ಕೆ ಬಿ ಹೆಡ್ಗೆವಾರ್ ಭಾಷಣ ಯಥಾವತ್ ಹಾಕಬೇಕು. ರಾಷ್ಟ್ರಧ್ವಜದ ಬಗ್ಗೆ ಅವರಿಗೆ ಏನು ಅನಿಸಿಕೆ ಇತ್ತು? ಅಂತಾನೂ ಪಠ್ಯದಲ್ಲಿ ತಿಳಿಸಿ: ಪ್ರಿಯಾಂಕ್ ಖರ್ಗೆ ಆಗ್ರಹ
52 ವರ್ಷ ನಿಮ್ಮ ಕಚೇರಿಯಲ್ಲಿ ಯಾಕೆ ರಾಷ್ಟ್ರ ಧ್ವಜ ಹಾರಿಸಲಿಲ್ಲ? ಕೆ ಬಿ ಹೆಡ್ಗೆವಾರ್ ಭಾಷಣ ಯಥಾವತ್ ಹಾಕಬೇಕು. ರಾಷ್ಟ್ರ ಧ್ವಜದ ಬಗ್ಗೆ ಅವರಿಗೆ ಏನು ಅನಿಸಿಕೆ ಇತ್ತು? ಯಾಕೆ ನೀವು ಗಾಂಧಿ ಕೊಂದಿರಿ? ಕ್ಬಿಟ್ ಇಂಡಿಯಾ ಚಳುವಳಿ ನಡೆದಾಗ ನೀವು ಬಿಜೆಪಿಯವರು ಎಲ್ಲಿದ್ರಿ? ವೀರ್ ಸಾರ್ವರ್ಕರ್ ವೀರ್ ಅಂತ ಬಿರುದು ಕೊಟ್ಟಿದ್ದು ಯಾರು? ಇದೆಲ್ಲವನ್ನು ಪಠ್ಯ ಪುಸ್ತಕ ಮಾಡಿ.
ಮೈಸೂರು: ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಿಜೆಪಿ ಚಡ್ಡಿ ಸಂಗ್ರಹ ಅಭಿಯಾನದ ವಿರುದ್ಧ ಗುಡಗಿರುವ ಪ್ರಿಯಾಂಕ್, ಇದು ಬಿಜೆಪಿ ಅವರ ಅಟೆಂಷನ್ ಡೈವರ್ಟ್ ಮಾಡೋ ಆಟ. ಇದನ್ನು ಮೆಚ್ಚಬೇಕು. ಆರ್ ಎಸ್ ಎಸ್ ಚಡ್ಡಿ ಬಿಜೆಪಿ ಬುಡಕ್ಕೆ ಯಾಕೆ ಬೆಂಕಿ ಹತ್ತಿಸಿತೋ ಗೊತ್ತಿಲ್ಲ. ಬಿಜೆಪಿಯವರು ಹೆಚ್ಚು ರಿಯಾಕ್ಟ್ ಮಾಡುತ್ತಾ ಇದ್ದಾರೆ. ಆರ್ ಎಸ್ ಎಸ್ ಸಿದ್ದಾಂತವನ್ನು ಬೆಳಯಲಿಕ್ಕೆ ಬಿಡಲ್ಲ ಅಂತ ಸಂದೇಶ ಕಳುಹಿಸಲು ಚಡ್ಡಿ ಸುಟ್ಟಿದ್ದು. ಆದರೆ ಬಣ್ಣ ಬಣ್ಣದ ಚಡ್ಡಿ ಸಂಗ್ರಹ ಅಭಿಯಾನ ಮಾಡುತ್ತಾ ಇದ್ದಾರೆ. ಬಳಸಿರುವ ಬಣ್ಣದ ಚಡ್ಡಿ ಕಾಂಗ್ರೆಸ್ ಕಚೇರಿಗೆ ಕಳುಹಿಸುತ್ತಿದ್ದಾರೆ. ಆರ್ ಎಸ್ ಎಸ್ ಚಡ್ಡಿ ಅಂದರೆ ಅದು ಖಾಕಿ ಚೆಡ್ಡಿ. ಅದನ್ನು ನಿಮಗೆ ಕೊಡುತ್ತೇವೆ.. ಮೋದಿಗೆ ವಾಪಾಸ್ ಕಳುಹಿಸಿಕೊಡುತ್ತೇವೆ. ಚಡ್ಡಿ ಸಂಗ್ರಹ ಅಭಿಯಾನವನ್ನು ಎಸ್ ಸಿ/ ಎಸ್ ಟಿ ಮೋರ್ಚಾದವರಿಂದ ಮಾಡಿಸುತ್ತಾ ಇದ್ದಾರೆ. ಯಾಕೆ ಅದು ಎಸ್ ಸಿ / ಎಸ್ ಟಿ ಮೋರ್ಚಾದಿಂದಾನೆ ಮಾಡಿಸಬೇಕು? ಬಿಜೆಪಿ ಅಭಿಯಾನ ಯಾಕೆ ಮಾಡಲಿಲ್ಲ? ಬಳಸಿರುವ ಚಡ್ಡಿ ಮಲ ಹೊತ್ತಂಗೆ ಹೊತ್ತಕೊಂಡು ಹೋಗುತ್ತಿದ್ದಾರೆ. ಮನುಸ್ಮೃತಿ ಸಂಸ್ಕೃತಿ ಇನ್ನೂ ಹೋಗಿಲ್ಲ. ಬೊಮ್ಮಾಯಿಯಿಂದ ಹಿಡಿದು ಎಲ್ಲರೂ ಚಡ್ಡಿ ಸಂಗ್ರಹ ಅಭಿಯಾನ ಮಾಡಿ. ಎಸ್ ಸಿ /ಎಸ್ ಟಿ ಗೆ ಮಾತ್ರ ಸೀಮಿತ ಮಾಡಬೇಡಿ. ಸಂವಿಧಾನ ತಳ್ಳಾಕಿ ಬಳಸಿರುವ ಚಡ್ಡಿ ತಲೆ ಮೇಲೆ ಹಾಕ್ಕೊಂಡು ಓಡಾಡುತ್ತಾ ಇದೀರಾ ಎಂದು ಬಿಜೆಪಿ ವಿರುದ್ಧ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಪಠ್ಯ ಪುಸ್ತಕ ಪರಿಷ್ಕರಣೆ ವಿವಾದದ ಬಗ್ಗೆ ಮಾತನಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ ಎಸ್ ಬಗ್ಗೆ ಪ್ರತ್ಯೇಕ ಪುಸ್ತಕವನ್ನೆ ತಗೋ ಬನ್ನಿ ನಾವು ಬೇಡ ಅನ್ನುವುದಿಲ್ಲ. ಆದರೆ ಅದರಲ್ಲಿ ಸತ್ಯಾಂಶ ಹೇಳಬೇಕು. ಇತಿಹಾಸದಲ್ಲಿ ಏನಾಗಿದೆ ಅದನ್ನು ಹೇಳಿ. 52 ವರ್ಷ ನಿಮ್ಮ ಕಚೇರಿಯಲ್ಲಿ ಯಾಕೆ ರಾಷ್ಟ್ರ ಧ್ವಜ ಹಾರಿಸಲಿಲ್ಲ? ಕೆ ಬಿ ಹೆಡ್ಗೆವಾರ್ ಭಾಷಣ ಯಥಾವತ್ ಹಾಕಬೇಕು. ರಾಷ್ಟ್ರ ಧ್ವಜದ ಬಗ್ಗೆ ಅವರಿಗೆ ಏನು ಅನಿಸಿಕೆ ಇತ್ತು? ಯಾಕೆ ನೀವು ಗಾಂಧಿ ಕೊಂದಿರಿ? ಕ್ಬಿಟ್ ಇಂಡಿಯಾ ಚಳುವಳಿ ನಡೆದಾಗ ನೀವು ಬಿಜೆಪಿಯವರು ಎಲ್ಲಿದ್ರಿ? ವೀರ್ ಸಾರ್ವರ್ಕರ್ ವೀರ್ ಅಂತ ಬಿರುದು ಕೊಟ್ಟಿದ್ದು ಯಾರು? ಇದೆಲ್ಲವನ್ನು ಪಠ್ಯ ಪುಸ್ತಕ ಮಾಡಿ. ಆದರೆ ಸತ್ಯಾಂಶ ಇರಬೇಕು ಅಷ್ಟೇ. ಜನ ಆಮೇಲೆ ತೀರ್ಪು ಕೊಡಲಿ… ನಾವು ದೇಶ ದ್ರೋಹಿಗಳಾ, ನೀವು ದೇಶ ದ್ರೋಹಿಗಳಾ ಅಂತಾ ಎಂದು ತೀವ್ರ ವಾಗ್ದಾಳಿ ನಡೆಸಿದರು.
ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡಲು ಹೊರಟವರ ವಿರುದ್ಧ ಪ್ರತಿಭಟನೆ ಮಾಡಿದರೆ ಬಂಧಿಸುತ್ತೀರಾ? ಮತ್ತೆ ಮನುವಾದ ಕಡೆ ಹೋಗ್ತಾ ಇದ್ದೀರಾ! ಡಾ. ಬಾಬಾ ಸಾಹೇಬ ಅಂಬೇಡ್ಕರ್ ಸಂವಿಧಾನ ರಚನೆ ಮಾಡೇ ಇಲ್ಲ ಅಂತೀರಾ! ಬಸವಣ್ಣ, ಸಿದ್ದಗಂಗಾ ಶ್ರೀಗಳು, ತೀರ್ಥಂಕರ ವಿಚಾರ ಕಟ್ ಮಾಡುತ್ತೀರಾ. ಬಾಡಿಗೆ ಭಾಷಣಕಾರರ ಸೂಲಿಬೆಲೆ ಪಾಠ ನಾವು ಕಲಿಬೇಕಾ? ಸ್ವಯಂ ಘೋಷಿತ ತತ್ವಜ್ಞಾನಿಗಳು ಅವರು. ಯಾವ ಆಧಾರದ ಮೇಲೆ ಸಮಿತಿ ರಚನೆ ಆಗಿದೆ ಅನ್ನುವುದೇ ಗೊತ್ತಿಲ್ಲ. ಒಂದು ಕೋಟಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟ ಆಡುತ್ತಾ ಇದ್ದಾರೆ.
ಬೊಮ್ಮಾಯಿ ಹೀಗೆ ಇರಲಿಲ್ಲ, ಅವರನ್ನ ನಾನು ನೋಡಿದ್ದೇನೆ. ಖುರ್ಚಿ ಆಸೆಗೆ ಎಲ್ಲ ಬಿಟ್ಟು ಬಿಟ್ಟರೇ ಅವರು. ಕೂರು ಅಂದರೆ ಕೂರುತ್ತಾರೆ, ಹೋಗು ಅಂದರೆ ಹೋಗುತ್ತಾರೆ. ಮೊದಲು ಕಾಂಗ್ರೆಸ್ ನಾಯಕರ ವಿರುದ್ಧ ಮಾತಾನಾಡುವುದು ಬಿಡಿ, ಕೆಲಸ ಮಾಡಿ. ಜನ ನಿಮ್ಮ ಮುಖದ ಮೇಲೆ ಉಗೀತಾರೆ ಹೋಗಿ. ಕೋಮುವಾದದ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಾ ಇದ್ದಾರೆ. ಚಿಲ್ಲರೆ ರಾಜಕೀಯ ಬಿಟ್ಟು ವಿದ್ಯಾರ್ಥಿಗಳ ಭವಿಷ್ಯದತ್ತ ಗಮನ ಕೊಡಿ. ಮಕ್ಕಳಿಗೆ ಸಾಕ್ಸ್ ಶೂ ಪಠ್ಯಪುಸ್ತಕ, ಸಮವಸ್ತ್ರ ಇಲ್ಲ. ಅದರ ಬಗ್ಗೆ ಗಮನ ಕೊಡಿ ಸ್ವಾಮಿ. ಮಕ್ಕಳ ಭವಿಷ್ಯ ಹಾಳಾದರೆ ಅದನ್ನು ಸುಧಾರಣೆ ಮಾಡುವುದು ಕಷ್ಟ. ಹೊಸ ಪಠ್ಯ ಪುಸ್ತಕ ಬಿಟ್ಟು ಹಳೆಯ ಪಠ್ಯ ಕ್ರಮ ಮುಂದುವರೆಸಿ. ಸರಿಯಾದ ಸಮಿತಿ ರಚನೆ ಮಾಡಿ ಪರಿಷ್ಕರಣೆ ಮಾಡಿ ಎಂದು ಮೈಸೂರಿನಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಸಲಹೆ ನೀಡಿದ್ದಾರೆ.
Published On - 5:14 pm, Sat, 11 June 22