ಮೈಸೂರು, ಜು.20: ಪದವಿ ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ಬಳಿ ನೂರಾರು ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ(Protest) ಇಂದು ಕೂಡ ಮುಂದುವರೆದಿದೆ. ಸೋಮವಾರ ಜು.17 ರಂದು ಪ್ರತಿಭಟನೆ ನಡೆಸಿದ್ದ ಸ್ಟೂಡೆಂಟ್ಸ್, ಇಂದು ಕೂಡ ಮೈಸೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಎಐಡಿಎಸ್ಒ(AIDSO) ಸಂಘಟನೆಯ ಸಂಯುಕ್ತಾಶ್ರಯದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಹೌದು ವಿಧಾನಸಭೆ ಚುನಾವಣೆಗಾಗಿ ಕಾಲೇಜಿನ ಕಟ್ಟಡಗಳನ್ನು ಬಳಸಿಕೊಳ್ಳಲಾಗಿತ್ತು. ಹೀಗಾಗಿ ಪಾಠಗಳು ಸಮರ್ಪವಾಗಿ ನಡೆದಿಲ್ಲ. ಪದವಿ ಕಾಲೇಜುಗಳಲ್ಲಿ 4 ತಿಂಗಳು ಪಾಠ ಮಾಡಿ, ಪರೀಕ್ಷೆ ಮಾಡಬೇಕು. ಆದರೆ, ಕೇವಲ 2 ತಿಂಗಳು ಮಾತ್ರ ತರಗತಿಗಳು ನಡೆದಿವೆ. ಇದುವರೆಗೆ ಪಠ್ಯ ಕ್ರಮವೂ ಲಭ್ಯವಾಗಿಲ್ಲ. ಭಾನುವಾರ ಕೂಡ ಪರೀಕ್ಷೆಗಳನ್ನು ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ. ಕೇವಲ ಒಂದು ವಾರದಲ್ಲಿ ಎಲ್ಲಾ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಗ್ಲೋಬಲ್ ಸ್ಟೂಡೆಂಟ್ ಪ್ರೈಜ್ 2023 ರ ಟಾಪ್ 50 ಪಟ್ಟಿಯಲ್ಲಿ ಮಿಂಚಿದ ಐವರು ಭಾರತೀಯ ವಿದ್ಯಾರ್ಥಿಗಳು
ಸರಿಯಾಗಿ ಪಾಠ ಮಾಡದೇ ದಿಡೀರ್ ಪರೀಕ್ಷೆ ಇಟ್ಟಿರುವುದು ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿದೆ. ಹೀಗಾಗಿ ಪದವಿ ಪರೀಕ್ಷೆಯ ಮುಂದೂಡಿಕೆ ಬಗ್ಗೆ ಇಂದೇ ಸುತ್ತೋಲೆ ಹೊರಡಿಸುವಂತೆ ವಿದ್ಯಾರ್ಥಿಗಳು ಮೈಸೂರು ವಿಶ್ವ ವಿದ್ಯಾಲಯಕ್ಕೆ ಒತ್ತಾಯಿಸಿದ್ದಾರೆ. 4 ತಿಂಗಳು ಕಾಲ ಮಾಡುವ ಪಾಠವನ್ನ 2 ತಿಂಗಳಲ್ಲಿ ಮಾಡಿದ್ದು, ಅದನ್ನೂ ಕೂಡ ಸಮರ್ಪಕವಾಗಿ ಮಾಡಿಲ್ಲ. ನಮಗೆ ತಿಂಗಳುಗಳ ಕಾಲ ಸಮಯ ಬೇಡ, ಕೇವಲ 15 ದಿನಗಳ ಮಟ್ಟಿಗಾದರೂ ಸಮಯ ಕೊಡಿ ಎನ್ನುತ್ತಿದ್ದಾರೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ