟುವಟಿಕೆ ಇರಲಿದೆ.

ಇದನ್ನೂ ಓದಿ: ಚಿತ್ರದುರ್ಗ ಹೊಳಲ್ಕೆರೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ!

ಸರ್ಕಾರಿ ಶಾಲೆಗೆ ಆಕರ್ಷಕ ರೈಲು ಬಂಡಿ ಪೇಂಟಿಂಗ್; ಮಕ್ಕಳನ್ನು ಶಾಲೆಗೆ ಕರೆತರಲು ವಿನೂತನ ಪ್ರಯತ್ನ