ಈ ಹಿಂದಿನ ಮುಜುಗರದಿಂದ ಎಚ್ಚೆತ್ತ ಅರಣ್ಯ ಇಲಾಖೆ; ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್
ಕಳೆದ ಬಾರಿ ಗರ್ಭಿಣಿ ಆನೆಯನ್ನ ತಾಲೀಮಿಗೆ ಬಳಸಿ ಅರಣ್ಯ ಇಲಾಖೆ ಮುಜುಗರಕ್ಕೆ ಒಳಗಾಗಿತ್ತು. ಹೀಗಾಗಿ ಈ ಬಾರಿ ಎಚ್ಚೆತ್ತ ಅರಣ್ಯ ಇಲಾಖೆ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ಮುಂದಾಗಿದೆ.
ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ(Mysuru Dasara) ತಯಾರಿ ಶುರುವಾಗಿದೆ. 2023ನೇ ಸಾಲಿನ ಮೈಸೂರು ದಸರಾ ಹಬ್ಬ ಅಕ್ಟೋಬರ್ನಲ್ಲಿ ನಡೆಯಲಿದೆ. ಹೀಗಾಗಿ ವಿಶ್ವ ವಿಖ್ಯಾತ ಹಬ್ಬಕ್ಕೆ ತಯಾರಿ ಆರಂಭವಾಗಿದೆ. ದಸರಾಗೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು(Elephant Pregnancy Test) ಅರಣ್ಯ ಇಲಾಖೆ ಮುಂದಾಗಿದೆ. ಕಳೆದ ಬಾರಿ ಗರ್ಭಿಣಿ ಆನೆಯನ್ನ ತಾಲೀಮಿಗೆ ಬಳಸಿ ಅರಣ್ಯ ಇಲಾಖೆ ಮುಜುಗರಕ್ಕೆ ಒಳಗಾಗಿತ್ತು. ಹೀಗಾಗಿ ಈ ಬಾರಿ ಎಚ್ಚೆತ್ತ ಅರಣ್ಯ ಇಲಾಖೆ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಲು ಮುಂದಾಗಿದೆ.
ಆನೆ ಕ್ಯಾಂಪ್ನಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಆದ ಬಳಿಕ ದಸರಾಗೆ ಹೆಣ್ಣಾನೆಗಳು ಆಗಮಿಸಲಿವೆ. ಕಳೆದ ಬಾರಿ ರಾಮಾಪುರ ಕ್ಯಾಂಪ್ ಆನೆ ಲಕ್ಷ್ಮೀ ಗಂಡು ಮರಿಗೆ ಜನ್ಮ ನೀಡಿತ್ತು. ಗರ್ಭಿಣಿ ಆನೆಯನ್ನ ತಾಲೀಮಿಗೆ ಬಳಸಿ ಇಲಾಖೆ ಮುಜುಗರಕ್ಕೆ ಒಳಗಾಗಿತ್ತು. ಸದ್ಯ ದಸರಾಗೆ ಆಗಮಿಸುವ ಅನೆಗಳ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ. ಈ ತಿಂಗಳಾಂತ್ಯಕ್ಕೆ ಆನೆಗಳ ಪಟ್ಟಿ ರೆಡಿಯಾಗಲಿದೆ. 14 ಆನೆಗಳನ್ನ ದಸರಾಗೆ ಕರೆತರಲು ಇಲಾಖೆ ಚಿಂತನೆ ನಡೆಸಿದೆ. ಈ ಬಾರಿ ಅರ್ಜುನ, ಗೋಪಾಲಸ್ವಾಮಿ ಆನೆಗಳು ದಸರಾದಲ್ಲಿ ಭಾಗಿಯಾಗುವುದಿಲ್ಲ. ಕಾಡಾನೆ ದಾಳಿಯಿಂದ ಗೋಪಾಲಸ್ವಾಮಿ ಆನೆ ಮೃತಪಟ್ಟಿದೆ. ಹಾಗೂ ಅರ್ಜುನ ಆನೆಗೆ ವಯಸ್ಸಾದ ಕಾರಣ ದಸರಾ ಹಬ್ಬದಿಂದ ಕೈಬಿಡಲಾಗಿದೆ. ಕ್ಯಾಂಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಈ ಬಾರಿ ದಸರಾ ಜಂಬೂಸವಾರಿ ನಡೆಯಲಿದೆ.
ಇದನ್ನೂ ಓದಿ: Elephant Balarama: 14 ಬಾರಿ ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಆನೆ ಬಲರಾಮ ಇನ್ನಿಲ್ಲ
ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ದಸರಾ ಆನೆ ಗೋಪಾಲಸ್ವಾಮಿ ಸಾವು
ಕಾಡಾನೆ ದಾಳಿಯಿಂದ ಗಾಯಗೊಂಡಿದ್ದ ದಸರಾ ಆನೆ ಗೋಪಾಲಸ್ವಾಮಿ(39) ಚಿಕಿತ್ಸೆ ಫಲಕಾರಿಯಾಗದೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮತ್ತಿಗೋಡು ಆನೆ ಶಿಬಿರದಲ್ಲಿ ನವೆಂಬರ್ 13ರಂದು ಕೊನೆಯುಸಿರೆಳೆದಿತ್ತು.
ಕಾಡಾನೆ ಸೆರೆ, ಪಳಗಿಸುವ ತರಬೇತಿ ಪಡೆದಿದ್ದ 39 ವರ್ಷದ ಗೋಪಾಲಸ್ವಾಮಿ, ಸೆರೆ ಹಿಡಿದಿದ್ದ ಆನೆ ಅಯ್ಯಪ್ಪ ಜೊತೆ ಕಾದಾಟದಲ್ಲಿ ಗಾಯಗೊಂಡಿತ್ತು. ಶಾಂತಸ್ವಾಭಾವದ ಆನೆಯಾಗಿದ್ದ ಗೋಪಾಲಸ್ವಾಮಿ, ಒಟ್ಟು 14 ಮೈಸೂರು ದಸರಾ ಮಹೋತ್ಸವದಲ್ಲಿ ಭಾಗಿಯಾಗಿತ್ತು. 2022ರಲ್ಲಿ ನಡೆದ ದಸರಾದಲ್ಲಿ ಮರದ ಅಂಬಾರಿ ಹೊತ್ತು ಗಮನ ಸೆಳೆದಿತ್ತು.
ಮೈಸೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:08 am, Wed, 19 July 23