ನಂಜುಂಡಸ್ವಾಮಿ, ಪ.ಮಲ್ಲೇಶ್‌ ಸಹವಾಸ ಇಲ್ಲದಿದ್ರೆ ನಾನು ರಾಜಕೀಯಕ್ಕೆ ಬರ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ

ಮೈಸೂರಿನ ರಾಮಕೃಷ್ಣನಗರದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಹಿರಿಯ ಪ್ರಗತಿಪರ ಚಿಂತಕ ದಿವಂಗತ ಪ.ಮಲ್ಲೇಶ್‌ರವರು ರಚಿಸಿದ್ದ ಬುದ್ಧ ನಾಗಾರ್ಜುನರ ಶೂನ್ಯಯಾನ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಂಜುಂಡಸ್ವಾಮಿ, ಪ.ಮಲ್ಲೇಶ್‌ರಿಂದ ರಾಜಕೀಯದ ಬಗ್ಗೆ ಆಸಕ್ತಿ ಬಂತು. ಇವರ ಸಹವಾಸ ಇಲ್ಲದಿದ್ದರೆ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದು ಹೇಳಿದ್ದಾರೆ.

ನಂಜುಂಡಸ್ವಾಮಿ, ಪ.ಮಲ್ಲೇಶ್‌ ಸಹವಾಸ ಇಲ್ಲದಿದ್ರೆ ನಾನು ರಾಜಕೀಯಕ್ಕೆ ಬರ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದೆರಾಮಯ್ಯ
Updated By: ಗಂಗಾಧರ​ ಬ. ಸಾಬೋಜಿ

Updated on: Nov 18, 2023 | 5:08 PM

ಮೈಸೂರು, ನವೆಂಬರ್​​​ 18: ನಂಜುಂಡಸ್ವಾಮಿ, ಪ.ಮಲ್ಲೇಶ್‌ರಿಂದ ರಾಜಕೀಯದ ಬಗ್ಗೆ ಆಸಕ್ತಿ ಬಂತು. ಇವರ ಸಹವಾಸ ಇಲ್ಲದಿದ್ದರೆ ನಾನು ರಾಜಕೀಯಕ್ಕೆ ಬರುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಮೈಸೂರಿನ ರಾಮಕೃಷ್ಣನಗರದಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಹಿರಿಯ ಪ್ರಗತಿಪರ ಚಿಂತಕ ದಿವಂಗತ ಪ.ಮಲ್ಲೇಶ್‌ರವರು ರಚಿಸಿದ್ದ ಬುದ್ಧ ನಾಗಾರ್ಜುನರ ಶೂನ್ಯಯಾನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಲೇಜು ದಿನಗಳಿಂದಲೂ‌ ಮಲ್ಲೇಶ್ ಜೊತೆ ನನಗೆ ಹೆಚ್ಚಿನ ಒಡನಾಟವಿತ್ತು. ರಾಜಕೀಯವಾಗಿಯೂ ನಮ್ಮಿಬ್ಬರದೂ ಆತ್ಮೀಯ ಸಂಬಂಧವಿತ್ತು ಎಂದಿದ್ದಾರೆ.

ಹಿರಿಯ ಪ್ರಗತಿಪರ ಚಿಂತಕ ದಿವಂಗತ ಪ.ಮಲ್ಲೇಶ್‌ ಅಪ್ಪಟ ಸಮಾಜವಾದಿ. ಬರೆಯುವ ಸಾಮರ್ಥ್ಯವಿದ್ರೂ ಹೆಚ್ಚಿನ ಸಮಯ ಹೋರಾಟಕ್ಕೆ ಮೀಸಲಿಟ್ಟರು. ಅವರು ಮನಸ್ಸು ಮಾಡಿದ್ದರೆ ಹಲವಾರು ಕೃತಿಗಳನ್ನು ಬರೆಯಬಹುದಿತ್ತು. ತಪ್ಪು ಮಾಡುತ್ತಿದ್ದೀಯಾ ಎಂದು ಹೇಳುವ ಎದೆಗಾರಿಕೆ ಮಲ್ಲೇಶ್ ಅವರಿಗಿತ್ತು. ಒಮ್ಮೆ ಊಟಕ್ಕೆ ಕರೆದು ಜಗಳವಾಡಿದ್ದರು, ಇದಾದ ಮರುದಿನವೇ ಮಾತಾಡಿದ್ದರು. ಅನ್ಯಾಯದ ವಿರುದ್ಧದ ಹೋರಾಟದಲ್ಲಿ ಮಲ್ಲೇಶ್ ಮುಂಚೂಣಿಯಲ್ಲಿರುತ್ತಿದ್ದರು ಎಂದು ಮಲ್ಲೇಶ್ ಜೊತೆ ನಡೆಸಿದ ಹೋರಾಟದ ದಿನಗಳನ್ನು ಸಿಎಂ ಮೆಲುಕು ಹಾಕಿದ್ದಾರೆ.

ತುರ್ತ ಪರಿಸ್ಥಿತಿ ವಿರೋಧಿಸಿ ಹೋರಾಟದ ನೆನಪು ಬಿಚ್ಚಿಟ್ಟ ಸಿದ್ದರಾಮಯ್ಯ

ತುರ್ತ ಪರಿಸ್ಥಿತಿ ವಿರೋಧಿಸಿ ಮೈಸೂರಿನಲ್ಲಿ ನಾನು ಪ್ರತಿಭಟನೆ ಮಾಡಿದ್ದೆ. ಇನ್ಸ್‌ಪೆಕ್ಟರ್‌ ಒಬ್ಬ ನನ್ನ ದರದರನೇ ಎಳೆದೊಯ್ದು ಠಾಣೆಯಲ್ಲಿಕೂರಿಸಿದ್ದ. ನಾನು ಜೈಲಿಗೆ ಹೋಗಬೇಕೆಂದು ವೀರಾವೇಷದಿಂದ ಹೋರಾಟಕ್ಕೆ ಹೋಗಿದ್ದೆ. ಈ ಗಿರಾಕಿಗಳು ನನ್ನ ಬೆಳಗ್ಗೆಯೇ ಪೊಲೀಸ್ ಠಾಣೆಯಿಂದ ಬಿಟ್ಟು ಕಳಿಸಿದ್ದರು ಎಂದರು.

ಇದನ್ನೂ ಓದಿ: ವರ್ಗಾವಣೆ ದಂಧೆ ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ ನಿವೃತ್ತಿ ಯಾವಾಗ: ಛಲವಾದಿ ನಾರಾಯಣಸ್ವಾಮಿ

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಚಿವ ಡಾ. ಹೆಚ್ ಸಿಹದೇವಪ್ಪ, ಮಾಜಿ ಶಾಸಕ ಡಾ. ಯತೀಂದ್ರ, ಪ ಮಲ್ಲೇಶ್ ಅವರ ಪುತ್ರಿ ಸವಿತಾ ಸೇರಿದಂತೆ ಇತರರು ಭಾಗಿಯಾಗಿದ್ದರು. ಕಾರ್ಯಕ್ರಮದ ಆರಂಭದಲ್ಲೇ ವಚನ ಗಾಯನ ಕೇಳುತ್ತಾ ಹಾಗೆಯೇ ಸಿಎಂ ಸಿದ್ದರಾಮಯ್ಯ ನಿದ್ದೆಗೆ ಜಾರಿದ್ದಾರೆ.

ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ: ಸಿಎಂ

ನಾವು ದ್ವೇಷದ ರಾಜಕಾರಣ ಮಾಡುವುದಿಲ್ಲ. ವಿವೇಕಾನಂದ ಅನ್ನೋರು ಮೈಸೂರು ಬಿಇಒ. ಈಗ ವರ್ಗಾವಣೆ ಆಗಿರುವ ವಿವೇಕಾನಂದ ಪೊಲೀಸ್ ಅಧಿಕಾರಿ. ವಿವಿ ಪುರಂಗೆ ಪೊಲೀಸ್ ಇನ್ಸ್​ಪೆಕ್ಟರ್ ವರ್ಗಾವಣೆ ಆಗಿದ್ದಾರೆ. ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಸುಖಾಸುಮ್ಮನೆ ಆರೋಪ ಮಾಡಿದ್ದಾರೆ. ಈ ಇಬ್ಬರೂ ವಿವೇಕಾನಂದಗಳಿಗೆ ಸಂಬಂಧವೇ ಇಲ್ಲ. ವಿಪಕ್ಷಗಳು ಹತಾಶವಾಗಿ ನಮ್ಮ ವಿರುದ್ಧ ಆರೋಪ ಮಾಡುತ್ತಿವೆ ಎಂದಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿ ಹೇಳಿದ ವಿವೇಕಾನಂದರೇ ಬೇರೆ, ವರ್ಗಾವಣೆಯಾದ ವಿವೇಕಾನಂದರೇ ಬೇರೆ: ಸಿದ್ದರಾಮಯ್ಯ ಸ್ಪಷ್ಟನೆ

ಕುಮಾರಸ್ವಾಮಿ ಹೊಟ್ಟೆಕಿಚ್ಚು, ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್​ ಈ ಹಿಂದೆ 38 ಸೀಟ್ ಗೆದ್ದಿತ್ತು. ಈಗ 19ಕ್ಕೆ ಇಳಿದಿದೆ. ಸರ್ಕಾರದ ಬಗ್ಗೆ ಪೆನ್​ ಡ್ರೈವ್ ಇದೆ ಎಂದಿದ್ದರು. ಆದಾದ ಬಳಿಕ ಅಧಿವೇಶನದಲ್ಲಿ ಪೆನ್​ಡ್ರೈವ್ ಬಗ್ಗೆ ಮಾತಾಡಬಹುದಿತ್ತು. ಕುಮಾರಸ್ವಾಮಿ ಪೆನ್​ಡ್ರೈವ್ ಬಗ್ಗೆ ಯಾಕೆ ಮಾತನಾಡಲಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.