AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

SpaceXAIಗೆ ಜನ ಬೇಕಿದ್ದಾರೆ; ಎಐ ಪರಿಣತಿ ಬೇಕಿಲ್ಲವಂತೆ; ಇಲಾನ್ ಮಸ್ಕ್ ಬಯಸುತ್ತಿರೋದು ಎಂಥವರನ್ನು?

Elon Musk wants world class engineers and physicists for SpaceXAI: ಸ್ಪೇಸ್​ಎಕ್ಸ್​ನ ಎಐ ವಿಭಾಗವಾದ ಸ್ಪೇಸ್ಎಕ್ಸ್ಎಐನಲ್ಲಿ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಸಂಸ್ಥಾಪಕ ಇಲಾನ್ ಮಸ್ಕ್ ಅವರು ಎಕ್ಸ್​ನಲ್ಲಿ ಇದನ್ನು ಪ್ರಕಟಿಸಿದ್ದು, ವರ್ಲ್ಡ್ ಕ್ಲಾಸ್ ಎಂಜಿನಿಯರುಗಳು ಮತ್ತು ಫಿಸಿಸಿಸ್ಟ್​ಗಳು ಬೇಕಿದ್ದಾರೆ ಎಂದಿದ್ದಾರೆ. ಎಐ ಅನುಭವ ಇಲ್ಲದಿದ್ದರೂ ಪರವಾಗಿಲ್ಲ, ಆದರೆ, ಸ್ಮಾರ್ಟ್ ಜನರಾಗಿರಬೇಕು ಎಂಬುದು ಮಸ್ಕ್ ಅವರ ಷರತ್ತು.

SpaceXAIಗೆ ಜನ ಬೇಕಿದ್ದಾರೆ; ಎಐ ಪರಿಣತಿ ಬೇಕಿಲ್ಲವಂತೆ; ಇಲಾನ್ ಮಸ್ಕ್ ಬಯಸುತ್ತಿರೋದು ಎಂಥವರನ್ನು?
ಇಲಾನ್ ಮಸ್ಕ್Image Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 21, 2026 | 5:49 PM

Share

ವಾಷಿಂಗ್ಟನ್, ಮೇ 21: ಇಲಾನ್ ಮಸ್ಕ್ (Elon Musk) ಅವರು ತಮ್ಮ ಸ್ಪೇಸ್ ಎಕ್ಸ್ ಎಐ (SpaceXAI) ಸಂಸ್ಥೆಗೆ ಉದ್ಯೋಗಿಗಳ ಶೋಧ ನಡೆಸುತ್ತಿದ್ದಾರೆ. ತಮ್ಮ ಎಕ್ಸ್ ಅಕೌಂಟ್​ನಲ್ಲಿ ಹೈರಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಂತೆ ಇಮೇಲ್ ಐಡಿಯನ್ನೂ ಒದಗಿಸಿದ್ದಾರೆ. ಸ್ಪೇಸ್​ಎಕ್ಸ್ ಎಐ ಸಂಸ್ಥೆಗೆ ಸೇರಬಯಸುವವರು ಎಐನಲ್ಲಿ ಅನುಭವದ ಹಿನ್ನೆಲೆ ಇಲ್ಲದಿದ್ದರೂ ಆದೀತು, ಆದರೆ, ಸ್ಮಾರ್ಟ್ ಆಗಿರಬೇಕು. ವಿಶ್ವ ದರ್ಜೆಯ ಎಂಜಿನಿಯರುಗಳು, ವಿಜ್ಞಾನಿಗಳಾಗಿರಬೇಕಂತೆ.

‘ಸ್ಪೇಸ್​ಎಕ್ಸ್​ಎಐಗೆ ವಿಶ್ವದರ್ಜೆಯ ಎಂಜಿನಿಯರುಗಳು, ಫಿಸಿಸಿಸ್ಟ್​ಗಳನ್ನು (ಭೌತವಿಜ್ಞಾನಿಗಳು) ನೇಮಕಾತಿ ಮಾಡಲಾಗುತ್ತಿದೆ. ಅವರಿಗೆ ಎಐನಲ್ಲಿ ಯಾವುದೇ ಅನುಭವ ಇಲ್ಲದಿದ್ದರೂ ಆಗುತ್ತದೆ. ಸ್ಮಾರ್ಟ್ ವ್ಯಕ್ತಿಗಳು ಬೇಗ ಕಲಿತುಕೊಳ್ಳುತ್ತಾರೆ’ ಎಂದು ಇಲಾನ್ ಮಸ್ಕ್ ತಿಳಿಸಿದ್ದಾರೆ.

ಆಸಕ್ತ ಅಭ್ಯರ್ಥಿಗಳು ತಮ್ಮಲ್ಲಿ ಅಸಾಧಾರಣ ಸಾಮರ್ಥ್ಯವಿರುವುದನ್ನು ತೋರಿಸುವಂತಹ ಅಂಶಗಳನ್ನು 3 ಬುಲೆಟ್ ಪಾಯಿಂಟ್​ಗಳಲ್ಲಿ ಬರೆದು, ai_eng@spacex.com ಇಮೇಲ್ ವಿಳಾಸಕ್ಕೆ ಕಳುಹಿಸಬಹುದು. ಹಾಗೆಂದು ಮಸ್ಕ್ ತಿಳಿಸಿದ್ದಾರೆ.

ಇದನ್ನೂ ಓದಿ: ಫೋನ್ ಖರೀದಿಸಿ, ಇಎಂಐ ಕಟ್ಟೋಕಾಗ್ತಿಲ್ವಾ? ಸಾಲಗಾರರು ನಿಮ್ಮ ಫೋನ್ ಲಾಕ್ ಮಾಡಬಹುದಾ? ಆರ್​ಬಿಐ ಬಳಿ ಪ್ರಸ್ತಾಪ

ಎಲ್ಲಾ ಇಮೇಲ್​ಗಳನ್ನೂ ಮಸ್ಕ್ ನೋಡುತ್ತಾರಾ?

ಮತ್ತೊಂದು ಟ್ವೀಟ್​ನಲ್ಲಿ ಇಲಾನ್ ಮಸ್ಕ್ ಅವರು, ನೇಮಕಾತಿಗೆ ಕೋರಿ ಬರುವ ಎಲ್ಲಾ ಇಮೇಲ್​ಗಳನ್ನು ಖುದ್ದಾಗಿ ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

ಹಾಗೆಯೇ, ಸ್ಮಾರ್ಟ್ ಜನರು ಪ್ರಯೋಜನವೆನಿಸುವ ಬಹಳ ಸಂಕೀರ್ಣ ಇರುವ ಕೆಲಸವನ್ನು ಮಾಡಿದರೆ ಅವರಿಗೆ ಆದ್ಯತೆ ಸಿಗುವುದು ಎಂದೂ ಮಸ್ಕ್ ಹೇಳಿದ್ದಾರೆ.

ಇಲಾನ್ ಮಸ್ಕ್ ಅವರ ಟ್ವೀಟ್

ಎಕ್ಸ್​ಎಐ ಎಂಬುದು ಇಲಾನ್ ಮಸ್ಕ್ ಇತ್ತೀಚೆಗಷ್ಟೇ ಆರಂಭಿಸಿದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಂಪನಿ. ರಾಕೆಟ್, ಸ್ಪೇಸ್​ಶಿಪ್ ತಯಾರಿಸುವ ಸ್ಪೇಸ್​ಎಕ್ಸ್ ಜೊತೆಗೆ ಎಕ್ಸ್​ಎಐ ಅನ್ನು ಸೇರಿಸಲಾಗಿದೆ. ಇದು ಸ್ಪೇಸ್​ಎಕ್ಸ್​ನ ಎಐ ವಿಭಾಗವಾಗಿದ್ದು, ಸ್ಪೇಸ್​ಎಕ್ಸ್​ಎಐ ಎಂದು ಕರೆಯಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರಲ್ಲಿ ತರಕಾರಿ ಮಾರುವ ಹುಡುಗನ ತಲೆಯಲ್ಲಿ ಎಐ ಟೂಲ್; ಗಂಟೆಗೆ 350 ರೂ ಎಕ್ಸ್​ಟ್ರಾ ಇನ್ಕಮ್; ಬೆರಗಾದ ನೆಟ್ಟಿಗರು

ಸ್ಪೇಸ್​ಎಕ್ಸ್​ನ ಕೊಲೋಸಸ್ ಸೂಪರ್ ಕಂಪ್ಯೂಟರ್

ಸ್ಪೇಸ್ ಎಕ್ಸ್ ಸಂಸ್ಥೆ ಕೊಲೋಸಸ್ ಎನ್ನುವ ಬಹಳ ಶಕ್ತಿಶಾಲಿ ಸೂಪರ್ ಕಂಪ್ಯೂಟರ್ ನಿರ್ಮಿಸಿದೆ. ಇದು ವಿಶ್ವದ ಅತಿದೊಡ್ಡ ಎಐ ಸೂಪರ್ ಕಂಪ್ಯೂಟರ್​ಗಳ ಸಿಸ್ಟಂ ಆಗಿದೆ. ಎನ್​ವಿಡಿಯಾದ 2.2 ಲಕ್ಷಕ್ಕೂ ಅಧಿಕ ಜಿಪಿಯುಗಳನ್ನು ಬಳಸುತ್ತದೆ. ಎಐ ಕ್ಷೇತ್ರದಲ್ಲಿ ಸಂಚಲನ ಮೂಡಿಸಿರುವ ಆಂಥ್ರೋಪಿಕ್ ಸಂಸ್ಥೆಯು ಈ ಕೊಲೋಸಸ್ ಸಿಸ್ಟಂನ ಕಂಪ್ಯೂಟಿಂಗ್​ ಬಳಕೆಗಾಗಿ ಪ್ರತೀ ತಿಂಗಳು 1.25 ಬಿಲಿಯನ್ ಡಾಲರ್ (ಬರೋಬ್ಬರಿ 11,000 ಕೋಟಿ ರೂಗೂ ಅಧಿಕ) ಪಾವತಿ ಮಾಡುತ್ತದಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ