ಮೈಸೂರು: ಗ್ರಾಮಕ್ಕೆ ನುಗ್ಗಿ ಒಂಟಿ ಸಲಗ ದಾಂಧಲೆ; ಆಸ್ತಿಪಾಸ್ತಿ ಹಾನಿ
Mysuru News: ಗ್ರಾಮದ ಬಳಿ ಬಾಳೆ ಬೆಳೆ ನಾಶ ಮಾಡಿ, ವಾಹನಗಳನ್ನು ಜಖಂಗೊಳಿಸಿದೆ. ಸಾರ್ವಜನಿಕರು ಈ ವೇಳೆ, ಆನೆಗೆ ಕಲ್ಲು ಹೊಡೆದು ಓಡಿಸಲು ಯತ್ನಿಸಿದ್ದಾರೆ. ಗುರುಪುರ ಟಿಬೆಟ್ ಕಾಲೋನಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ಗುರುಪುರದ ಟಿಬೆಟ್ ಕಾಲೋನಿಯಲ್ಲಿ ಒಂಟಿ ಸಲಗವೊಂದು ದಾಂಧಲೆ ಮಾಡಿದೆ. ಮನೆ ಗೋಡೆ, ಕಾಂಪೌಂಡ್ ಜಖಂಗೊಳಿಸಿದ ಸಲಗ ಆಸ್ತಿಪಾಸ್ತಿ ಹಾನಿಗೊಳಿಸಿದೆ. ಗ್ರಾಮದ ಬಳಿ ಬಾಳೆ ಬೆಳೆ ನಾಶ ಮಾಡಿ, ವಾಹನಗಳನ್ನು ಜಖಂಗೊಳಿಸಿದೆ. ಸಾರ್ವಜನಿಕರು ಈ ವೇಳೆ, ಆನೆಗೆ ಕಲ್ಲು ಹೊಡೆದು ಓಡಿಸಲು ಯತ್ನಿಸಿದ್ದಾರೆ. ಗುರುಪುರ ಟಿಬೆಟ್ ಕಾಲೋನಿಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಮೊನ್ನೆಯಷ್ಟೇ ನಡೆದ ಮಂಡ್ಯ, ಶ್ರೀರಂಗಪಟ್ಟಣ ದಸರಾ ಜಂಬೂಸವಾರಿ ವೇಳೆ ಆನೆ ಬೆದರಿತ್ತು. ಜನರ ಸದ್ದಿಗೆ ಆನೆ ಬೆದರಿತ್ತು. ದೇವರನ್ನು ಹೊತ್ತ ಆನೆ ಅಲ್ಲೇ ಒಂದು ಸುತ್ತು ಸುತ್ತಿತ್ತು. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ, ಜಂಬೂಸವಾರಿ ರದ್ದುಗೊಳಿಸಲಾಗಿತ್ತು.
ಇದನ್ನೂ ಓದಿ: Viral Video: ಉತ್ತರಾಖಂಡದಲ್ಲಿ ಪ್ರವಾಹದ ಮಧ್ಯೆ ಸಿಲುಕಿ ಪರದಾಡುತ್ತಿದ್ದ ಆನೆ; ರಕ್ಷಿಸಿದ ಅರಣ್ಯ ಅಧಿಕಾರಿಗಳು
ಇದನ್ನೂ ಓದಿ: Viral Video: ಮರಿ ಆನೆಯನ್ನು ರಕ್ಷಿಸಿ ತಾಯಿಯ ಬಳಿ ಸೇರಿಸಿದ ತಮಿಳುನಾಡು ರಕ್ಷಣಾ ಸಿಬ್ಬಂದಿ; ಹೃದಯಸ್ಪರ್ಶಿ ವಿಡಿಯೋವಿದು