ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ: ಅಯೂಬ್ ಖಾನ್​ಗೆ ಫೆ.25ರ ವರೆಗೆ ನ್ಯಾಯಾಂಗ ಬಂಧನ

| Updated By: ganapathi bhat

Updated on: Feb 12, 2022 | 9:49 PM

ಅಯೂಬ್ ಖಾನ್​ನನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಆರೋಪಿ ಬಂಧಿಸಿದ್ದಾರೆ. ಅಯೂಬ್​ನನ್ನು ಮೈಸೂರಿನ 2ನೇ ಜೆಎಂಎಫ್​ಸಿ ಕೋರ್ಟ್​ ಜಡ್ಜ್​​ ಶ್ರೀಶೈಲಾ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ, ಫೆಬ್ರವರಿ 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.

ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ: ಅಯೂಬ್ ಖಾನ್​ಗೆ ಫೆ.25ರ ವರೆಗೆ ನ್ಯಾಯಾಂಗ ಬಂಧನ
ನ್ಯೂ ಇಂಡಿಯನ್ ಕಾಂಗ್ರೆಸ್ ಪಾರ್ಟಿ ಅಧ್ಯಕ್ಷ ಆಯೂಬ್ ಖಾನ್
Follow us on

ಮೈಸೂರು: ಶ್ರವಣಬೆಳಗೊಳದ ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ನ್ಯೂ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್​ನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 25ರವರೆಗೆ ಅಯೂಬ್ ಖಾನ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಮೈಸೂರಿನ ಉದಯಗಿರಿ ಠಾಣೆ ಪೊಲೀಸರಿಂದ ಅಯೂಬ್ ವಶಕ್ಕೆ ಪಡೆದಿದ್ದಾರೆ. ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಅಯೂಬ್ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.

ಗೊಮ್ಮಟೇಶ್ವರನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ನ್ಯೂ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷನಾಗಿರುವ ಅಯೂಬ್ ಖಾನ್​ನನ್ನು ಮೈಸೂರಿನ ಉದಯಗಿರಿ ಠಾಣೆ ಪೊಲೀಸರು ಆರೋಪಿ ಬಂಧಿಸಿದ್ದಾರೆ. ಅಯೂಬ್​ನನ್ನು ಮೈಸೂರಿನ 2ನೇ ಜೆಎಂಎಫ್​ಸಿ ಕೋರ್ಟ್​ ಜಡ್ಜ್​​ ಶ್ರೀಶೈಲಾ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ, ಫೆಬ್ರವರಿ 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ.

ಇತರ ಅಪರಾಧ ಸುದ್ದಿಗಳು

ಯಾದಗಿರಿ: ಇಲ್ಲಿನ ಗುರುಮಠಕಲ್‌ನಿಂದ ರಾಜಸ್ಥಾನಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ 8.3 ಲಕ್ಷ ರೂಪಾಯಿ ಮೌಲ್ಯದ ತಲಾ 50 ಕೆಜಿಯ 750 ಚೀಲ ಪಡಿತರ ಅಕ್ಕಿ ಜಪ್ತಿ ಮಾಡಲಾಗಿದೆ. ಗೋಗಿ ಠಾಣೆ ಪೊಲೀಸರು, ಆಹಾರ ನಿರೀಕ್ಷಕರ ಜಂಟಿ ದಾಳಿ ವೇಳೆ ಘಟನೆ ನಡೆದಿದೆ.

ಯಾದಗಿರಿ: ಇಲ್ಲಿನ ಗುರುಮಠಕಲ್‌ ಪಟ್ಟಣದ ಲಕ್ಷ್ಮೀ‌ ನಗರದಲ್ಲಿ ಸಾಲಬಾಧೆ ತಾಳಲಾರದೆ ಕ್ರಿಮಿನಾಶಕ ಸೇವಿಸಿ ರೈತ ಪರಶುರಾಮ (40) ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ನಡೆದಿದೆ. 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಕೈಕೊಟ್ಟಿದ್ದಕ್ಕೆ 6 ಲಕ್ಷ ಸಾಲ ಮಾಡಿಕೊಂಡಿದ್ದ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೆಂಗಳೂರು: ಚಂದ್ರಾಲೇಔಟ್​ನ ವಿದ್ಯಾಸಾಗರ ಪಬ್ಲಿಕ್ ಸ್ಕೂಲ್​ ಪ್ರಕರಣ ಸಂಬಂಧ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರತಿಕ್ರಿಯೆ ನೀಡಿದ್ದಾರೆ. ವಿದ್ಯಾಸಾಗರ ಪಬ್ಲಿಕ್ ಶಾಲೆ ಬಳಿ ಯಾವುದೇ ಗಲಾಟೆ ಆಗಿಲ್ಲ. ಶಾಲೆಯ ಬಳಿ 30 ರಿಂದ 40 ಜನರು ಜಮಾವಣೆಗೊಂಡಿದ್ದರು. ಪಿಐ​ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದಾರೆ. ವಿದ್ಯಾಸಾಗರ ಪಬ್ಲಿಕ್ ಸ್ಕೂಲ್​ನಿಂದ ಮನವಿಪತ್ರ ಬಂದಿದೆ. ಯಾವುದೇ ಪ್ರಕರಣ ದಾಖಲಾಗಿಲ್ಲ, ವಿಚಾರಣೆ ಮಾಡುತ್ತೇವೆ. ಗೊಂದಲದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಲಾಗಿದೆ. ವಿದ್ಯಾಸಾಗರ ಪಬ್ಲಿಕ್ ಶಾಲೆ ಎಂದಿನಂತೆ ಕಾರ್ಯನಿರ್ವಹಿಸಿದೆ ಎಂದು ಕಮಲ್ ಪಂತ್ ಹೇಳಿದ್ದಾರೆ.

ಇದನ್ನೂ ಓದಿ: ಗೊಮ್ಮಟೇಶ್ವರ ಮೂರ್ತಿ ಬಗ್ಗೆ ಅವಹೇಳನಕಾರಿ ಹೇಳಿಕೆ: ಆಯೂಬ್ ಖಾನ್ ವಿರುದ್ಧ ಮೈಸೂರು, ಮಂಡ್ಯದಲ್ಲಿ ದೂರು ದಾಖಲಿಸಿದ ಜೈನ ಸಮಾಜ

ಇದನ್ನೂ ಓದಿ: ಗೋಮ್ಮಟೇಶ್ವರನ ಬಗ್ಗೆ ಅವಹೇಳನಾಕಾರಿ ಹೇಳಿಕೆ: ವಿಕೃತ ಮನಸಿನ ಮಾತು ಎಂದ ಭಟ್ಟಾರಕ ಸ್ವಾಮೀಜಿ