ಮೈಸೂರು; ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಆನೆ ಸಾವು

| Updated By: ಆಯೇಷಾ ಬಾನು

Updated on: Aug 13, 2023 | 10:23 AM

ಇಬ್ಬರ ಸಾವಿಗೆ ಕಾರಣವಾಗಿದ್ದ ಸುಬ್ರಹ್ಮಣ್ಯ ಎಂಬ ಆನೆ ಆನೆಚೌಕೂರಿನ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಮೃತಪಟ್ಟಿದೆ. ಆರ್ಥರಿಟೀಸ್ ನಿಂದ ಬಳಲುತ್ತಿದ್ದ ಸುಬ್ರಹ್ಮಣ್ಯ ಸೋಂಕಿನಿಂದ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ವೇಳೆ ಮಾಹಿತಿ ಸಿಕ್ಕಿದೆ.

ಮೈಸೂರು; ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಬಹು ಅಂಗಾಂಗ ವೈಫಲ್ಯದಿಂದ ಆನೆ ಸಾವು
ಸುಬ್ರಹ್ಮಣ್ಯ
Follow us on

ಮೈಸೂರು, ಆ.13: ನಾಗರಹೊಳೆ(Nagarahole)  ಅರಣ್ಯ ಪ್ರದೇಶದ ಆನೆಚೌಕೂರಿನ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಪಳಗಿಸಲಾಗುತ್ತಿದ್ದ ಆನೆ ಮೃತಪಟ್ಟಿದೆ(Elephant Death). ಶಿಬಿರದ ಹೊರಗಡೆ ಪಳಗಿಸುವ ವೇಳೆ 50 ವರ್ಷದ ಸುಬ್ರಹ್ಮಣ್ಯ ಎಂಬ ಆನೆ ನಿತ್ರಾಣವಾಗಿ ಬಿದ್ದಿದೆ. ಈ ವೇಳೆ ತಕ್ಷಣ ಪಶು ವೈದ್ಯಾಧಿಕಾರಿಗಳು ಅಗತ್ಯ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದೆ. ಆರ್ಥರಿಟೀಸ್ ನಿಂದ ಬಳಲುತ್ತಿದ್ದ ಸುಬ್ರಹ್ಮಣ್ಯ ಸೋಂಕಿನಿಂದ ಮೃತಪಟ್ಟಿದೆ ಎಂದು ಮರಣೋತ್ತರ ಪರೀಕ್ಷೆ ವೇಳೆ ಮಾಹಿತಿ ಸಿಕ್ಕಿದೆ.

ಕಳೆದ ಮೂರು ತಿಂಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ವಲಯ ಅರಣ್ಯ ಪ್ರದೇಶದಲ್ಲಿ ಒಂದೇ ದಿನ ಇಬ್ಬರ ಸಾವಿಗೆ ಕಾರಣವಾಗಿದ್ದ ಕಾಡಾನೆಯನ್ನು ಸೆರೆ ಹಿಡಿದು ನಾಗರಹೊಳೆ ಉದ್ಯಾನವನದ ಮತ್ತಿಗೋಡು ವಲಯದ ಕಂಠಾಪುರ ಸಾಕಾನೆ ಶಿಬಿರಕ್ಕೆ ಕರೆತರಲಾಗಿತ್ತು. ಈ ಕಾಡಾನೆ ಸುಬ್ರಹ್ಮಣ್ಯ ವಲಯದಲ್ಲಿ ಸೆರೆ ಸಿಕ್ಕಿದ್ದರಿಂದಾಗಿ ಕಾಡಾನೆಗೆ ಸುಬ್ರಹ್ಮಣ್ಯನೆಂದು ಹೆಸರಿಡಲಾಗಿತ್ತು. ಬಳಿಕ ಜು.20ರಂದು ಕ್ರಾಲ್‌ನಿಂದ ಆನೆಯನ್ನು ಮುಕ್ತಗೊಳಿಸಿ ಮಾವುತ ಶಿವು, ಕವಾಡಿ ಚಂದ್ರ ಅವರ ಉಸ್ತುವಾರಿಯಲ್ಲಿ ತರಬೇತಿ ನೀಡಲಾಗುತ್ತಿತ್ತು.

ಇದನ್ನೂ ಓದಿ: Elephant Census: ಆನೆಗಳಿಗೂ ಬಂಡೀಪುರ ಅಂದ್ರೆ ಪಂಚಪ್ರಾಣ!

ಇನ್ನು ಆನೆ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಸುಬ್ರಹ್ಮಣ್ಯ ನಿನ್ನೆ ಅಂದರೆ ಆ.11ರ ಶುಕ್ರವಾರ ಅಸ್ಪಸ್ಥಗೊಂಡಿದ್ದು ನಾಗರಹೊಳೆ ಪಶುವೈದ್ಯ ಡಾ.ರಮೇಶ್ ಚಿಕಿತ್ಸೆ ನೀಡಿದ್ದಾರೆ. ಅಲ್ಲದೆ ಕ್ರೇನ್ ತರಿಸಿ ಆನೆಯನ್ನು ಎದ್ದು ನಿಲ್ಲಿಸುವ ಯತ್ನವೂ ನಡೆದಿದೆ. ಯಾವುದೇ ಪ್ರಯೋಜನವಾಗಿಲ್ಲ. ಆನೆ ಸುಬ್ರಹ್ಮಣ್ಯ ಯಾವುದೇ ಚಿಕಿತ್ಸೆಗೆ ಸ್ಪಂದಿಸಿಲ್ಲ. ಅಂದೇ ಸಂಜೆ ಆನೆ ಪ್ರಾಣಬಿಟ್ಟಿದ್ದು ಈ ಬಗ್ಗೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಸಾವು

ಆನೆಯು ಬಹು ಅಂಗಾಂಗ ವೈಫಲ್ಯ ಕಾಯಿಲೆ (ಆರ್ಥ್ರೈಟಿಸ್)ಯಿಂದ ಸೆಪ್ಟಿಸೀಮಿಯಾ (ಇನ್‌ಫೆಕ್ಷನ್)ನಿಂದ ಬಳಲಿ ಮೃತಪಟ್ಟಿರುವುದಾಗಿ ಪಶುವೈದ್ಯರ ತಂಡ ಮಾಹಿತಿ ನೀಡಿದೆ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಆನೆಯ ಶವವನ್ನು ಮಣ್ಣಲ್ಲಿ ಹೂತಿರುವುದಾಗಿ ಡಿಸಿಎಫ್ ತಿಳಿಸಿದರು.

ಜಮೀನಿನಲ್ಲಿ ಕಾಡಾನೆ ಸಾವು, 2 ದಿನದ ಬಳಿಕ ಘಟನೆ ಬೆಳಕಿಗೆ

ಇನ್ನು ಮತ್ತೊಂದೆಡೆ ಚಾಮರಾಜನಗರ ಜಿಲ್ಲೆಯ ಹನೂರು‌ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಗೋಪಿನಾಥಂ ಬಳಿ ಕಾಡಾನೆ ಸಾವನ್ನಪ್ಪಿದೆ. ಜಮೀನಿನಲ್ಲಿ ವಿದ್ಯುತ್ ಸ್ಪರ್ಶಿಸಿ ಕಾಡಾನೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಗ್ರಾಮದ ನಾಗರಾಜು,ಸೆಲ್ವಂ ಅವರ ಜಮೀನಿನಲ್ಲಿ ಘಟನೆ ನಡೆದಿದೆ. ಕಾಡಾನೆ ಸತ್ತು ಎರಡು ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದೆ. ನಿನ್ನೆ ಅರಣ್ಯ ಸಿಬ್ಬಂದಿ ಆನೆಯ ಮರಣೋತ್ತರ ಪರೀಕ್ಷೆ ನಡೆಸಿ, ಅಂತಿಮ ವಿಧಿ ವಿಧಾನ ನೇರವೇರಿಸಿದ್ದಾರೆ. ಆನೆಯ ಸಾವಿಗೆ ನಿಖರ ಮಾಹಿತಿ ತಿಳಿಯಲು ಮರಣೋತ್ತರ ಪರೀಕ್ಷೆ ವರದಿ ನಿರೀಕ್ಷಿಸಲಾಗುತ್ತಿದೆ.

ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:51 am, Sun, 13 August 23