ಯೂ ರಿಸೈನ್ ಅಂಡ್ ಗೆಟೌಟ್, ನೀವು ಹತಾಶರಾಗಿದ್ದೀರಿ: ತಮ್ಮ ವಿರುದ್ಧ ಏಕವಚನ ಬಳಸಿದ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಆಗ್ರಹ

ಸಿದ್ದರಾಮಯ್ಯ ಕಾಲದಲ್ಲೂ ಕೊಲೆಗಳಾಗಿದ್ದವು ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಗ ಕೊಲೆ ಆಯ್ತು ಈಗಲೂ ಕೊಲೆಯಾಗಿದೆ ಎನ್ನುವುದು ಯಾವುದಕ್ಕಾದರೂ ಸಮರ್ಥನೆ ಆಗಬಹುದೇ ಎಂದು ಪ್ರಶ್ನಿಸಿದರು.

ಯೂ ರಿಸೈನ್ ಅಂಡ್ ಗೆಟೌಟ್, ನೀವು ಹತಾಶರಾಗಿದ್ದೀರಿ: ತಮ್ಮ ವಿರುದ್ಧ ಏಕವಚನ ಬಳಸಿದ ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಆಗ್ರಹ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jul 29, 2022 | 2:21 PM

ಮೈಸೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಒತ್ತಡ ನಿಭಾಯಿಸಲು ಆಗುತ್ತಿಲ್ಲ. ಹೀಗಾಗಿಯೇ ನನ್ನ ಬಗ್ಗೆ ಏಕವಚನ ಬಳಸಿದ್ದಾರೆ. ಸರ್ಕಾರ ನಡೆಸಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೋಗಲಿ’ ಎಂದು ತಮ್ಮ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಏಕವಚನ ಬಳಸಿರುವ ಕುರಿತು ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಕಾಂಗ್ರೆಸ್ ಅವಧಿಯಲ್ಲಿ ಪ್ರಕರಣ ಹಿಂಪಡೆದಿರುವ ಕುರಿತು ಕಂದಾಯ ಸಚಿವ ಆರ್.ಅಶೋಕ್ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ವಿದ್ಯಾರ್ಥಿಗಳ ಪ್ರಕರಣವನ್ನು ವಾಪಸ್​ ಪಡೆದಿದ್ದೆ. ಎಲ್ಲ ಪಕ್ಷದವರೂ ಅದಕ್ಕೆ ಒಪ್ಪಿದ್ದರು. ಅದಕ್ಕೂ-ಇದಕ್ಕೂ ಏನು ಸಂಬಂಧ? ಎಸ್​ಡಿಪಿಐ, ಪಿಎಫ್‌ಐ ಬಗ್ಗೆ ಸಾಕ್ಷಿ ಇದ್ದರೆ ಆ ಸಂಘಟನೆಗಳನ್ನು ನಿಷೇಧಿಸಲಿ ಎಂದು ಸವಾಲು ಹಾಕಿದರು.

ಪ್ರವೀಣ್ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಮಸೂದ್ ಮತ್ತು ಫಾಜಿಲ್ ಅವರ ಮನೆಗಳಿಗೆ ಹೋಗಿಲ್ಲ. ಕೊಲೆಯಾದ ಮುಸ್ಲಿಂ ಯುವಕರ ಮನೆಗಳಿಗೆ ಭೇಟಿ ನೀಡಲಿಲ್ಲ ಏಕೆ ಎಂದು ವಾಗ್ದಾಳಿ ನಡೆಸಿದರು. ಬಾದಾಮಿಯಲ್ಲಿಯೂ ಕೆಲ ಸಚಿವರು ಇದೇ ರೀತಿ ಮಾತನಾಡಿದರು. ಗಾಯವಾದ ತಮ್ಮ ಪಕ್ಷದವರನ್ನು ನೋಡಲು ಹೋಗುತ್ತಾರೆ. ಮುಸ್ಲಿಮರನ್ನು ನೋಡಲು ಹೋಗುವುದಿಲ್ಲ. ಇವರು ಸರ್ಕಾರ ನಡೆಸಲು ಯೋಗ್ಯರಾ? ಸರ್ಕಾರ ನಡೆಸಲು ಆಗದಿದ್ದರೆ ಬಿಟ್ಟು ಹೋಗಿ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಿದ್ದರೆ, ವಿರೋಧ ಪಕ್ಷದ ವಿಶ್ವಾಸದ ಮಾತು ಕೇಳದಿದ್ದರೆ ‘ರಿಸೈನ್ ಅಂಡ್ ಗೆಟ್ ಔಟ್’ ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಕಾಲದಲ್ಲೂ ಕೊಲೆಗಳಾಗಿದ್ದವು ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಆಗ ಕೊಲೆ ಆಯ್ತು ಈಗಲೂ ಕೊಲೆಯಾಗಿದೆ ಎನ್ನುವುದು ಯಾವುದಕ್ಕಾದರೂ ಸಮರ್ಥನೆ ಆಗಬಹುದೇ? ಕಾಂಗ್ರೆಸ್ ಪಕ್ಷವಿದ್ದರೆ ಕಲ್ಲು ಹೊಡೆಯಬಹುದಿತ್ತು ಎನ್ನುವುದು ಸಂಸದ ತೇಜಸ್ವಿ ಸೂರ್ಯ ನೀಡಿರುವ ಬೇಜವಾಬ್ದಾರಿ ಹೇಳಿಕೆ. ನಾವಿದ್ದರೆ ಕಲ್ಲು ಹೊಡೆಯಬೇಕು ಅಂತಾರೆ. ಇವರ ಸರ್ಕಾರಕ್ಕೆ ಕೊಳಕು ಮೊಟ್ಟೆ, …. ತೆಗೆದುಕೊಂಡು ಹೊಡೆಯಬೇಕು ಎಂದು ಕೆಂಡಾಮಂಡಲವಾದರು. ನಂತರ …. ಪದ ಬಳಸಿದ ಬಗ್ಗೆ ವಿಷಾದ ವ್ಯಕ್ತಪಡಿಸಿ, ಆ ಪದವನ್ನು ನಾನು ಹಿಂಪಡೆಯುತ್ತೇನೆ ಎಂದು ಕ್ಷಮೆ ಯಾಚಿಸಿದರು.

ಕರ್ನಾಟಕದಲ್ಲಿಯೂ ಉತ್ತರ ಪ್ರದೇಶ ಅಥವಾ ಬಿಹಾರ ಮಾದರಿಯಲ್ಲಿ ಬುಲ್​ಡೋಜರ್ ಬಳಕೆಯಾಗಬೇಕು ಎನ್ನುವ ಆಗ್ರಹ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕವೇನು ಬಿಹಾರ ಅಥವಾ ಉತ್ತರ ಪ್ರದೇಶದ ಸ್ಥಿತಿ ತಲುಪಿದೆಯೇ? ನಮ್ಮ ಸಿಎಂ ಒಪ್ಪಿಕೊಂಡ ರೀತಿ ಹೀಗಿದೆ. ಇವರ ಪ್ರಕಾರ ಇಲ್ಲಿಯೂ ಕಾನೂನು ಸುವ್ಯವಸ್ಥೆ ಸರಿಯಿಲ್ಲ. ನಮ್ಮ ರಾಜ್ಯವೂ ಉತ್ತರ ಪ್ರದೇಶ, ಬಿಹಾರದ ರೀತಿ ಆಗಿದೆ. ಹೀಗೆ ಹೋಲಿಸಲು ಇವರು ಅಧಿಕಾರಕ್ಕೆ ಬರಬೇಕಿತ್ತೇ ಎಂದು ಪ್ರಶ್ನಿಸಿದರು.

Published On - 2:20 pm, Fri, 29 July 22

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM